4 ಲಕ್ಷ ಮೌಲ್ಯದ ಗಾಂಜಾ ವಶಪಡಿಸಿಕೊಂಡ ತಿಕೋಟಾ ಪೊಲೀಸರು

0
188
ಆರೋಪಿಯಿಂದ ಗಾಂಜಾ ವಶಪಡಿಸಿಕೊಂಡ ಪೊಲೀಸರು

ವಿಜಯಪುರ ಜುಲೈ 14: ಜಿಲ್ಲೆಯಲ್ಲಿ ದಿನೇ ದಿನೇ ಗಾಂಜಾ ಬೆಳೆಯುವ ಪ್ರಕರಣಗಳು ಹೆಚ್ಚಾಗುತ್ತಿದ್ದು, ಪೊಲೀಸ್‌ ಇಲಾಖೆ ಇಂತವರ ವಿರುದ್ದ ಪ್ರಕರಣ ದಾಖಲಿಸಿ ಜೈಲಿಗಟ್ಟಿದರೂ, ಗಾಂಜಾ ಬೆಳೆಯುವವರು ಮಾತ್ರ ತಮ್ಮ ಕುತಂತ್ರ ಬುದ್ದಿಯಿಂದ ಯಾರಿಗೂ ಗೋತ್ತಾಗದ ಹಾಗೆ ಹೊಲಗಳಲ್ಲಿ, ತೋಟದ ಬದುವಿನಲ್ಲಿ ಅಥವಾ ಬೆಳೆಗಳ ಮಧ್ಯ ಗಾಂಜಾ ಬೆಳೆಯುವ ಪ್ರಕರಣಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿದೆ. ಇಂತಹ ಪ್ರಕರಣ ಒಂದು ತಿಕೋಟಾ ಪೊಲೀಸ್ ಠಾಣಾ ವ್ಯಾಪ್ತಿಯ ಜಾಲಗೇರಿ ವಿಠ್ಠಲವಾಡಿ ನಡೆದಿರುತ್ತದೆ.

ಅಕ್ರಮವಾಗಿ ಗಾಂಜಾ ಬೆಳೆದ ಕಾಶಿನಾಥ ರಾಠೋಡ (40) ತನ್ನ ಜಮೀನಿನಲ್ಲಿ ಗಾಂಜಾ ಗಿಡಗಳನ್ನು ಬಿತ್ತಿ ಬೆಳೆದಿದ್ದಾನೆ. ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ಮಾಡಿ ಆರೋಪಿಯ ಜಮೀನದಲ್ಲಿ 58 ಕೆಜಿಯ ಅಂದಾಜು 4 ಲಕ್ಷ ರೂಪಾಯಿ ಗಾಂಜಾ ಗಿಡಗಳನ್ನು  ಪೊಲೀಸರು ವಶಪಡಿಸಿಕೊಂಡಿದ್ದಾರೆ.

ತಿಕೋಟಾ ಪೊಲೀಸ್ ಠಾಣಾ ಗುನ್ನಾ ನಂ 110/2021 ಕಲಂ 20(ಎ) ಎನ್.ಡಿ.ಪಿ.ಎಸ್. ಆ್ಯಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿದ್ದು ಇರುತ್ತದೆ. ಆರೋಪಿತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಕುಮಾರಿ ಅನೀತಾ ಎಸ್ ರಾಠೋಡ ಪಿ.ಎಸ್.ಐ, ಶ್ರೀಮತಿ ಎಸ್‍ಕೆ ಲಂಗೋಟಿ ಪಿಎಸ್, ತಿಕೋಟಾ ಪಿ.ಎಸ್. ಹಾಗು ಸಿಬ್ಬಂಧಿ ಎಮ್‍ಎಸ್ ಕಟ್ಟಿಮನಿ, ಆರ್,ಎಮ್,ಖಾನಾಪುರ ಎಮ್.ಬಿ ಜನಗೊಂಡ, ಎಲ್.ಎಸ್. ಹಿರೇಗೌಡ, ಆರ್.ಡಿ ಅಂಜುಟಗಿ, ಎಸ್ ಎನ್ ಹಿರೇಗೋಳ, ಸಲಿಂ ಸವದಿ, ಎಸ್.ಬಿ ಶಿವೂರ, ಬಿ,ಎಲ್ ವಾಡೆದ, ರಮೇಶ ಬಜಂತ್ರಿ ಹಾಗೂ ಸರಕಾರಿ ಪಂಚರು ಪ್ರಕರಣ ಬೇಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಎಸ್.ಪಿ. ಅನುಪಮ್ ಅಗ್ರವಾಲ್, ಡಾ|| ರಾಮ್,ಎಲ್ ಅರಸಿದ್ದಿ, ಹೆಚ್ಚುವರಿ ಪೊಲೀಸ ಅಧೀಕ್ಷಕರು ವಿಜಯಪುರ, ಪ್ರಕರಣ ಬೇಧಿಸುವಲ್ಲಿ ಯಶಸ್ವಿಯಾದ ಪೊಲೀಸ್‌ ತಂಡಕ್ಕೆ ಶ್ಲಾಘೀಸಿದ್ದಾರೆ.


LEAVE A REPLY

Please enter your comment!
Please enter your name here