ಮುದ್ದೇಬಿಹಾಳದಲ್ಲಿ ಅಕ್ರಮ ಗಾಂಜಾ ಬೆಳೆದ ರೈತನ ಬಂಧನ

0
207

ಮುದ್ದೇಬಿಹಾಳ ಜೂನ್‌ 17: ಮುದ್ದೇಬಿಹಾಳ ಪೊಲೀಸ್ ಠಾಣಾ ವ್ಯಾಪ್ತಿಯ ಹಳ್ಳೂರ ಗ್ರಾಮದ ರಾಮನಗೌಡ ಬಸರಕೋಡ (38)  ತನ್ನ ಜಮೀನಿನ ಬದುವಿನಲ್ಲಿ ಇರುವ ತೆಂಗಿನ ಮರಗಳ ಕೆಳಗೆ ಮಾರಾಟ ಮಾಡುವ ಉದ್ದೇಶದಿಂದಾ ಅಕ್ರಮ ಗಾಂಜಾ ಗಿಡಗಳನ್ನು ಬೆಳೆಸಿರುತ್ತಾನೆ.

ಆರೋಪಿ ಅಕ್ರಮವಾಗಿ ಬೆಳೆದ 16 ಹಸಿ ಗಾಂಜಾ ಗಿಡಗಳನ್ನು, 2 ರಿಂದಾ 5 ಅಡಿ ಎತ್ತರ ಬೆಳೆದಿದ್ದ ಗಿಡ್ಡಗಳನ್ನು ಜಪ್ತು ಮಾಡಿ ಅವುಗಳ ತೂಕ 9,800 ಗ್ರಾಂ ಆಗಿದ್ದು, ಹದಿನೈದು ಸಾವಿರ ರೂ ಬೆಲೆಯ ಗಾಂಜಾವನ್ನು  ಪೊಲೀಸರು ವಶಪಡಿಸಿಕೊಂಡಿದ್ದಾರೆ. ಮುದ್ದೇಬಿಹಾಳ ಪೊಲೀಸ್ ಠಾಣಾ ಗುನ್ನಾ ನಂಬರ 103/2021 ಕಲಂ:20 (A & B) NDPS Act-1985 ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡು, ಆರೋಪಿತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.


LEAVE A REPLY

Please enter your comment!
Please enter your name here