ನುಡಿಸದಿರು ನುಡಿಯದ ವೀಣೆ

0
95

ನುಡಿಸದಿರು ನುಡಿಯದ ವೀಣೆ


ನುಡಿಸದಿರು ನುಡಿಯದಿರುವ ವೀಣೆ
ನಿನ್ನಾಸೆಯ ಸ್ವರವು ವೀಣೆಯೊಳಿಲ್ಲ
ಇನ್ನೇಕೆ ಬೇಕು ನುಡಿಸುವ ಭ್ರಾಂತಿ
ಕಾಣದೇನು ಹರಿದು ಹೋದ ತಂತಿ!

ನೂರು ಕನಸು ಕಟ್ಟಬೇಡ
ಹುಚ್ಚ ಮನಸು ಬೆನ್ನ ಹತ್ತಬೇಡ….
ವೀಣೆಯೊಳಿಲ್ಲ ನಾದವು
ನುಡಿಸಬಲ್ಲೇನು ರಾಗವ

ನೊಂದ-ಬೆಂದ ಒಡಲಿಗೆ
ಬೇಕು ಮಧುರ ರಾಗವು
ರಾಗ ನುಡಿಯದ ವೀಣೆಯೊಳು
ಅನುರಾಗ ಲಯವು ಹೊಮ್ಮಿತೇನು!

ವೀಣೆ ನುಡಿದು-ನುಡಿದು ಜೀವವಿಲ್ಲ
ಜೀವವಿಲ್ಲದ ವೀಣೆ ನುಡಿಸಿ ದರಿದ್ರನಾಗಬೇಡ
ವೀಣೆ ಬಿಟ್ಟ ಮೇಲೆ ಏಳು
ಭ್ರಾಂತಿ ಕಳೆದು ಮನಕೆ ಮುಕ್ತಿ ದೊರಕೀತು


LEAVE A REPLY

Please enter your comment!
Please enter your name here