ಈ ಎರಡು ಮೂರ್ಖತನಗಳನ್ನು ತೊರೆದರೆ ಅಮೂಲ್ಯ ಪ್ರಾಣ ರಕ್ಷಣೆ ಮಾಡಿಕೊಳ್ಳಬಹುದು.

0
144
ಡಾ.ಮಲ್ಲಿಕಾರ್ಜುನ ಡಂಬಳ ಅಥರ್ವ ಆಯುರ್ವೇದ ಸಂಶೋಧನಾ ಸಂಸ್ಥೆ ಶಿವಮೊಗ್ಗ-ದಾವಣಗೆರೆ.

ಕೇವಲ ಈ ಎರಡು ಮೂರ್ಖತನಗಳನ್ನು ತೊರೆದರೆ ಅಮೂಲ್ಯ ಪ್ರಾಣ ರಕ್ಷಣೆ ಮಾಡಿಕೊಳ್ಳಬಹುದು. ಈ ಕಾರಣದಿಂದ
ಆಮ್ಲಜನಕ ಪೂರೈಸುವ ಅವಳಿ ಅವಯವಗಳಾದ ಪುಪ್ಪುಸಗಳೊಂದಿಗೆ ಹುಡುಗಾಟವಾಡುತ್ತಿದ್ದೇವೆ. ಚಿಕ್ಕ ಮಗುವಿಗೂ ಸರಳವಾಗಿ ಅರ್ಥವಾಗುವ ಕನಿಷ್ಟ ಪ್ರಜ್ಞೆಯ ಈ ವಿಷಯ ದೊಡ್ಡ ದೊಡ್ಡ ವೈದ್ಯ ಡಿಗ್ರಿ ಪಡೆದವರಿಗೂ ಅರ್ಥವಾಗದಿರುವುದು ಆಶ್ಚರ್ಯ…!!!

ಮೂರ್ಖತನ 1)
ಶರೀರದ ಎಲ್ಲಾರೀತಿಯ ಮೆಟಬಾಲಿಸಮ್ ಗೆ ಆಮ್ಲಜನಕ ಬೇಕೇ ಬೇಕು ಮತ್ತು ಅದನ್ನು ಪೂರೈಸಲು ಇರುವ ಅವಯವದ್ವಯಗಳೆಂದರೆ ನಮ್ಮ ಪುಪ್ಪುಸಗಳು.

ಮಾಂಸ, ಎಣ್ಣೆ ಕಲಸಿದ ಪದಾರ್ಥಗಳು, ಗೋಧಿ(ಚಪಾತಿ), ಮೈದಾ(ಬಿಸ್ಕೆಟ್, ಬ್ರಡ್), ಉದ್ದು(ದೋಸೆ, ಇಡ್ಲಿ) ಬಳಸಿ ತಯಾರಿಸುವ ಆಹಾರ ಸೇವಿಸಿದರೆ ಶರೀರದಲ್ಲಿ ಅದು ಶಕ್ತಿಯಾಗಿ ಬಿಡುಗಡೆಯಾಗಲು ಕನಿಷ್ಠಪಕ್ಷ ನಾಲ್ಕರಿಂದ ಹತ್ತುಪಟ್ಟು ಹೆಚ್ಚು ಆಮ್ಲಜನಕ ಬೇಕು.
ಇನ್ನು ನೆನೆಸಿ ಹುಳಿಬರಿಸಿದ ಹಿಟ್ಟಿನ ದೋಸೆ, ಇಡ್ಲಿ ತಿಂದರೆ ಇನ್ನೂ ದುಪ್ಪಟ್ಟು ಆಮ್ಲಜನಕ ಬೇಕು, ಏಕೆಂದರೆ ಅದು ಫರ್ಮಂಟೇಷನ್ ಆಗಿರುತ್ತದೆ.

ಗಮನಿಸಿ ನೋಡಿ-
ಮೇಲಿನ ಆಹಾರ ತಿಂದಾಗ ಮೆದುಳು ಮತ್ತು ಶರೀರ ಚುರುಕುತನ ಕಳೆದುಕೊಳ್ಳುವುದು ಸತ್ಯವಲ್ಲವೇ? ಅಂದರೆ ಮೆಟಬಾಲಿಸಮ್ ಗೇ ಹೆಚ್ಚು ಆಮ್ಲಜನಕ ಖರ್ಚಾಗಿ ಇಡೀ ಶರೀರ ಬಳಲುತ್ತದೆ, *”ತಕ್ಷಣ ರಕ್ತದ ಆಮ್ಲಜನಕ ಪ್ರಮಾಣ ಇಳಿದುಬಿಡುತ್ತದೆ. ಇದರ ಪ್ರಜ್ಞೆ ಇಲ್ಲದೇ “ಏನಾದರೂ ತಿನ್ನು” ಎಂದು ಬಾಲಿಶ ಹೇಳಿಕೆ ಕೊಟ್ಟು ಕಳಿಸುತ್ತಿರುವ ವೈದ್ಯರು!!

ಮೂರ್ಖತನ 2)
ನಮ್ಮ ಇಮ್ಯೂನಿಟಿ ಹೆಚ್ಚಲು, ಶರೀರದ ಶಕ್ತಿ ಹೆಚ್ಚಲು ಸೋಂಕಿನ‌ ಈ ಅವಸ್ಥೆಯಲ್ಲಿ ಪ್ರಯತ್ನ ಪಡುವುದು ಎರಡನೇ ಬಹುದೊಡ್ಡ ಮೂರ್ಖತನ. ಕಳೆ ತೆಗೆಯದೇ ಬೆಳೆಗೆ ಗೊಬ್ಬರ-ನೀರು ಕೊಟ್ಟರೆ ಕಳೆ ಬೆಳೆಯುವುದೇ? ಬೆಳೆ ಬರುವುದೇ? ಎಂಬುದು ಏನೂ ಗೊತ್ತಿಲ್ಲದ ಹೆಡ್ಡನಿಗೂ ಅರ್ಥವಾಗುತ್ತದೆ.

ವೈರಾಣು ಸೋಂಕೆಂಬ ದೂರ್ತ ಕಳೆ ಬೆಳೆದು ನಮ್ಮ ಪ್ರಾಣ ನಾಶಕ್ಕೆ ಹೊಂಚುಹಾಕಿ ಕುಳಿತಿರುವಾಗ, ಒಳ್ಳೆಯ ಪ್ರೋಟೀನ್, ಫ್ಯಾಟ್ ಕೊಟ್ಟು ಅದನ್ನು ಬೆಳೆಸುತ್ತಿರುವುದು ಮಹಾ ಮೂರ್ಖತನವಲ್ಲದೇ ಮತ್ತೇನು?
••••••••••
ಕೊರೋನಾ ವೈರಾಣು ತನ್ನ ದಪ್ಪನಾದ ಪೊರೆಯಲ್ಲಿ ಪ್ರೋಟೀನ್ ಮತ್ತು ಫ್ಯಾಟ್ ಇಟ್ಟುಕೊಂಡಿದೆ.
ಶಕ್ತಿ ಬರಲೆಂಬ ಹೆಸರಿನಿಂದ ನಾವು ತಿನ್ನುವ ಪ್ರೋಟೀನ್, ಕೊಬ್ಬಿನ ಆಹಾರ ಅಥವಾ ಪ್ರಮಾಣಾಧಿಕ ಆಹಾರ ವೈರಾಣುವಿನ ಪೊರೆಯನ್ನು ಇನ್ನಷ್ಟು ಬಲಗೊಳಿಸಿ ಅದನ್ನು ಸಂರಕ್ಷಿಸುತ್ತದೆ..

••••••

ಈಗ ನಾವು ಹೇಳಿದ ಈ ಎರಡೂ ಮೂರ್ಖತನಗಳಿಗೆ ಪುರಾವೆ ಬೇಕೆಂದರೆ, ನಿಮ್ಮ ಸುತ್ತಮುತ್ತ ಪ್ರಾಣ ಕಳೆದುಕೊಂಡ ಯುವ ಜನರ ಜೀವನವನ್ನೊಮ್ಮೆ ಗಮನಿಸಿ ಸಾಕು, ಅವರು ತಮ್ಮ‌ ಜೀವಮಾನದಲ್ಲಿಯೂ ಮತ್ತು ಈ ಸೋಂಕಿನ ಅವಸ್ಥೆಯಲ್ಲೂ-

√ ಹೆಚ್ಚು ಹೆಚ್ಚು ವಗ್ಗರಣೆ ಕಲಸಿದ ಚಿತ್ರಾನ್ನ, ಪುಳಿಯೊಗರೆ, ಫ್ತೈಡ್ ರೈಸ್, ಎಗ್ ರೈಸ್ ಮುಂತಾದವುಗಳನ್ನು ಸೇವಿಸಿರುತ್ತಾರೆ. ಅಥವಾ

√ ಪದೇಪದೇ ಕರಿದ ಪದಾರ್ಥಗಳು, ಹೆಚ್ಚು ಪ್ರೋಟೀನ್ ಇರುವ, ಗೋಧಿ‌ ಪದಾರ್ಥ, ಮೈದಾದಿಂದ ತಯಾರಿಸಿದ ಬೇಕರಿ ಪದಾರ್ಥಗಳ ಭೋಕ್ತರಾಗಿರುತ್ತಾರೆ. ಅಥವಾ

√ ರಾತ್ರಿ ನೆನೆಸಿ ಹುಳಿಬರಿಸಿದ ಇಡ್ಲಿ, ದೋಸೆ, ಪಡ್ಡುಗಳನ್ನು ನಿತ್ಯವೂ ತಿನ್ನುತ್ತಿರುತ್ತಾರೆ. ಅಥವಾ

√ ಅಗತ್ಯಕ್ಕಿಂತ ಅತಿ ಪ್ರಮಾಣದ ಆಹಾರ ಸೇವಿಸುತ್ತಿರುತ್ತಾರೆ. ಇವರುಗಳೇ, ಸೋಂಕಿನ ತೀವ್ರತೆಗೆ ಸಾಯುತ್ತಿರುವುದು ಕಣ್ಮುಂದೆ ನಡೆಯುತ್ತಿರುವ ಸತ್ಯ.

ಪರಿಹಾರ ಏನು?:
ಪ್ರತಿಬಾರಿಯೂ ತಾಜಾ ಆಗಿ ತಯಾರಿಸಿದ-
“ಮೆತ್ತಗೆ ಬೇಯಿಸಿದ ಅನ್ನ” ಮತ್ತು ಮೆತ್ತಗೆ ಬೇಯಿಸಿದ ಸ್ವಲ್ಪವೇ ಬೇಳೆ ಮತ್ತು ಬೇಯಿಸಿದ ಹೆಚ್ಚು ಪ್ರಮಾಣದ ತರಕಾರಿ (ಆಲೂ-ಗೆಣಸು-ಹಲಸು ಇಂತಹ ಪ್ರೋಟೀನ್ ಇರುವ ಕಾರಣ ಗ್ಯಾಸ್ ಉಂಟುಮಾಡುವ ತರಕಾರಿಗಳನ್ನು ಹೊರತುಪಡಿಸಿ) ಬೆರೆಸಿ ತಯಾರಿಸಿದ ಸಂಬಾರು ಮಾತ್ರ ಸೇವಿಸಿ” ಇದು, ಸಧ್ಯಕ್ಕೆ ಅತ್ಯಗತ್ಯವಾದ ಮತ್ತು ಹೆಚ್ವು ಆಮ್ಲಜನಕ ಕೇಳದೇ ನಮಗೆ ಶಕ್ತಿ ಕೊಡುವ ಕಾರಣ ಮತ್ತು ಸೋಂಕಿಗೆ ಆಹಾರ ಕೊಡದ ಕಾರಣ- ನಾವು ಸೋಂಕಿಗೆ ಒಳಗಾಗುವುದಿಲ್ಲ ಅಥವಾ ಸೋಂಕುಂಟಾದರೂ ಸಹ ಸುರಕ್ಷಿತವಾಗಿ ಮತ್ತು ಶೀಘ್ರವಾಗಿ ಗುಣಮುಖರಾಗುತ್ತೇವೆ.
•••••••••

ಆಯುರ್ವೇದ ಹೇಳುತ್ತದೆ, ಶರೀರದ ಒಳಗೆ ಸರಿಯಾಗಿ ಪಾಕವಾಗದ (ಮೆಟಬಾಲೈಸ್ ಆಗದ) ಆಹಾರ ಜೀವಕೋಶಗಳನ್ನು ದುರ್ಬಲಗೊಳಿಸುತ್ತದೆ ಮತ್ತು ಸರ್ವ ಸೋಂಕಿಗೆ ಆಹಾರವನ್ನು ಒದಗಿಸುತ್ತದೆ. ಇದನ್ನೇ “ಆಮವಿಷ” ಎಂದು ಕರೆದಿದ್ದಾರೆ ಆಚಾರ್ಯರು.

“ವಿಷ” ಎಂದರೆ ಶೇ ನೂರರಷ್ಟೂ ಹಾನಿಯುಂಟುಮಾಡುವ ಪದಾರ್ಥ ಮತ್ತು ಅದು ಆಹಾರ ಪ್ರಕ್ರಿಯೆಲ್ಲಿ ಉಂಟಾಗುವ ಕಾರಣ “ಆಮವಿಷ” ಎಂದು ಕರೆಯಲಾಗಿದೆ. ಈ ವಿಷದಿಂದ ಮುಕ್ತರಾಗೋಣ ಮತ್ತು ಆರೋಗ್ಯದಿಂದ ಇರೋಣ.

ತಮ್ಮವ
ಡಾ.ಮಲ್ಲಿಕಾರ್ಜುನ ಡಂಬಳ
ಅಥರ್ವ ಆಯುರ್ವೇದ ಸಂಶೋಧನಾ ಸಂಸ್ಥೆ
ಶಿವಮೊಗ್ಗ-ದಾವಣಗೆರೆ.


LEAVE A REPLY

Please enter your comment!
Please enter your name here