ಬೆಂಗಳೂರು ಮಾ14: ಅಶ್ಲೀಲ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತ ಯುವತಿಗೆ ಕಬ್ಬನ್ ಪಾರ್ಕ್ ಠಾಣೆ ಪೊಲೀಸರು ನೋಟೀಸ್ ಜಾರಿ ಮಾಡಿ, ತನಿಖಾಧಿಕಾರಿ ಮುಂದೆ ಹಾಜರಾಗುವಂತೆ ತಿಳಿಸಿದ್ದಾರೆ.
ಸಿಡಿ ಪ್ರಕರಣ ಸಂಬಂಧ ರಮೇಶ್ ಜಾರಕಿಹೊಳಿ ನಿನ್ನೆ ದೂರು ದಾಖಲಿಸಿದ್ದರು. ಕಳೆದ 10 ದಿನಗಳಿಂದ ನಾಪತ್ತೆಯಾಗಿದ್ದ ಯುವತಿ ಪ್ರತ್ಯಕ್ಷವಾಗಿದ್ದು, ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದಳು. ತನಗೆ ಹಾಗೂ ತನ್ನ ಕುಟುಂಬಕ್ಕೆ ಜೀವ ಬೆದರಿಕೆಯಿದೆ. ರಕ್ಷಣೆ ನೀಡುವಂತೆ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರಿಗೆ ಮನವಿ ಮಾಡಿದ್ದಳು. ಸೂಕ್ತ ಭದ್ರತೆ ನೀಡುವಂತೆ ಗೃಹ ಸಚಿವರು ಎಸ್ ಐಟಿಗೆ ಸೂಚನೆ ನೀಡಿದ್ದಾರೆ.
ಯುವತಿ ಇದ್ದ ಪಿಜಿ, ಮನೆಯ ಮಾಲೀಕ ಹಾಗೂ ಯುವತಿಯ ಸ್ನೇಹಿತರಿಗೂ ನೋಟೀಸ್ ಜಾರಿ ಮಾಡಿ ವಿಚಾರಣೆಗೆ ಹಾಜರಾಗುವಂತೆ ಯುವತಿಗೆ ತಿಳಿಸುವಂತೆ ಸೂಚಿಸಿದ್ದಾರೆ. ಯುವತಿ ವಿಜಯಪುರ ಜಿಲ್ಲೆ ಬಸವನಬಾಗೆವಾಡಿ ತಾಲೂಕಿನ ಮೂಲದವಳು ಎಂದು ಪತ್ತೆ ಮಾಡಲಾಗಿದ್ದು ಅಲ್ಲಿಗೂ ನೋಟೀಸ್ ಜಾರಿಗೊಳಿಸಲಾಗಿದೆ.