ಸಮಸ್ಯೆ ಇದೆ ಎಂದು ದೂರ ಸರಿಯುವ ಪ್ರವೃತ್ತಿ ಮಹಿಳೆಗೆ ಇರಬಾರದು: ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶ್ರೀಮತಿ ಸುಜಾತಾ ಕಳ್ಳಿಮನಿ

0
193

ವಿಜಯಪುರ ಮಾ.12: ಮಹಿಳೆ ಇಂದು ತನ್ನ ಸುತ್ತಮುತ್ತಲಿರುವ ಸಮಸ್ಯೆಗಳನ್ನು ಎದುರಿಸಿ ಮೆಟ್ಟಿ ನಿಲ್ಲಬೇಕಾಗಿದೆ ಸಮಸ್ಯೆ ಇದೆ ಎಂದು ದೂರ ಸರಿಯುವ ಪ್ರವೃತ್ತಿ ನಮಗೆ ಇರಬಾರದು ಎಂದು ರಹೀಮ್ ನಗರದ ಪಾಂಡುರಂಗ ದೇವಸ್ಥಾನದಲ್ಲಿ ಹಿಂದೂ ನಾಮದೇವ ಸಿಂಪಿ ಸಮಾಜದ ಮಹಿಳಾ ಮಂಡಳ ವತಿಯಿಂದ ವಿಶ್ವ ಮಹಿಳಾ ದಿನಾಚರಣೆ ಹಮ್ಮಿಕೊಂಡ ಕಾರ್ಯಕ್ರಮವನ್ನು ಉದ್ಘಾಟಿಸಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶ್ರೀಮತಿ ಸುಜಾತಾ ಕಳ್ಳಿಮನಿ ಮಾತನಾಡಿದರು.

ಮಹಿಳೆಯರ ತ್ಯಾಗ ಅಪಾರ ತನ್ನ ಕುಟುಂಬಕ್ಕಾಗಿ ದುಡಿಯುವ ಅವಳ ಶ್ರಮ ಬೆಲೆ ಕಟ್ಟಲು ಸಾಧ್ಯವಿಲ್ಲ. ಅವಳ ಶ್ರಮಕ್ಕೆ ಅವಳಿಗೆ ಸಮಾನವಾದ ಬದುಕು ಸಿಕ್ಕರೆ ಸಾಕು ಆಧುನಿಕ ಕಾಲದಲ್ಲಿ ಪುರುಷರಿಗೆ ಸೀಮಿತವಾಗಿದ್ದ ಹಲವಾರು ಭಾಗಗಳಲ್ಲಿ ಇಂದು ಮಹಿಳೆಯರು ಕಾರ್ಯನಿರ್ವಹಿಸುತ್ತಿದ್ದಾರೆ. ರೈತರಾಗಿ, ಡಾಕ್ಟರ್ ರಾಗಿ, ಬಸ್ ಚಾಲಕರಾಗಿ, ಪೈಲೆಟ್ ಆಗಿ ಹೀಗೆ ಹತ್ತು ಹಲವಾರು ಬರೀ ಪುರುಷರಿಗೆ ಎಂದೆ ಸೀಮಿತವಾಗಿದ್ದ ರಂಗಗಳಲ್ಲಿ ಮಹಿಳೆ ಇಂದು ಹೆಜ್ಜೆಯಿಟ್ಟಿದ್ದಾಳೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಜಿಲ್ಲಾಸ್ಪತ್ರೆ ಹಿರಿಯ ಅಪ್ತಸಮಾಲೋಚಕ ರವಿ ಕಿತ್ತೂರ ಮಾತನಾಡಿ ವಿಶ್ವ ಮಹಿಳಾ ದಿನಾಚರಣೆ ಬಂದಾಗ ಮಾತ್ರ ಮಹಿಳೆಯರನ್ನು ನೆನೆಯುವ ಕಾರ್ಯ ಆಗಬಾರದು ಅವಳು ಮಾಡುವ ತ್ಯಾಗ ಶ್ರಮಕ್ಕೆ ಪ್ರತಿದಿನವೂ ಅವರದ್ದೇ ದಿನ ಆಗಿರಬೇಕು ಹಿಂದೂ ನಾಮದೇವ ಸಿಂಪಿ ಸಮಾಜ ಹಿಂದುಳಿದ ಜನಾಂಗವಾದರೂ ಒಗ್ಗಟ್ಟಿನಲ್ಲಿ ಶ್ರಮ ಪಡುವುದರಲ್ಲಿ ಮುಂಚೂಣಿಯಲ್ಲಿದೆ ಈ ಸಮಾಜವನ್ನು ಮೇಲೆತ್ತುವ ಕಾರ್ಯ ಸರ್ಕಾರದಿಂದ ಆಗಬೇಕಾಗಿದೆ ಎಂದರು.

ಸಮಾರಂಭದ ಅಧ್ಯಕ್ಷತೆಯನ್ನು ನಾಮದೇವ ಸಿಂಪಿ ಸಮಾಜದ ಮಹಿಳಾ ಅಧ್ಯಕ್ಷೆ ನಂದಾ ಗಾನ್ಮೋಟೆ ಸಮಾಜದ ಕಾರ್ಯ ಚಟುವಟಿಕೆಗಳು ಕುರಿತು ಮಾತನಾಡಿದರು ಅತಿಥಿಗಳಾಗಿ ಶ್ರೀಮತಿ ಬಾಗಿರತಿ ಶಿಂದೆ ಶ್ರೀಮತಿ ಆರತಿ ಹಳ್ಳಿ ನಾಮದೇವ ಸಿಂಪಿ ಸಮಾಜ ಅಧ್ಯಕ್ಷ ಪ್ರೇಮಕುಮಾರ್ ಉಪಸ್ಥಿತರಿದ್ದರು.

ಮಹಿಳಾ ಮಂಡಳದ ಉಪಾಧ್ಯಕ್ಷೆ ಚೇತನಾ ಗಾಯಡೊಳ್ ಕಾರ್ಯದರ್ಶಿ ಪಲ್ಲವಿ ಗಾನಮೋಟೆ ಶಿಲ್ಪಾ ಕೋಪರ್ಡೆ. ಜಯಾ ರೆಳಕರ್ ಹಾಗೂ ಸಿಂಪಿ ಸಮಾಜದ ಹಿರಿಯರು ಮತ್ತು ಮಹಿಳೆಯರು ಪಾಲ್ಗೊಂಡಿದ್ದರು ಇದೇ ಸಂದರ್ಭದಲ್ಲಿ ಸಾಧಕರಿಗೆ ಸನ್ಮಾನಿಸಲಾಯಿತು.


ambedkar image

LEAVE A REPLY

Please enter your comment!
Please enter your name here