ಮೋಟಾರ್ ಸೈಕಲ್ ಹಾಗೂ ಮನೆಗಳ್ಳನ ಬಂಧನ

0
116

ವಿಜಯಪುರ ಫೆ.11: ವಿಜಯಪುರ ನಗರದಲ್ಲಿ ಇತ್ತಿಚಿಗೆ ಘಟಿಸುತ್ತಿದ್ದ ಮನೆ ಕಳ್ಳತನ ಪ್ರಕರಣದ ಸದರಿ ತನಿಖಾ ತಂಡವು ಮನೆ ಕಳ್ಳತನ ಮಾಡುವ ಆರೋಪಿತನ ಪತ್ತೆ ಕಾರ್ಯದಲ್ಲಿರುವಾಗ ಈ ದಿವಸ ದಿನಾಂಕ: 11.02.2021 ರಂದು ಬೆಳಗಿನ 09:00 ಗಂಟೆ ಸುಮಾರಿಗೆ ವಿಜಯಪುರ ಶಹರದ ಸರಾಫ ಬಜಾರದಲ್ಲಿ ಸಂಶಯಾಸ್ಪದವಾಗಿ ಸಿಕ್ಕ ಆರೋಪಿತನಾದ –ಗಣೇಶ ಸುಭಾಸ ಪವಾರ, (19) ಈತನನ್ನು ವಶಕ್ಕೆ ಪಡೆದುಕೊಂಡು ಠಾಣೆಗೆ ತಂದು ವಿಚಾರಣೆ ಮಾಡಿದಾಗ, ಆರೋಪಿತನು ಎರಡು ಮೋಟಾರ ಸೈಕಲಗಳು ಮತ್ತು ವಿಜಯಪುರ ನಗರದಲ್ಲಿ ರಹಿಮ ನಗರದಲ್ಲಿ ಮತ್ತು ಮದಿನಾ ನಗರದಲ್ಲಿ ತಲಾ ಒಂದೊಂದೆ ಮನೆ ಕಳ್ಳತನ ಮಾಡಿದ ಬಗ್ಗೆ ಒಪ್ಪಿಕೊಂಡಿರುತ್ತಾನೆ.

ಆರೋಪಿತನ ಕಡೆಯಿಂದ 95 ಗ್ರಾಂ ತೂಕದ ಬಂಗಾರದ ಆಭರಣಗಳು ಹಾಗೂ 270 ಗ್ರಾಂ ಬೆಳ್ಳಿಯ ಆಭರಣಗಳು, ಹೀಗೆ ಒಟ್ಟು ಸೇರಿ ಅಂದಾಜು 5,09,500/-ರೂ ಕಿಮ್ಮತ್ತಿನ ಮಾಲುಗಳನ್ನು ಜಪ್ತ ಮಾಡಿದ್ದು ಇರುತ್ತದೆ. ಸದರಿ ಆರೋಪಿತನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದು ಇರುತ್ತದೆ.

ಶ್ರೀ ರವೀಂದ್ರ ನಾಯ್ಕೋಡಿ ಸಿಪಿಐ ವಿಜಯಪುರ, ಶ್ರೀ ಎಸ್.ಬಿ.ಗೌಡರ ಪಿ.ಎಸ್.ಐ, ಶ್ರೀ ಆರ್.ಬಿ ಕೂಡಗಿ ಪಿ.ಎಸ್.ಐ ಗಾಂಧಿಚೌಕ, ಸಿಬ್ಬಂದಿ ಎಚ್.ಎಚ್.ಜಮಾದಾರ, ಬಾಬು ಗುಡಿಮನಿ, ಬಶೀರಅಹ್ಮದ.ಎಮ್.ಶೇಖ,  ಎನ್.ಕೆ.ಮುಲ್ಲಾ, ಎಸ್.ವ್ಹಿ ಜೋಗಿನ, ವಿಕ್ರಮ ಶಹಾಪುರ, ಎಸ್.ಎಸ್.ಕೆಂಪೆಗೌಡಾ, ಆರ್ ಎಸ್ ಪತ್ತಾರ, ಎಸ್.ಬಿ.ಗೌಳಿ, ಜಿ.ಎಸ್.ಗಿರಣಿವಡ್ಡರ, ಹಾಗು ಸಿ.ಡಿ.ಹತ್ತರಕಿ ಈ ಪ್ರಕರಣವನ್ನು ಬೇಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಈ ಪ್ರಕರಣದ ಪತ್ತೆ ಕಾರ್ಯದಲ್ಲಿ ಕಾರ್ಯನಿರ್ವಹಿಸಿದ ಎಲ್ಲ ಅಧಿಕಾರಿ ಹಾಗೂ ಸಿಬ್ಬಂದಿಗಳ ಕರ್ತವ್ಯವನ್ನು ಮಾನ್ಯ ಜಿಲ್ಲಾ ಪೊಲೀಸ್ ಅಧೀಕ್ಷಕರು ಶ್ಲಾಘಿಸಿ ಬಹುಮಾನ ಘೋಷಿಸಿದ್ದಾರೆ.


LEAVE A REPLY

Please enter your comment!
Please enter your name here