ರಿ-ಇನ್ವೆಸ್ಟ್ 2020; ಮೆಗಾವ್ಯಾಟ್ ಗಳನ್ನು ಗಿಗಾವ್ಯಾಟ್ ಗಳನ್ನಾಗಿ ಬದಲಾಯಿಸುವ ಯೋಜನೆ ಸಾಕಾರ

0
147
ನರೇಂದ್ರ ಮೋದಿ

“ಕಳೆದ ಆರು ವರ್ಷಗಳಲ್ಲಿ ಭಾರತದ ಸ್ಥಾಪಿತ ನವೀಕರಿಸಬಹುದಾದ ಇಂಧನ ಸಾಮರ್ಥ್ಯ ಎರಡೂವರೆ ಪಟ್ಟು ಹೆಚ್ಚಳ”

ನವದೆಹಲಿ ನ.27: 3ನೇ ಜಾಗತಿಕ ನವೀಕರಿಸಬಹುದಾದ ಇಂಧನ ಹೂಡಿಕೆ ಶೃಂಗಸಭೆ ಮತ್ತು ಪ್ರದರ್ಶನ (ರಿ-ಇನ್ವೆಸ್ಟ್ 2020)ಯನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಉದ್ಘಾಟಿಸಿದರು. ರಿ-ಇನ್ವೆಸ್ಟ್ 2020ಯ ಘೋಷವಾಕ್ಯ “ಸುಸ್ಥಿರ ಇಂಧನ ಬದಲಾವಣೆಗೆ ಆವಿಷ್ಕಾರಗಳು’’ ಎಂಬುದಾಗಿದೆ.

ಅತ್ಯಲ್ಪ ಅವಧಿಯಲ್ಲಿಯೇ ಮೆಗಾವ್ಯಾಟ್ ನಿಂದ ಗಿಗಾ ವ್ಯಾಟ್ ಗೆ ಪ್ರಗತಿ ಹೊಂದಿರುವುದಕ್ಕೆ ಮತ್ತು ನಾವು ಹಿಂದಿನ ಆವೃತ್ತಿಗಳಲ್ಲಿ ಮಾತನಾಡಿದ್ದಂತೆ “ಒಂದು ಸೂರ್ಯ, ಒಂದು ಜಗತ್ತು, ಒಂದು ಗ್ರಿಡ್’’ ಸಾಕಾರವಾಗುತ್ತಿದೆ ಎಂದು ಪ್ರಧಾನಮಂತ್ರಿ ಅವರು ಸಂತಸ ವ್ಯಕ್ತಪಡಿಸಿದರು.ಪ್ರತಿಯೊಬ್ಬ ವ್ಯಕ್ತಿಗೂ ವಿದ್ಯುತ್ ಲಭ್ಯವಾಗುವಂತೆ ಮಾಡಲಾಗಿದ್ದು, ಆ ಮೂಲಕ ಆತನ ಸಂಪೂರ್ಣ ಸಾಮರ್ಥ್ಯ ಬಳಕೆಗೆ ಅವಕಾಶ ನೀಡಲಾಗಿದೆ ಎಂದು ಹೇಳಿದರು. ಭಾರತ ಸದ್ಯ 136 ಗಿಗಾವ್ಯಾಟ್ ನವೀಕರಿಸಬಹುದಾದ ಇಂಧನ ಸಾಮರ್ಥ್ಯವನ್ನು ಹೊಂದಿದ್ದು, ಅದು ನಮ್ಮ ಒಟ್ಟು ಸಾಮರ್ಥ್ಯದ ಶೇ.36ರಷ್ಟಾಗಿದೆ.

ಭಾರತ ನವೀಕರಿಸಬಹುದಾದ ಇಂಧನ ಸಾಮರ್ಥ್ಯ ವಿಶ್ವದಲ್ಲಿ 4ನೇ ಸ್ಥಾನದಲ್ಲಿದೆ ಎಲ್ಲ ಪ್ರಮುಖರಾಷ್ಟ್ರಗಳಿಗಿಂತ ವೇಗವಾಗಿ ಮುಂದುವರಿದಿದೆ. ನವೀಕರಿಸಬಹುದಾದ ಇಂಧನ ವಲಯದಲ್ಲಿ ಬಂಡವಾಳ ಹೂಡಿಕೆ ಮಾಡುವುದರಿಂದ ಕೈಗೆಟಕುವ ದರದಲ್ಲಿ ವಿದ್ಯುತ್ ಲಭ್ಯವಾಗುವ ಜೊತೆಗೆ ಅದರ ಪ್ರಮಾಣ ಹೆಚ್ಚಾಗಿ, ಉತ್ಪಾದನಾ ವೆಚ್ಚ ಕಡಿಮೆಯಾಗಿದೆ ಎಂದು ಹೇಳಿದರು.


 

LEAVE A REPLY

Please enter your comment!
Please enter your name here