ವಿಜಯಪುರ ಸೆ.16: ಹೋರ್ತಿ ಪೊಲೀಸ್ ಠಾಣಾ ವ್ಯಾಪ್ತಿಯ ದೇಗಿನಾಳ ಗ್ರಾಮದಲ್ಲಿ ಖಚಿತ ಮಾಹಿತಿ ಮೇರೆಗೆ ಹೋರ್ತಿ ಪೊಲೀಸ್ ಠಾಣೆಯ ಅಧಿಕಾರಿ ಹಾಗೂ ಸಿಬ್ಬಂದಿ ದಾಳಿ ಮಾಡಿ ಆರೋಪಿ ರೇವಣಸಿದ್ದ ರಾಠೋಡ, ದಸ್ತಗೀರ ಮಾಡಿ, ಆರೋಪಿತನಿಂದ 750 ಗ್ರಾಂ ಗಾಂಜಾವನ್ನು ಜಪ್ತ ಮಾಡಲಾಗಿದೆ. ಈ ಕುರಿತು ಹೋರ್ತಿ ಪೊಲೀಸ್ ಠಾಣೆ ಗುನ್ನಾ ನಂ. 96/2020 ರಲ್ಲಿ ಪ್ರಕರಣ ದಾಖಲಿಸಲಾಗಿದೆ.

ಸಿಂದಗಿ ಪೊಲೀಸ್ ಠಾಣಾ ವ್ಯಾಪ್ತಿಯ ವಿಜಯಪುರ ಕಲಬುರಗಿ ಎನ್‍ಎಚ್-50 ರ ರಸ್ತೆಯ ಮೇಲೆ ಆಹೇರಿ ಕ್ರಾಸ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ಕೂಡಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡುವದು ಮತ್ತು ಖರೀದಿ ಮಾಡುತ್ತಿರುವ ಬಗ್ಗೆ ಖಚಿತವಾದ ಮಾಹಿತಿ ಮೇರೆಗೆ ಹೆಚ್.ಎಮ್.ಪಾಟೀಲ, ಸಿಪಿಐ ಸಿಂದಗಿ ರವರ ನೇತೃತ್ವದಲ್ಲಿ ಸಿಂದಗಿ ಠಾಣೆಯ ಅಧಿಕಾರಿ ಹಾಗೂ ಸಿಬ್ಬಂದಿ ದಾಳಿ ಮಾಡಿ ಆರೋಪಿತರಾದ 1) ಸುರೇಶ ಹೊನಗುಡೆಪ್ಪ ನಾಟೀಕಾರ, 2) ಮಡಿವಾಳಪ್ಪ ಕಲ್ಯಾಣಪ್ಪ ಪರೀಟ್,3) ಬಾಬು @ ಬಾಬುರಾವ್ ಲಾವಟೆ, 4) ಶರತ ಬೆಂಗಳೂರು, 5) ಗಗನ ಕೆ 6) ಮನೋಜ್ ಎಸ್ ಇವರನ್ನು ದಸ್ತಗೀರ ಮಾಡಿ, ಆರೋಪಿತರಿಂದ
2 ಕೆಜಿ 300 ಗ್ರಾಂ ಗಾಂಜಾ, ಹೆಚ್‍ಎಫ್ ಡಿಲೆಕ್ಸ್ ಮೋಟಾರ್ ಸೈಕಲ್,ಸ್ವೀಫ್ಟ್ ಕಾರ್ ಜಪ್ತಿ ಮಾಡಲಾಗಿದೆ. ಈ ಕುರಿತು ಸಿಂದಗಿ ಪೊಲೀಸ್ ಠಾಣೆ ಗುನ್ನಾ ನಂ. 246/2020 ರಲ್ಲಿ ಪ್ರಕರಣ ದಾಖಲಿಸಿ ಸೂಕ್ತ ಕಾನೂನು ಜರುಗಿಸಲಾಗಿದೆ ಎಂದು ಎಸ್.ಪಿ.ಅಗರವಾಲ್ ತಿಳಿಸಿದ್ದಾರೆ.