ಅಪ್ಪ ಹೇಳಿದ ಆರ್ಮಿ ಕಥೆಗಳು – ಭಾಗ 2

0
93
ರವೀಂದ್ರ ಎನ್ ಎಸ್ - ಲೇಖಕರು

ಆ ಯೋಧ ಹುಟ್ಟಿದ್ದು 1946 ಅಗಷ್ಟ 30 ರಂದು ಪಂಜಾಬ್ ನ‌ಲ್ಲಿ. ಆಗ ಇಡೀ ದೇಶದಲ್ಲಿ ಸ್ವಾತಂತ್ರ್ಯದ ಕಿಚ್ಚು ಅತ್ಯಂತ ದೊಡ್ಡದಾಗಿ ಹರಡಿದ ಸಮಯ. ಇಡೀ ದೇಶದ ಜನತೆಯ ಮನಗಳಲ್ಲಿ ದೇಶ ಭಕ್ತಿ ಧುಮ್ಮಿತ್ತಿದ್ದ ಸಮಯದಲ್ಲಿ ಆತನ ಜನನವಾಗುತ್ತದೆ. ತಾಯಿ ತಂದೆ ಆತನಿಗೆ ಇಟ್ಟ ಹೆಸರು “ಹರ್ಭಜನ್ ಸಿಂಗ್ ” ಬಾಲ್ಯದ ಶಿಕ್ಷಣ ಪೂರ್ಣಗೊಳಿಸಿದ ಆತ ನೇರವಾಗಿ ಸೇರಿದ್ದು ಭಾರತಿಯ ಸೈನ್ಯಗೆ.

1966 ರಲ್ಲಿ 24 ಪಂಜಾಬ್ ರೆಜಿಮೆಂಟ್ ನ‌ಲ್ಲಿ ಸೈನಿಕ‌ನಾಗಿ ಭಾರತೀಯ ಸೇನೆಗೆ ಸೇರಿದ ಹರ್ಭಜನ್ ಸಿಂಗ್ ನಿಯುಕ್ತಿಗೊಂಡಿದ್ದು ಸಿಕ್ಕಿಂನ “ನಾಥುಲಾ” ಎನ್ನುವ ಇಂಡೋ ಚೀನ್ ಬಾರ್ಡರ್ ಪ್ರದೇಶದಲ್ಲಿ. ಸಮುದ್ರ ಮಟ್ಟದಿಂದ 13000 ಸಾವಿರ ಅಡಿ ಎತ್ತರ ಇರುವ ಈ ಪ್ರದೇಶದಲ್ಲಿ1968 ರಲ್ಲಿ ಒಂದು ದಿನ ಕರ್ತವ್ಯದ ಮೇಲೆ ಇರುವಾಗ ನದಿ ದಾಟುವ ಸಂದರ್ಭದಲ್ಲಿ ವಿಪರೀತ ಹವಾಮಾನ ಮತ್ತು ಹಿಮಪಾತದ ಕಾರಣ ಹರ್ಬಜನ್ ಸಿಂಗ್ ಹಿಮದಲ್ಲಿ ಸಿಲುಕಿ ಕಾಣೆಯಾಗುತ್ತಾನೆ. ಭಾರತೀಯ ಸೈನಿಕರು ಎರಡು ದಿವಸಗಳ ಕಾಲ ಆತನ ಶವಕ್ಕಾಗಿ ಹುಡುಕಾಡಿದರೂ ಆತನ ಶವ ಸಿಕ್ಕುವುದಿಲ್ಲ ಎರಡನೆಯ ದಿವಸ ರಾತ್ರಿ search party ಸೈನಿಕನೊಬ್ಬನಿಗೆ ಒಂದು ವಿಚಿತ್ರವಾದ ಕನಸು ಬಿಳುತ್ತದೆ ಆ ಕನಸಲ್ಲಿ ಹಿಮಪಾತದಲ್ಲಿ ಕಾಣೆಯಾದ ಸಿಪಾಯಿ ಹರ್ಬಜನ್ ಸಿಂಗ್ ಕಾಣಿಸಿಕೊಂಡು ತಾನು ಇಂತಹುದೇ ಜಾಗದಲ್ಲಿ ಸತ್ತು ಹೋಗಿದ್ದಾಗಿ ಮತ್ತು ತನ್ನ ಶರೀರವನ್ನು ಅದೇ ಜಾಗದಲ್ಲಿ ಹುಡುಕುವಂತೆ ಹೇಳುತ್ತಾನೆ.

ಮಾರನೇ ದಿವಸ Search Party ಸೈನಿಕರು ಅದೇ ಜಾಗವನ್ನು ಶೋಧಿಸಿ ಅಲ್ಲಿ ಹೂತು ಹೋಗಿದ್ದ ಸಿಪಾಯಿ ಹರ್ಬಜನ್ ಸಿಂಗ್ ನ ಪಾರ್ಥಿವ ಶರೀರವನ್ನು ಹೊರತೆಗೆದು ಸರ್ಕಾರಿ ಗೌರವಗಳೊಂದಿಗೆ ಅಂತಿಮ ಸಂಸ್ಕಾರ ನಡೆಸುತ್ತಾರೆ. ಕೆಲವು ದಿನಗಳ ನಂತರ ಮತ್ತೆ ಸೈನಿಕನೊಬ್ಬನ ಕನಸಿನಲ್ಲಿ ಕಾಣಿಸಿಕೊಂಡ ಸಿಪಾಯಿ ಹರ್ಬಜನ್ ಸಿಂಗ್ ತನಗಾಗಿ ಒಂದು ಸಮಾಧಿ ನಿರ್ಮಾಣ ಮಾಡುವಂತೆ ಮತ್ತು ತಾನು ದೇಹ ಮಾತ್ರ ತೊರೆದಿದ್ದು ನನ್ನ ಆತ್ಮ ಇವತ್ತಿಗೂ ಕರ್ತವ್ಯ ನಿರ್ವಹಿಸುತ್ತಿದ್ದು ಮೇಲಾಧಿಕಾರಿಗಳಿಗೆ ಈ ವಿಷಯ ತಲುಪಿಸುವಂತೆ ಹೇಳುತ್ತಾನೆ.

ರಾತ್ರಿ ಕಂಡ ಕನಸನ್ನು ಭ್ರಮೆ ಎಂದು ಭಾವಿಸಿದ ಆ ಸೈನಿಕ ಆ ವಿಷಯವನ್ನು ಅಲ್ಲಿಯೇ ಮರೆತು ಬಿಡುತ್ತಾನೆ. ಆದರೆ ಮುಂದೆ ನಡೆದಿದ್ದೆಲ್ಲ ನಂಬಲು‌ ಅಸಾಧ್ಯ ಎನ್ನುವಂತಹ ಘಟನೆಗಳು, ನಾಥೂಲ ಪ್ರದೇಶದಲ್ಲಿ Duty ಮೇಲಿದ್ದ ಸೈನಿಕರಲ್ಲಿ ಅಶಿಸ್ತು. ಕರ್ತವ್ಯ ಲೋಪ ಇತ್ಯಾದಿಗಳು ಕಂಡು ಬಂದಾಗ ಕಪಾಳಕ್ಕೆ ಏಟು ಬೀಳಲಾರಂಭಿಸುತ್ತವೆ. ನಿಧಾನಕ್ಕೆ ಈ ವಿಷಯ ಸೈನ್ಯದ ತುಂಬ ಹರಡಿ ಮೇಲಧಿಕಾರಿಗಳ ಕಿವಿಗೂ ತಲುಪುತ್ತದೆ ಆಗ ಅಧಿಕಾರಿಗಳ ಕನಸಿನಲ್ಲಿ ಕಾಣಿಸಿಕೊಂಡ ಹರ್ಭಜನ್ ಸಿಂಗ್ ತಾನು ಇನ್ನೂ ಕರ್ತವ್ಯ ನಿರ್ವಹಿಸುತ್ತಿರುವುದಾಗಿ ಹೇಳಿಕೊಳ್ಳುತ್ತಾನೆ ಇದರಿಂದ ಬೆಚ್ಚಿ ಬಿದ್ದ ಸೇನಾಧಿಕಾರಿಗಳು ತಡ ಮಾಡದೇ ಹರ್ಭಜನ್ ಸಿಂಗ್ ನ ಸಮಾಧಿ ಮಾತ್ರ ಅಲ್ಲ ಮಂದಿರವನ್ನು‌ ಸಹ ನಿರ್ಮಾಣ ಮಾಡುತ್ತಾರೆ.

ಮಂದಿರದ ನಿರ್ವಹಣೆಗೆ ಮೂರು ಜನ ಸೈನಿಕರನ್ನು ನಿಯೋಜಿಸುತ್ತಾರೆ. ಅಲ್ಲಿ ಒಂದು Bead Room ಸಹಿತ ಎರಡು ಪ್ರತ್ಯೆಕ ಕೋಣೆಗಳಿದ್ದು ಪ್ರತಿ ನಿತ್ಯ ಹರ್ಬಜನ್ ಸಿಂಗ್ ನ ಬೆಡ್ ಚೇಂಜ್ ಮಾಡುವುದರಿಂದ ಹಿಡಿದು ಆತನಿಗೆ ಕಾಫಿ, ಉಪಹಾರ, ಊಟ, ನೀರು ಇತ್ಯಾದಿಗಳನ್ನು ಸಮಯಕ್ಕೆ ತಕ್ಕ ಹಾಗೆ ವ್ಯವಸ್ಥೆ ಮಾಡಲಾಗುತ್ತದೆ. ಅಷ್ಟೇ ಅಲ್ಲ ಪ್ರತಿನಿತ್ಯ Iron ಮಾಡಿದ Uniform. ಪಾಲಿಶ್ ಮಾಡಿದ ಶೂ ಮತ್ತು Loaded Gun ಸಹ ಇಡಲಾಗುತ್ತದೆ. ಬೆಳಿಗ್ಗೆ ಇಂದ ಸಾಯಂಕಾಲದವರೆಗೆ ದೇವಸ್ಥಾನದ ದ್ವಾರ ಓಪನ್ ಇಟ್ಟು ರಾತ್ರಿಯಾಗುತ್ತಿದ್ದಂತೆ ದೇವಸ್ಥಾನದ ದ್ವಾರವನ್ನು ಮುಚ್ಚಲಾಗುತ್ತದೆ. ಎಕೆಂದರೆ ರಾತ್ರಿ ಹರ್ಬಜನ್ ಸಿಂಗ್ Patrolling ಗೆ ಹೋಗುವ ಸಮಯ.

ಈ ಹೊತ್ತಿನಲ್ಲಿ Night Duty ಮಾಡುತ್ತಿರುವ ಸೈನಿಕರಲ್ಲಿ ಎನೋ ಒಂದು ಆತ್ಮ ಬಲ ಹರ್ಭಜನ್ ಸಿಂಗ್ ನಮ್ಮ ಜೊತೆ ಇದ್ದಾನೆ ಎನ್ನುವ ನಂಬಿಕೆ ಜೊತೆಗೆ ಮೈ ಮರೆತರೆ ಏಟು ಬೀಳಬಹುದು ಎನ್ನುವ ಅಳುಕು ಅದು ನಾಥೂಲ ಪ್ರದೇಶದ ಸೈನಿಕರ ನಂಬಿಕೆ ಮಾತ್ರ ಎಂದುಕೊಳ್ಳುವಂತಿಲ್ಲ ಏಕೆಂದರೆ ಯಾವುದೇ ಅವಘಡಗಳು ಸಂಭವಿಸುವ 24 ಗಂಟೆಗಳ ಮುಂಚೆ ಹರ್ಭಜನ್ ಸಿಂಗ್ ಭಾರತೀಯ ಸೈನಿಕರಿಗೆ ಯಾವುದಾದರೂ ಒಂದು ಸುಳಿವುಗಳ ಮೂಲಕ ಎಚ್ಚರಿಕೆ ನೀಡುತ್ತಲೇ ಬಂದಿದ್ದಾನೆ.

Even ಚೀನ ಸೇನೆ ಸ್ವಲ್ಪ ಅಲ್ಲಾಡಿದರೂ ಭಾರತಿಯ ಸೇನೆಗೆ ಕರಾರುವಕ್ಕಾದ ಮಾಹಿತಿ ಹರ್ಭಜನ್ ಸಿಂಗ್ ನಿಂದ ಲಭ್ಯ ಆಗುತ್ತದೆ. ಇದು ಭಾರತೀಯ ಸೇನೆಯ ಅಂಧ ವಿಶ್ವಾಸ ಎಂದುಕೊಳ್ಳಲಾಗದು ಏಕೆಂದರೆ ಚೀನಿ ಸೈನ್ಯ ತನ್ನ ಗಡಿಯಲ್ಲಿ ಗಸ್ತು ತಿರುಗುವ ಸಂದರ್ಭದಲ್ಲಿ ಬಿಳಿ ಕುದುರೆಯ ಮೇಲೆ ಸವಾರಿ ಮಾಡುತ್ತಿರುವ ಭಾರತೀಯ ಯೋಧನೊಬ್ಬ ಚೀನ ಬಾರ್ಡರ್ ಒಳಗಡೆ ಆಗಾಗ ಬಂದು ಹೋಗುತ್ತಿದ್ದು ಭಾರತೀಯ ಸೇನೆ ಕೂಡಲೇ ಆ ಸೈನಿಕನನ್ನು ಚೀನಾ ಬಾರ್ಡರ್ ನಲ್ಲಿ ನುಸುಳದಂತೆ ಎಚ್ಚರಿಕೆ ನೀಡಿ ಇಲ್ಲದಿದ್ದಲ್ಲಿ ನಾವು ಆತನನ್ನು ಗುಂಡಿಕ್ಕಿ ಸಾಯಿಸಬೇಕಾಗುತ್ತದೆ ಎಂದು ಸುಮಾರು ಸರ್ತಿ ಭಾರತಿಯ ಸೇನೆಗೆ ಪತ್ರಗಳನ್ನು ಬರೆದಿದೆ. ಚೀನ ಸೈನ್ಯದ ಪತ್ರಕ್ಕೆ ಭಾರತಿಯ ಸೇನೆ ಬರೆದ ಉತ್ತರದಲ್ಲಿ ನಮ್ಮ ದೇಶದ ಯಾವ ಸೈನಿಕನೂ ಚೀನ ಗಡಿಯೊಳಗೆ ಬಂದಿಲ್ಲ ಎಂದು ಸ್ಪಷ್ಟ ಪಡಿಸಿದರೂ ಚೀನ ಒಪ್ಪುತ್ತಿರಲಿಲ್ಲ.

ಸಾಂದರ್ಭಿಕ ಚಿತ್ರ

ಮೊದ ಮೊದಲು ಚೀನ ಭಾರತೀಯ ಸೇನೆಯು ಹೇಳಿದ್ದನ್ನು ನಂಬದೇ ಇದ್ದರು ನಂತರ ಗಡೀ ಪ್ರದೇಶದಲ್ಲಿ ಉದ್ವಿಗ್ನ ಪರಿಸ್ಥಿತಿಗಳು ಉಂಟಾದಾಗ ಭಾರತೀಯ ಸೇನಾಧಿಕಾರಿಗಳ ಕನಸಲ್ಲಿ ಮಾತ್ರ ಅಲ್ಲ ಚೀನಿ ಸೇನಾಧಿಕಾರಿಗಳ ಕನಸಿನಲ್ಲೂ ಕಾಣಿಸಿಕೊಂಡು ವಿವಾದಗಳನ್ನು ಶಾಂತಿಯುತವಾಗಿ ಬಗೆ ಹರಿಸಿಕೊಳ್ಳುವ ಸಲಹೆ ನೀಡಿದ ನಂತರ ಚೀನಿ ಸೇನೆ ಸಹ ಸಿಪಾಯಿ ಹರ್ಭಜನ್ ಸಿಂಗ್ ನ ದೇಶ ಭಕ್ತ ಅತ್ಮವನ್ನು ನಂಬಲೇಬೇಕಾಯಿತು.
ಇಂಡೋ ಚೀನಗಳ ಮಧ್ಯೆ ನಡೆಯುವ ಪ್ರತಿ Flag Meeting ನಲ್ಲಿ ಸೇರುವ ಭಾರತ ಮತ್ತು ಚೀನಾ ಸೇನಾಧಿಕಾರಿಗಳ ಮಧ್ಯೆ ಒಂದು ಕುರ್ಚಿಯನ್ನು ಖಾಲಿ ಬಿಡಲಾಗುತ್ತದೆ ಅದು ಹರ್ಬಜನ್ ಸಿಂಗ್ ಗೆ ಮೀಸಲಿಡಲಾಗುವ ಕುರ್ಚಿ. ಅಲ್ಲಿ ಹರ್ಬಜನ್ ಸಿಂಗ್ ಕುಳಿತು Meeting attend ಮಾಡುತ್ತಾನೆ ಎನ್ನುವ ನಂಬಿಕೆ ಎರಡೂ ದೇಶಗಳ ಉನ್ನತ ಸೇನಾಧಿಕಾರಿಗಳಲ್ಲಿದೆ.

ಭಾರತಿಯ ಸೇನೆ ಕೂಡ ಒಬ್ಬ ಕರ್ತವ್ಯ ನಿರತ ಸೈನಿಕನಿಗೆ ಕೊಡುವ ಎಲ್ಲ ಸೌಲಭ್ಯಗಳನ್ನೂ ಸಹ ಹರ್ಬಜನ್ ಸಿಂಗ್ ಗೆ ಕೊಡುತ್ತಿದೆ. ಆತನ ಪ್ರತಿ ತಿಂಗಳ ಸಂಬಳ ಆತನ ಮನೆಯವರಿಗೆ ತಲುಪಿಸುತ್ತದೆ. ಎಲ್ಲ ಸೈನಿಕರಿಗೆ ನೀಡುವಂತೆ ಪ್ರಮೋಷನ್ ಸಹ ನೀಡಲಾಗಿದೆ ಸಾಮಾನ್ಯ ಸೈನಿಕನಾಗಿದ್ದ ಹರ್ಭಜನ್ ಸಿಂಗ್ ಗೆ ಕ್ಯಾಪ್ಟನ್ Rank ವರೆಗೂ promotion ನೀಡಲಾಗಿದೆ. ಎಲ್ಲ ಸೈನಿಕರಿಗೆ ನೀಡುವಂತೆ ಹರ್ಭಜನ್ ಸಿಂಗ್ ಗೂ‌ ಕೂಡ ವಾರ್ಷಿಕ ರಜೆ ನೀಡಲಾಗುತ್ತದೆ.ಈ ಸಂದರ್ಭದಲ್ಲಿ ಮುಂಗಡವಾಗಿ Train Ticket Reservation ಮಾಡಿಸಲಾಗುತ್ತದೆ. ನಾಥೂಲ್ ನಲ್ಲಿನ ದೇವಸ್ಥಾನದ ಕೋಣೆಯಲ್ಲಿ ಇರುವ ಹರ್ಭಜನ್ ಸಿಂಗ್ ಫೋಟೋ ಯುನಿಫಾರ್ಮ ಸಮೇತ ಲಗೇಜ್ ಪ್ಯಾಕ್ ಮಾಡಿ Army ಜೀಪ್ ನಲ್ಲಿ ಕ್ಯಾಪ್ಟನ್ ಹರ್ಭಜನ್ ಫೋಟೋ ಮುಂದಿನ ಸೀಟಲ್ಲಿ ಇರಿಸಿ ಹತ್ತಿರದ Railway Station ಗೆ ತೆಗೆದುಕೊಂಡು ಹೋಗಿ ಅಲ್ಲಿಂದ Train ಮೂಲಕ ಇಬ್ಬರು ಸೈನಿಕರು ಹರ್ಭಜನ್ ಸಿಂಗ್ ಹುಟ್ಟೂರಿನ ಸ್ವಂತ ಮನೆಗೆ ಹರ್ಬಜನ್ ಸಿಂಗ್ ರನ್ನು ತಲುಪಿಸಿ ಬರುತ್ತಾರೆ. ಮನೆಯವರು ಕೂಡ ಆತನಿಗಾಗಿ ರೂಮನ್ನು ಸಿದ್ದಪಡಿಸಿ ಆತ ಬದುಕಿದ್ದಾಗ ಯಾವ ರೀತಿ ವ್ಯವಸ್ಥಿತವಾಗಿ ನೋಡಿಕೊಳ್ಳುತ್ತಿದ್ದರೋ ಅದೇ ರೀತಿ ಯಾವ ಲೋಪವೂ ಆಗದಂತೆ ನೋಡಿ ಕೊಳ್ಳುತ್ತಾರೆ.

ಹರ್ಭಜನ್ ಸಿಂಗ್ ನ ರಜೆ ಮುಗಿದ ನಂತರ ಪುನಃ ಭಾರತೀಯ ಸೈನಿಕರು ಆತನ ಮನೆಗೆ ಬಂದು‌ ಅದೇ ಸೇನಾ ಗೌರವಗಳೊಂದಿಗೆ ಮತ್ತೆ ವಾಪಸ್ ಸಿಕ್ಕಿಂ ನ ನಾಥೂಲ ಗೆ ಕರೆದುಕೊಂಡು ಹೋಗುತ್ತಾರೆ. ಇತ್ತ ಹರ್ಬಜನ್ ಸಿಂಗ್ ರಜೆಯ ಮೇಲೆ ತೆರಳಿದರೆ ಅತ್ತ ನಾಥೂಲ್ ಬಾರ್ಡರ್ ನಲ್ಲಿ ಹೈ ಅಲರ್ಟ್ ಘೋಷಣೆಯಾಗುತ್ತದೆ. ಅತಿ ಹೆಚ್ಚಿನ ಸಂಖ್ಯೆಯಲ್ಲಿ ಭಾರತಿಯ ಸೈನಿಕರನ್ನು ನಿಯೋಜಿಸಲಾಗುತ್ತದೆ ಯಾಕೆಂದರೆ ಈ ಅವಧಿಯಲ್ಲಿ ಕ್ಯಾಪ್ಟನ್ ಹರ್ಬಜನ್ ಸಿಂಗ್ ಡ್ಯೂಟಿಯಲ್ಲಿ ಇರುವುದಿಲ್ಲ.

ಈ ವಿಷಯ ಭಾರತಿಯ ಸೇನೆಗೆ ಮಾತ್ರ ಅಲ್ಲ ಚೀನಿ ಸೇನೆಗೂ ಗೊತ್ತು ಆ ಕಾರಣಕ್ಕಾಗಿಯೆ ಹೆಚ್ಚಿನ ಸಂಖ್ಯೆಯ ಸೈನಿಕರನ್ನು ಭಾರತಿಯ ಸೇನೆ ಆ ಪ್ರದೇಶದಲ್ಲಿ ನಿಯೋಜಿಸುತ್ತದೆ. ಒಂದು ವೇಳೆ ಚೀನಿ ಸೇನೆ ಏನಾದರೂ ಒಂಚೂರು ಮಿಸುಕಾಡಿದರೂ ಸಹ ಭಾರತಿಯ ಸೇನೆ ಕ್ಯಾಪ್ಟನ್ ಹರ್ಭಜನ್ ಸಿಂಗ್ ರ ರಜೆಯನ್ನು ರದ್ದು ಪಡಿಸಿ ತಕ್ಷಣ ಅವರನ್ನು ಬಾರ್ಡರ್ ಗೆ ಕರೆಸಿ ಕೊಳ್ಳುತ್ತದೆ.

ಹೀಗೆ ಭಾರತಿಯ ಸೇನೆಯೇ ಕ್ಯಾಪ್ಟನ್ ಹರ್ಬಜನ್ ಸಿಂಗ್ ಅವರ ದೇವಸ್ಥಾನ ಕಟ್ಟಿ ಅವರನ್ನು ನಂಬುತ್ತಿದೆ ಎಂದರೆ ನಿಜಕ್ಕೂ ಅದು ಭಾರತ ಮಾತ್ರ ಅಲ್ಲ ಇಡೀ ಜಗತ್ತೇ ಬೆರಗಾಗುವಂಥ ದೇಶ ಭಕ್ತನ ಆತ್ಮ. Diffence ಇಲಾಖೆಯೇ ಹರ್ಭಜನ್ ಸಿಂಗ್ ರನ್ನು ನಂಬಿರುವಾಗ ಸಾಮಾನ್ಯ ನಾಗರಿಕರು ನಂಬದೇ ಇರುತ್ತಾರೆಯೇ ? ಸಾಮಾನ್ಯ ನಾಗರೀಕರೂ ಸಹ ಕ್ಯಾಪ್ಟನ್ ಹರ್ಬಜನ್ ಸಿಂಗ್ ಮಂದಿರಕ್ಕೆ ಪ್ರತಿನಿತ್ಯ ಸಾವಿರಾರು ಸಂಖ್ಯೆಯಲ್ಲಿ ಭೇಟಿಕೊಡುತ್ತಾರೆ . ದೈಹಿಕ ಸಮಸ್ಯೆ ಇರುವವರು ನೀರಿನ ಬಾಟಲ್ ಗಳನ್ನು ಇಟ್ಟು ಮೂರು ದಿನಗಳ ನಂತರ ಬಂದು ವಾಪಸ್ ತೆಗೆದುಕೊಂಡು ಹೋಗಿ 21 ದಿನಗಳ ವರೆಗೆ ಆ ನೀರನ್ನು ಸೇವಿಸಿದರೆ ತಮ್ಮ ದೈಹಿಕ ಕಾಯಿಲೆಗಳು ವಾಸಿಯಾಗುತ್ತವೆ ಎನ್ನುವ ನಂಬಿಕೆ ಹೊಂದಿದ್ದರೆ ಇನ್ನು ಕೆಲವರು ತಮ್ಮ ಸಮಸ್ಯೆಗಳನ್ನು ಒಂದು ಚಿಕ್ಕ ಪೇಪರ್ ನಲ್ಲಿ ಬರೆದು ದೇವಸ್ಥಾನದ ಗದ್ದುಗೆ ಮೇಲಿಟ್ಟು ತಮ್ಮ ಸಮಸ್ಯೆಗಳನ್ನು ಪರಿಹರಿಸುವಂತೆ ಪ್ರಾರ್ಥಿಸುತ್ತಾರೆ.

Night Duty ಮುಗಿಸಿಕೊಂಡು ಬಂದ ಕ್ಯಾಪ್ಟನ್ ಹರ್ಭಜನ್ ಸಿಂಗ್ ಎಲ್ಲ ಚೀಟಿಗಳನ್ನು ಓದಿ ಅವುಗಳಿಗೆ ಪರಿಹಾರ ನೀಡುತ್ತಾನೆ ಎನ್ನುವುದು ಸಾಮಾನ್ಯ ಜನಗಳ ನಂಬಿಕೆ. Army ಅವರಿಗೆ ಹರ್ಭಜನ್ ಸಿಂಗ್ ಒಬ್ಬ ಕ್ಯಾಪ್ಟನ್ ಆದರೆ Civilian ಗಳಿಗೆ ಅವರು ಬಾಬಾ ಹರ್ಬಜನ್ ಸಿಂಗ್. ಇಂತಹ ಕ್ಯಾಪ್ಟನ್ ಬಾಬಾ ಹರ್ಭಜನ್ ಸಿಂಗ್ 2006 ರಲ್ಲಿ ತಮ್ಮ ಸೇವೆಯಿಂದ ನಿವೃತ್ತಿ ಯಾಗಿ ಈಗ ಶಾಶ್ವತವಾಗಿ ನಾಥೂಲನ ತಮ್ಮ ಬಂಕರ್ ನಲ್ಲಿ ಭಾರತ ದೇಶವನ್ನು ಕಾಯುವ ತಮ್ಮ ಕರ್ತವ್ಯದಲ್ಲಿ ನಿರತರಾಗಿದ್ದಾರೆ.

ಇವತ್ತು ಅಗಷ್ಟ 30 ಬಾಬಾ ಕ್ಯಾಪ್ಟನ್ ಹರ್ಭಜನ್ ಸಿಂಗ್ ರ ಜನ್ಮ ದಿನ. ಸಿವಿಲಿಯನ್ ಗಳು ನೆಮ್ಮದಿಯಾಗಿ ಇದ್ದಾಗ ಯಾವತ್ತೂ ಸೈನಿಕರನ್ನ ನೆನೆಯುವುದಿಲ್ಲ.‌ ಸಿನಿಮಾ, ಕ್ರಿಕೆಟರ್ ಗಳ ,ರಾಜಕಾರಣಿಗಳ ಜನ್ಮ ದಿನಕ್ಕೆ ದೇಶಕ್ಕೆ ದೇಶವೇ ಶುಭಾಷಯಗಳನ್ನು ಸಲ್ಲಿಸುತ್ತದೆ ಆದರೆ ದೇಶಕ್ಕಾಗಿ ಮಡಿದ ವೀರ ಯೋಧರ ಜನ್ಮ ದಿನಗಳು ಯಾರಿಗೂ ನೆನಪಿರುವುದಿಲ್ಲ. ಬರೀ ನಾವು ನಮ್ಮ ಮನೆ ನಮ್ಮ ಕುಟುಂಬ ನಮ್ಮ ಮಕ್ಕಳು, ಹಣ, ಆಸ್ತಿ, ಅಂತಸ್ತು ಅನ್ನೋ‌ ಮೋಹದಲ್ಲಿ ಬದುಕಿ ಅದೇ ಮೋಹದಲ್ಲಿ ಸತ್ತು ಹೋಗುವ ಜನಗಳಿಗೆ ಅಷ್ಟೇ ಬದುಕು.

ಆದರೆ‌ ನನ್ನ ದೇಶ ನನ್ನ ಜನ ಅಂತ ಬದುಕಿ ದೇಶಕ್ಕಾಗಿ ಸತ್ತು ಸತ್ತ ಮೇಲೂ ದೇಶಕ್ಕಾಗಿ ದುಡಿಯುತ್ತಿರುವ ಕ್ಯಾಪ್ಟನ್ ಬಾಬಾ ಹರ್ಭಜನ್ ಸಿಂಗ್ ರಂತಹ ಮಹಾನ್ ಯೋಧರು ಸತ್ತ ಮೇಲೂ ಬದುಕುತ್ತಾರೆ. ಇಂತಹ ಮಹಾನ್ ಆತ್ಮಗಳನ್ನು ಕೊನೆ ಪಕ್ಷ ಅವರ ಜನ್ಮ‌ ದಿನದಂದು ಆದರೂ ಅವರನ್ನು ನೆನೆಸಿಕೊಳ್ಳೊಣ. ಯಾಕೆಂದರೆ ಅಂತಹ‌ ಅಮರ ಜವಾನ್ ಗಳ ತ್ಯಾಗ ಬಲಿದಾನಗಳಿಂದಲೇ ನಮ್ಮಂಥ‌ ಸಾಮಾನ್ಯ ನಾಗರಿಕರು ಹೊಟೇಲು ಸಿನಿಮಾ‌ ಪಾರ್ಕು ಅಂತ ಸುತ್ತಾಡಿ ನೆಮ್ಮದಿಯಾಗಿ ಮನೆಯಲ್ಲಿ ಮಲಗಿ ನಿದ್ದೆ ಮಾಡೋದು. ಅವರ ಅಲ್ಲಿನ ಯಾತನಾಮಯ ಬದುಕು ನಮ್ಮ‌ ಇಲ್ಲಿನ ನೆಮ್ಮದಿಗೆ ಕಾರಣ. ಅಂತಹ ವೀರ ಭಾರತೀಯ ಯೋಧರಿಗೊಂದು ಸಲಾಮ್ ಹೇಳುತ್ತ ಮತ್ತೊಮ್ಮೆ ಬಾಬಾ ಕ್ಯಾಪ್ಟನ್ ಹರ್ಭಜನ್ ಸಿಂಗ್ ಅವರಿಗೆ ಜನ್ಮ ದಿನದ ಶುಭಾಷಯಗಳನ್ನು ಸಲ್ಲಿಸೋಣ..
ಜೈ ಹಿಂದ್

ರವೀಂದ್ರ ಎನ್ ಎನ್ – ಲೇಖಕರು


 

LEAVE A REPLY

Please enter your comment!
Please enter your name here