‘ಗಣನಾಯಕ’ ನಾದ ‘ಗಣನಾಕ’

0
443
ರವೀಂದ್ರ ಎನ್ ಎಸ್ - ಲೇಖಕರು

ಗಣನಾಕ ಪೇಶ್ವೇ ಒಂದನೇ ಬಾಜೀರಾವ್ (1700-1740) ನ ಸೈನ್ಯದಲ್ಲಿ ಒಬ್ಬ ಸೈನಿಕ. ಕೋಟೆಯ ಮುಖ್ಯ ದ್ವಾರ ಕಾಯುವುದು ಆತನಿಗೆ ಒಪ್ಪಿಸಲಾದ ಕಾರ್ಯ. ಆರಡಿಗೂ ಮಿಕ್ಕಿ ಎತ್ತರದ ದೃಢ ಕಾಯ ಹೊಂದಿದ್ದ ಗಣನಾಕ (ಗಣ್ಯಾ ಮಹಾರ್) ಒಬ್ಬ ಅಪ್ರತಿಮ ಧೈರ್ಯಶಾಲಿ ಆಗಿದ್ದರಿಂದ ಆತನಿಗೆ ಕೋಟೆಯ ರಕ್ಷಣೆಯ ಭಾರವನ್ನು ಹೊರಿಸಲಾಗಿದ್ದು ಸಹಜವೇ ಆಗಿತ್ತು. ತನ್ನ ಕರ್ತವ್ಯವನ್ನು ಅತ್ಯಂತ ಪ್ರಾಮಾಣಿಕವಾಗಿ ನಿರ್ವಹಿಸುತ್ತಿದ್ದ ಗಣನಾಕನ ಮೇಲೆ ಅಂತಃಪುರದ ಯುವರಾಣಿಯೊಬ್ಬಳು ಮೋಹಗೊಳ್ಳುತ್ತಾಳೆ ಅದು ಆತನನ್ನು ನೋಡದೆಯೇ ಎನ್ನುವುದು ಆಶ್ಚರ್ಯ ಆದರೂ ಸತ್ಯ.

ಸಾಂದರ್ಭಿಕ ಚಿತ್ರ

ಒಂದು ಸಲ ಅಂತಃಪುರದಿಂದ ಕೋಟೆಯ ಹೊರಗಡೆ ಬಂದಿದ್ದ ಯುವರಾಣಿ‌ ಅಲ್ಲಿ ನೆಲದ ಮೇಲೆ ಮೂಡಿದ್ದ ಹೆಜ್ಜೆ ಗುರುತನ್ನು ಕಂಡು ಆ ಹೆಜ್ಜೆ ಗುರುತಿನಿಂದ ಮಾತ್ರವೇ ಮೋಹಗೊಂಡು ಹೆಜ್ಜೆ ಜಾಡು ಹಿಡಿದು ಊರ ಹೊರಗಡೆ ಇದ್ದ ಗಣನಾಕನ ಗುಡಿಸಲಿಗೆ ಬರುತ್ತಾಳೆ. ಹಾಗೆ ಗುಡಿಸಲಿಗೆ ಯವರಾಣಿ ಬಂದಾಗ ಗಣನಾಕ ತನ್ನ ಕತ್ತಿ ಯನ್ನು ಸಾಣೆಹಿಡಿಯುತ್ತ ಇರುತ್ತಾನೆ.

ರಾತ್ರಿ ವೇಳೆ ಅಚಾನಕಾಗಿ ರಾಜ ಮನೆತನದ ಯುವರಾಣಿ ಒಬ್ಬಳು ತನ್ನ ಗುಡಿಸಲಿಗೆ ಬಂದಿದ್ದನ್ನು ಕಂಡು ಚಕಿತನಾದ ಗಣನಾಕ ಯುವ ರಾಣಿಯನ್ನು ಬಂದ ಕಾರಣ ಕೇಳುತ್ತಾನೆ. ಅವಳು ತನ್ನನ್ನು ಮೋಹಿಸುತ್ತಿರುವ ವಿಷಯ ಕೇಳಿ ಗಾಬರಿಯಾದ ಗಣನಾಕ ನಯವಾಗಿ ಅವಳ ಪ್ರೇಮ ಭಿಕ್ಷೆಯನ್ನು ಮೊದ ಮೊದಲು ತಿರಸ್ಕರಿಸಿದರೂ ಸಹ ನಂತರದಲ್ಲಿ ಯುವರಾಣಿಯ ಒತ್ತಾಯಕ್ಕೆ ಕಟ್ಟು ಬಿದ್ದು ಅವಳನ್ನು‌ ಪ್ರೀತಿಸಲಾರಂಭಿಸುತ್ತಾನೆ.

ಸಾಂದರ್ಭಿಕ ಚಿತ್ರ

ಹೀಗೆ ಅವರ ಪ್ರೇಮ ಆರಂಭವಾದ ನಂತರ ಯುವರಾಣಿ ಸಮಯ ಸಿಕ್ಕಾಗಲೆಲ್ಲ ಕದ್ದು ಮುಚ್ಚಿ ಗಣನಾಕನನ್ನು ಸಂಧಿಸುತ್ತಿರುತ್ತಾಳೆ. ಹೀಗೆ ಒಂದು ದಿವಸ ಯುವರಾಣಿ ಗಣನಾಕನನ್ನು ಸಂಧಿಸಿ ಆತನೊಂದಿಗೆ ಸರಸ ಸಲ್ಲಾಪದಲ್ಲಿ ತೊಡಗಿದಾಗ ಅರಮನೆಯ ಕೆಲವು ಕಾವಲುಗಾರರ ಕೈಗೆ ಸಿಕ್ಕಿ ಬಿಳುತ್ತಾರೆ. ತಡ ಮಾಡದೇ ಕಾವಲುಗಾರರು ಯುವರಾಣಿ ಮತ್ತು ಗಣನಾಕರ ಪ್ರೇಮದ ವರದಿಯನ್ನು ಬಾಜಿರಾವನ ಕಿವಿಗೆ ಮುಟ್ಟಿಸುತ್ತಾರೆ ಮಹಾರ್ ಗಣನಾಕನನ್ನು ಬ್ರಾಹ್ಮಣ ಕುಲದ ಅದರಲ್ಲೂ ತನ್ನ ಅರಮನೆಯ ಯುವರಾಣಿ ಪ್ರೀತಿಸುತ್ತಿರುವ ವಿಷಯ ತಿಳಿಯುತ್ತಿದ್ದಂತೆ ಕೋಪೋದ್ರಿಕ್ತನಾದ ಬಾಜಿರಾವ ಗಣನಾಕನನ್ನು ಬಂಧಿಸಿ ಕರೆತರಿಸಿ ಅರಮನೆಯ ಆವರಣದಲ್ಲಿ ತನ್ನ ಕತ್ತಿಯಿಂದ ಗಣನಾಕನ ಶಿರಚ್ಛೇದ ಮಾಡುತ್ತಾನೆ.

ಆದರೂ ಅತನ ಆಕ್ರೋಶ ತಣ್ಣಗಾಗುವುದಿಲ್ಲ. ಅಸ್ಪೃಶ್ಯನೊಬ್ಬನ ಕೇವಲ ಹೆಜ್ಜೆ ಗುರುತು ಮಾತ್ರದಿಂದ ತನ್ನ ಅರಮನೆಯ ಹೆಂಗಸರು ಮೋಹಗೊಂಡ ವಿಷಯ ತಿಳಿಯುತ್ತಿದ್ದಂತೆ ಬಾಜಿರಾವ ಮತ್ತಷ್ಟು ಅವಮಾನ ಕ್ರೋಧಗಳಿಂದ ಕುದ್ದು ಹೋಗಿ ಅವತ್ತೇ ರಾಜಾಜ್ನೆ ಒಂದನ್ನು ಹೊರಡಿಸುತ್ತಾನೆ. ಇನ್ನು ಮುಂದೆ ಯಾವುದೇ ಅಸ್ಪೃಶ್ಯ ಸಮುದಾಯ ಗ್ರಾಮದೊಳಗೆ ಪ್ರವೇಶಿಸುವ ಮುನ್ನ ಸೊಂಟಕ್ಕೆ ಪೊರಕೆ ಕಟ್ಟಿಕೊಂಡು ಪ್ರವೇಶಿಸಬೇಕು. ಅಂದರೆ ಯಾವುದೇ ಅಸ್ಪೃಶ್ಯನ ಹೆಜ್ಜೆ ಗುರುತು ಭೂಮಿ ಮೇಲೆ ಉಳಿಯಬಾರದು ಎನ್ನುವುದು ಈ ಪೊರಕೆ ಕಟ್ಟಿಸಿದ ಹಿಂದಿನ ಮರ್ಮ (ಮಡಿ ಮೈಲಿಗೆ ಹೆಸರಿನ ಹಿಂದಿನ ತಂತ್ರ) ಹೀಗೆ ನಿರಪರಾಧಿ ಗಣನಾಕನ‌ ಹತ್ಯೆ ಮಾಡಿದ ಮೇಲೆ ಬಾಜಿರಾವನ ಅರಮನೆಯಲ್ಲಿ ಬಹಳಷ್ಟು ಕೆಡಕುಗಳು ಆಗಲಾರಂಭಿಸುತ್ತವೆ ಸ್ವತಃ ಬಾಜೀರಾವ ನನ್ನೂ ಕೂಡ ಅನೇಕ ಸಮಸ್ಯೆಗಳು, ಆಂತರಿಕ ಭಯ ಆವರಿಸಿಕೊಳ್ಳುತ್ತದೆ.

ಇವುಗಳಿಗೆ ಪರಿಹಾರ ಕಂಡುಕೊಳ್ಳಲು ಬಾಜಿರಾವ ಜೋತಿಷಿಗಳ ಮೊರೆ ಹೋದಾಗ ಜ್ಯೋತಿಷಿಗಳು ಆತನಿಗೆ ಅಮಾಯಕ ವ್ಯಕ್ತಿಯೊಬ್ಬನನ್ನು ಹತ್ಯೆಗೈದ ದೋಷ ನಿನ್ನನ್ನು ಮತ್ತು ಅರಮನೆಯನ್ನು ಕಾಡುತ್ತಿದೆ ಆದ್ದರಿಂದ ಯಾವ ವ್ಯಕ್ತಿಯ ಹತ್ಯೆ ಮಾಡಿದ್ದಿಯೋ ಆ ವ್ಯಕ್ತಿಯ ಒಂದು ಮಣ್ಣಿನ ಮೂರ್ತಿ ತಯಾರಿಸಿ ಅರಮನೆಯ ಹೊರಗೆ ಅಂದರೆ ಗಣನಾಕ ಕಾವಲು ಕಾಯುತ್ತಿದ್ದ ಕೋಟೆಯ ದ್ವಾರದ ಬಳಿ ಇರಿಸಿ ಐದು ದಿನಗಳವರೆಗೆ ಪೂಜೆ ಸಲ್ಲಿಸಿ ನಂತರ ಅದನ್ನು ಹರಿಯುವ ನೀರಿನಲ್ಲಿ ವಿಸರ್ಜಿಸಬೇಕು ಎನ್ನುವ ಸಲಹೆ ನೀಡುತ್ತಾರೆ.

ಜ್ಯೋತಿಷಿಗಳ ಸಲಹೆಯಂತೆ ಬಾಜಿರಾವ “ಗಣನಾಕ” ನ ಮಣ್ಣಿನ ಮೂರ್ತಿ ಪೂಜಿಸಿ ನಂತರ ಅದನ್ನು ನದಿಯಲ್ಲಿ “ವಿಸರ್ಜಿಸಿ” ಅಲ್ಲೇ ಸ್ನಾನ (ಅರಮನೆ ಒಳಗೆ ತರುವಂತಿರಲಿಲ್ಲ/ ಸ್ನಾನ ಮಾಡದೆ ಬರುವಂತೆಯೂ ಇರಲಿಲ್ಲ ಏಕೆಂದರೆ ಗಣನಾಕ ಒಬ್ಬ ಅಸ್ಪೃಷ್ಯ ಮಹಾರ್ ಸಮುದಾಯದನಾಗಿದ್ದ) ಮುಗಿಸಿ ಅರಮನೆಗೆ ಬರುವ ಒಂದು ಸಂಪ್ರದಾಯ ಆರಂಭ ವಾಗುತ್ತದೆ.

ಬಾಲ ಗಂಗಾಧರ ತಿಲಕ

ಒಂದನೇ ಬಾಜಿರಾವನ ನಂತರವೂ ಈ ಅಸ್ಪೃಶ್ಯ ಮಹಾರ್ “ಗಣನಾಕ” ನ ಮಣ್ಣಿನ ಮೂರ್ತಿ ಯನ್ನು ಪೂಜಿಸಿ ‘ವಿಸರ್ಜಿಸು’ವ ಪರಂಪರೆ ಬ್ರಾಹ್ಮಣ ಪೇಶ್ವೇಗಳು ನಡೆಸಿಕೊಂಡು ಬರುತ್ತಾರೆ. ನಂತರದಲ್ಲಿ ಈ ಸಂಪ್ರದಾಯದ ಮೂಲ ಇತಿಹಾಸದ ಜ್ಞಾನ ಇದ್ದ ಬಾಲ ಗಂಗಾಧರ ತಿಲಕರು ಈ ಸಂಪ್ರದಾಯವನ್ನು ಹೇಗಾದರೂ ಬದಲಾಯಿಸಲೇಬೇಕು ಎನ್ನುವ ಉದ್ದೇಶದಿಂದ ಗಣನಾಕನ ಮೂರ್ತಿ ಬದಲು ಗಣಪತಿಯ ಮಣ್ಣಿನ ಮೂರ್ತಿ ಇಟ್ಟು ಅವನನ್ನು ಗಣ ನಾಯಕ ಎಂದು ಬಿಂಬಿಸಿ ಅದನ್ನೇ ಸಾರ್ವಜನಿಕವಾಗಿ ಪೂಜಿಸುವ ಮತ್ತು ವಿಸರ್ಜಿಸುವ ಪರಿಪಾಠ ಆರಂಭಿಸುತ್ತಾರೆ.

ಇಲ್ಲಿ ಗಮನಿಸತಕ್ಕ ಮುಖ್ಯ ಅಂಶಗಳೆಂದರೆ ಮಹಾರ್ ಗಣನಾಕನ ಪೂಜೆ ಆರಂಭವಾಗಿದ್ದು ಪೇಶ್ವೆಗಳ ರಾಜಧಾನಿ ಆಗಿದ್ದ ಮಹಾರಾಷ್ಟ್ರದ ಪುಣೆಯ ಕೋಟೆಯಲ್ಲಿ. ತಿಲಕರು ಸಾರ್ವಜನಿಕ ಗಣಪತಿ ಪೂಜೆ ಆರಂಭಿಸಿದ್ದೂ ಕೂಡ ಅದೆ ಪುಣೆಯ ಶನಿವಾರ ವಾಡದಲ್ಲಿ. ಬ್ರಾಹ್ಮಣರು ಅಸ್ಪೃಶ್ಯನೊಬ್ಬನ ಪೂಜೆ ಮಾಡುವ ಸಂಪ್ರದಾಯವನ್ನು ತೊಡೆದುಹಾಕುವ ಒಂದೇ ಒಂದು ಉದ್ದೇಶದಿಂದ ತಿಲಕರು ಈ ಪರಂಪರೆ ಆರಂಭಿಸಿದ್ದು. ತಿಲಕರಿಗಿಂತ ಪೂರ್ವದಲ್ಲಿ ಭಾರತದಲ್ಲಿ ಅನೇಕ ಮನೆಗಳಲ್ಲಿ ಗಣಪತಿ ಪೂಜೆ ಚಲಾವಣೆಯಲ್ಲಿ ಇತ್ತು.

ಬಹಳಷ್ಟು ಊರುಗಳಲ್ಲಿ ಗಣಪತಿ ದೇವಸ್ಥಾನಗಳು ಆಗಲೂ ಇದ್ದವು ಈಗಲೂ ಇವೆ. ಆದರೆ ಮಣ್ಣಿನ ಗಣಪತಿಯನ್ನು ಸಾರ್ವಜನಿಕವಾಗಿ ಪೂಜಿಸಿ ನಂತರ “ವಿಸರ್ಜಿಸುವ” ಪರಿಪಾಠ ಆರಂಭಗೊಂಡಿದ್ದು ಮಾತ್ರ ತಿಲಕರಿಂದ. ಮಣ್ಣಿನ ಗಣನಾಯಕ ಅರ್ಥಾತ್ ಗಣನಾಕ ಒಬ್ಬ ಅಸ್ಪೃಶ್ಯ ಆತನನ್ನು ಹರಿಯುವ ನೀರಲ್ಲಿ ಅಂದರೆ ನದಿ ಹಳ್ಳ ಕೆರೆಗಳಲ್ಲಿ ವಿಸರ್ಜಿಸಿ ಅಲ್ಲೇ ಸ್ನಾನ ಮಾಡಿ ಆತನನ್ನು ಸ್ಪರ್ಶಿಸಿದ ಮೈಲಿಗೆಯನ್ನು ಕಳೆದುಕೊಂಡು ಮನೆಗೆ ಬರುವ ಪೇಶ್ವೆಗಳ ಸಂಪ್ರದಾಯವನ್ನು Alteration ಗೊಳಿಸಿ ಗಣನಾಕನ ಮೂರ್ತಿ ಬದಲು ಗಣಪತಿ ಮೂರ್ತಿಯನ್ನು ಸಾರ್ವಜನಿಕವಾಗಿ ಗಣೇಶ ಉತ್ಸವ ವನ್ನು ಆರಂಭಿಸಿದ ತಿಲಕರ ಮೂಲ ಉದ್ದೇಶ ಅರಿಯದ ಕೆಲ ಬರಹಗಾರರು ನಂತರದಲ್ಲಿ ಅದನ್ನು ಸ್ವಾತಂತ್ರ್ಯ ಹೋರಾಟದ ಉದ್ದೇಶದಿಂದ ಶುರು ಮಾಡಿದ ಸಂಪ್ರದಾಯ ಎನ್ನುವ ಮಿಥ್ಯವನ್ನು ದಾಖಲಿಸಿದ್ದನ್ನೇ ಚರಿತ್ರೆ ಎಂದು ನಂಬುವ ಜನಗಳು ಒಂದು ಅಂಶವನ್ನು ಅರಿತುಕೊಳ್ಳಬೇಕು.

ಯಾವುದೇ ಮದುವೆ. ಗೃಹ ಪ್ರವೇಶ ಸಮಾರಂಭಕ್ಕೆ ಬರುವ ಜನಗಳು ದಿಢೀರನೆ (ಯಾವುದೇ ಉದ್ದೇಶಗಳಿಲ್ಲದೇ) ಯಾವುದೇ ಹೊಡೆದಾಟಕ್ಕೆ ನಿಲ್ಲಲು ಹೇಗೆ ಸಾಧ್ಯ ಇಲ್ಲವೋ ಅದೇ ರೀತಿ ಗಣಪತಿ ಪೂಜೆಗೆ ವರ್ಷಕ್ಕೆ ಐದು ದಿನ ಬರುವ ಜನಗಳು ಸ್ವಾತಂತ್ರ್ಯ ಹೋರಾಟದ ಪ್ರೇರಣೆ ಪಡೆದುಕೊಂಡು ಹೋರಾಟಕ್ಕೆ ಧುಮುಕಲು ಸಾಧ್ಯ ಇಲ್ಲ. ಹಾಗೆ ತಿಳಿದುಕೊಳ್ಳುವುದೂ ಕೂಡ ತೀರ ಬಾಲೀಶ್ ವಿಚಾರ. ಸ್ವಾತಂತ್ರ್ಯದ ಕಿಡಿ ಟಿಪ್ಪು. ಚನ್ನಮ್ಮ, ರಾಯಣ್ಣ, ಗಾಂಧಿ, ಭೋಸ್  ಅದಾಗಲೇ ಹಚ್ಚಿ ಆಗಿತ್ತು ಗಣಪತಿ ಉತ್ಸವಕ್ಕೆ ಬಂದ ಜನಗಳಲ್ಲಿ ದೈವ, ದೇವರು ಎನ್ನುವ ಭಕ್ತಿ ಭಾವನೆಯಿಂದ ಸೇರಿಕೊಳ್ಳಬಹುದೇ ಹೊರತು ಉತ್ಸವಕ್ಕೆ ಬಂದು ಸ್ವಾತಂತ್ರ್ಯದ ಕೆಚ್ಚು ತುಂಬಿಕೊಂಡು ಹೋರಾಟದಲ್ಲಿ ಪಾಲ್ಗೊಂಡರು ಎಂದು ತಿಳಿದುಕೊಳ್ಳುವುದು ಮೂರ್ಖನದ ಪರಮಾವಧಿ. ಮಾತ್ರವಲ್ಲ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪಾಲ್ಗೊಂಡು ನೆಣು ಗಂಬಕ್ಕೆ ಕೊರಳು ನೀಡಿದ ನೈಜ ಸ್ವಾತಂತ್ರ್ಯ ಹೋರಾಟಗಾರರಿಗೆ ತೋರಿಸುವ ಅಗೌರವ ಕೂಡ.

ಇವತ್ತು ಹಬ್ಬಗಳು ಉತ್ಸವಗಳು ಫ್ಯಾಶನ್ ಗಳಾಗಿವೆ. ಹಬ್ಬಗಳ ಹೆಸರಲ್ಲಿ ಸರಾಯಿ, ಇಸ್ಪೀಟು, DJ ಮೋಜು ಮಸ್ತಿ ಮಾಡುವ ಜನಗಳು ಖುಷಿಪಟ್ಕೊಳ್ಲಿ ಅವರಿಷ್ಟ ಅವರ ಸ್ವಾತಂತ್ರ. ಅದರ ಜೊತೆಗೆ ಇತಿಹಾಸದ ಕಡೆಗೂ ಸ್ವಲ್ಪ ತಿರುಗಿ ನೋಡುವ ಪರಿಪಾಠ ಬೆಳೆಸಿಕೊಂಡರೆ ಅವರ ಅರಿವಿಗೆ ಹಿಡಿದಿರುವ ಪೊರೆ ಕಳಚಬಹುದು.

ರವೀಂದ್ರ ಎನ್ ಎಸ್ – ಲೇಖಕರು


advertisement

LEAVE A REPLY

Please enter your comment!
Please enter your name here