ವಿಜಯಪುರ: ಪೊಲೀಸ್ ಸಿಬ್ಬಂದಿಗೆ ಕರೋನಾ POSITIVE; ಬ.ಬಾಗೇವಾಡಿ ಹಾಗೂ ಕೂಡಗಿ ಪೊಲೀಸ್ ಠಾಣೆ ಸ್ಥಳಾಂತರ

0
114

ವಿಜಯಪುರ ಜುಲೈ.04: ಕೋವಿಡ್-19 ಪ್ರಯುಕ್ತ ಕಂಟೇನ್‍ಮೆಂಟ್ ಝೋನ್, ಕೋವಿಡ್ ಆಸ್ಪತ್ರೆ ಹಾಗೂ ಕರೋನಾ ಕರ್ತವ್ಯ ನಿರ್ವಹಿಸಿದ ಜಿಲ್ಲೆಯ ಪೊಲೀಸ್ ಇಲಾಖೆಯ 02 ಸಿಬ್ಬಂದಿಗೆ ಕರೋನಾ POSITIVE ವರದಿ ಬಂದಿದ್ದು, ಸದರಿ ಸಿಬ್ಬಂದಿಯವರು ಬ.ಬಾಗೇವಾಡಿ ಹಾಗೂ ಕೂಡಗಿ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಸದರಿ ಸೊಂಕಿತರನ್ನು ನಿಗದಿತ ಕೋವಿಡ್ ಆಸ್ಪತ್ರೆಗೆ ದಾಖಲಿಸಿ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದ್ದು, ಸದರಿ ಕರೋನಾ POSITIVE ಸಿಬ್ಬಂದಿಗಳ Primary and Secondary Contact ಇರುವವರನ್ನು ಗುರುತಿಸಿ ಕ್ವಾರಂಟೈನ್ ಮಾಡಿಲಾಗಿದೆ. ಅಲ್ಲದೇ ಸೊಂಕಿತರು ಕರ್ತವ್ಯ ನಿರ್ವಹಿಸುತ್ತಿದ್ದ ಕೂಡಗಿ ಪೊಲೀಸ್ ಠಾಣೆಯನ್ನು ನಿಡಗುಂದಿ ಪೊಲೀಸ್ ಠಾಣೆ ಆವರಣದಲ್ಲಿ ಹಾಗೂ ಬ. ಬಾಗೇವಾಡಿ ಪೊಲೀಸ್ ಠಾಣೆಯನ್ನು ಪೊಲೀಸ್ ಉಪಾಧೀಕ್ಷಕರು, ಬ.ಬಾಗೇವಾಡಿ ರವರ ಖಾಲಿ ಇರುವ ಪೊಲೀಸ್ ವಸತಿ ಗೃಹದಲ್ಲಿ ಸ್ಥಳಾಂತರಿಸಿ ಕಾರ್ಯ ನಿರ್ವಹಿಸುವಂತೆ ಸೂಕ್ತ ವ್ಯವಸ್ಥೆ ಮಾಡಿದೆ.


 

LEAVE A REPLY

Please enter your comment!
Please enter your name here