ವಿಜಯಪುರ ಜಿಲ್ಲಾ ಪಂಚಾಯತ ನೂತನ ಅಧ್ಯಕ್ಷರಾಗಿ ಕಾಂಗ್ರೇಸ್ ಪಕ್ಷದ ಶ್ರೀಮತಿ ಸುಜಾತಾ ಕಳ್ಳಿಮನಿ ಆಯ್ಕೆ

0
211

ವಿಜಯಪುರ ಜೂನ್ 30 : ವಿಜಯಪುರ ಜಿಲ್ಲಾ ಪಂಚಾಯತನ ನೂತನ ಅಧ್ಯಕ್ಷರಾಗಿ ಕಾಂಗ್ರೇಸ್ ಅಭ್ಯರ್ಥಿ ಶ್ರೀಮತಿ ಸುಜಾತಾ ಸೋಮನಾಥ ಕಳ್ಳಿಮನಿ ಅವರು ಚುನಾಯಿತರಾಗಿದ್ದಾರೆ.

ಇಂದು ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಜಿ.ಪಂ ಅಧ್ಯಕ್ಷರ ಆಯ್ಕೆಗೆ ನಡೆದ ಚುನಾವಣಾ ಸಭೆಯಲ್ಲಿ ಒಟ್ಟು 22 ಸದಸ್ಯರು ಶ್ರೀಮತಿ ಸುಜಾತಾ ಸೋಮನಾಥ ಕಳ್ಳಿಮನಿ ಅವರ ಪರವಾಗಿ ಕೈ ಎತ್ತುವ ಮೂಲಕ ಬೆಂಬಲ ಸೂಚಿಸಿ ಚುನಾಯಿತಗೊಳಿಸಿದರು. ಇವರ ವಿರುದ್ಧವಾಗಿ ಯಾವುದೇ ಮತಗಳು ಚಲಾಯಿಸಲ್ಪಡಲಿಲ್ಲ.
ಇವರ ಸಮೀಪದ ಪ್ರತಿಸ್ಫರ್ಧಿ ಬಿಜೆಪಿ ಪಕ್ಷದ ಶ್ರೀ ಭೀಮಾಶಂಕರ ಮಹಾದೇವಪ್ಪ ಬಿರಾದಾರ ಅವರ ಪರವಾಗಿ ಒಟ್ಟು 20 ಮತಗಳು ಮಾತ್ರ ಚಲಾವಣೆಗೊಂಡು ವಿರುದ್ಧವಾಗಿ 22 ಮತಗಳು ಚಲಾವಣೆಗೊಂಡಿದ್ದರಿಂದ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಇವರು ಪರಭಾವಗೊಂಡರು.

ಚುನಾವಣಾ ಪ್ರಕ್ರಿಯೆಯನ್ನು ಪ್ರಾದೇಶಿಕ ಆಯುಕ್ತರಾದ ಆದಿತ್ಯ ಆಮ್ಲನ್ ಬಿಸ್ವಾಸ್ ಅವರ ನೇತೃತ್ವದಲ್ಲಿ ನಡೆಸಲಾಯಿತು. ಇಂದು ಬೆಳಿಗ್ಗೆ 10.00 ಗಂಟೆಯಿಂದ ಮಧ್ಯಾಹ್ನ 1.00 ಗಂಟೆಯವರೆಗೆ ಈ ಇಬ್ಬರು ಮಾತ್ರ ಚುನಾವಣೆಗೆ ನಾಮಪತ್ರವನ್ನು ಸಲ್ಲಿಸಿದ್ದರು. ಶ್ರೀ ಭೀಮಾಶಂಕರ ಬಿರಾದಾರ ಅವರ ಎರಡು ನಾಮಪತ್ರಗಳು ಮತ್ತು ಸುಜಾತಾ ಕಳ್ಳಿಮನಿ ಅವರ ಒಂದು ನಾಮಪತ್ರ ಸಿಂಧುವಾಗಿದ್ದವು. ಒಟ್ಟು 42 ಸದಸ್ಯ ಬಲದ ಜಿಲ್ಲಾ ಪಂಚಾಯತನ ಚುಕ್ಕಾಣಿಯೂ ಕಾಂಗ್ರೇಸ್ ಕೈಗೆ ದಕ್ಕಿದ್ದು, ಬಿಜೆಪಿ ಅಭ್ಯರ್ಥಿ ಪರಾಭವಗೊಂಡಿದ್ದಾರೆ.
ಚುನಾವಣಾ ಸಭೆ ನಡೆಯುವ ಸಂದರ್ಭದಲ್ಲಿ ಬಿಜೆಪಿ ಅಭ್ಯರ್ಥಿ ಶ್ರೀ ಭೀಮಾಶಂಕರ ಪರವಾಗಿ ಮತ ಚಲಾವಣೆ ಸಂದರ್ಭದಲ್ಲಿ ಸ್ವಲ್ಪ ಸಮಯ ಗೊಂದಲವಾಗಿದ್ದರೂ ಪ್ರಾದೇಶಿಕ ಆಯುಕ್ತರ ಎಚ್ಚರಿಕೆ ಅನ್ವಯ ಚುನಾವಣಾ ಪ್ರಕ್ರಿಯೆ ಮುಂದುವೆರಸಲಾಯಿತು. ಇದೇ ಸಂದರ್ಭದಲ್ಲಿ ಪ್ರಥಮ ಅಭ್ಯರ್ಥಿ ಭೀಮಾಶಂಕರ ಬಿರಾದಾರ ಅವರ ಪರವಾಗಿ ಮತ ಚಲಾವಣೆ ನಂತರ ಪರವಾಗಿದ್ದ ಅಭ್ಯರ್ಥಿಗಳು ಹೊರ ನಡೆದರು.

ಚುನಾವಣಾ ಸಮಯ ನಿಗದಿಪಡಿಸಿದ್ದ ಹಿನ್ನೆಲೆಯಲ್ಲಿ ಮತ್ತು ಮತದಾನಕ್ಕೆ ಅವಧಿ ನಿಗದಿ ಪಡಿಸಿದ್ದರ ಹಿನ್ನೆಲೆಯಲ್ಲಿ ಮತದಾನ ಪ್ರಕ್ರಿಯೆ ನಿಲ್ಲಿಸಲು ಅಸಾಧ್ಯ ಎಂದು ಪರಿಗಣಿಸಿ ಪ್ರಾದೇಶಿಕ ಆಯುಕ್ತರು ಮತ್ತು ಅಧ್ಯಕ್ಷಾಧಿಕಾರಿಗಳು ನಂತರದ ಚುನಾವಣಾ ಪ್ರಕ್ರಿಯೆ ಪೂರ್ಣಗೊಳಿಸಲು ಸೂಚನೆ ನೀಡಿದರು. ನಂತರ ನಡೆದ ಮತದಾನದಲ್ಲಿ ಸಾರವಾಡದ ಜಿಲ್ಲಾ ಪಂಚಾಯತ ಸದಸ್ಯರು ಆಗಿರುವ ಕಾಂಗ್ರೇಸ್ ಪಕ್ಷದ ಶ್ರೀಮತಿ ಸುಜಾತಾ ಸೋಮನಾಥ ಕಳ್ಳಿಮನಿ ಅವರು 22 ಮತಗಳನ್ನು ಪಡೆಯುವ ಮೂಲಕ ವಿಜಯಿಯಾದರು.

ಜಿಲ್ಲಾ ಪಂಚಾಯತ ಅಧ್ಯಕ್ಷರ ಸ್ಥಾನವನ್ನು “ಹಿಂದುಳಿದ ವರ್ಗ – ಅ” ಗೆ ಮೀಸಲಿಡಲಾಗಿತ್ತು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ, ಜಿ.ಪಂ ಸಿಇಒ ಗೋವಿಂದ ರೆಡ್ಡಿ, ಅಪರ ಜಿಲ್ಲಾಧಿಕಾರಿ ಡಾ.ಔದ್ರಾಮ ಅವರು ಉಪಸ್ಥಿತರಿದ್ದರು.


 

ambedkar image

LEAVE A REPLY

Please enter your comment!
Please enter your name here