ವಿಜಯಪುರ: ಕೊರೋನಾ ಸೋಂಕಿತ ತಾಯಿ, ಅವಳಿ ಹೆಣ್ಣು ಮಕ್ಕಳು ಸೇಫ್; ವೈದೈರು ಪುಲ್ ಖುಷ್!

0
207

ವಿಜಯಪುರ ಜೂನ್ 22: ಕೋವಿಡ್-19 ಪಾಸಿಟಿವ್ ರೋಗಿ ಸಂಖ್ಯೆ 8789 ಮಹಿಳೆಗೆ ಸಹಜ ಹೆರಿಗೆ ಮಾಡಿಸುವಲ್ಲಿ ಡಾ.ಮನ್‍ಪ್ರೀತ್ ಕೌರ್ ಅವರನ್ನು ಒಳಗೊಂಡ ತಂಡವು ಯಶಸ್ವಿಯಾಗಿದ್ದು, ಅವಳಿ ಹೆಣ್ಣುಮಕ್ಕಳನ್ನು ಜನ್ಮ ನೀಡಿದ ತಾಯಿ ಹಾಗೂ ಅವಳಿ ಮಕ್ಕಳ ಆರೋಗ್ಯವಂತರಾಗಿದ್ದರೆಂದು ಜಿಲ್ಲಾಸ್ಪತ್ರೆಯ ಸರ್ಜನ್ ಶರಣಪ್ಪ ಕಟ್ಟಿ ಅವರು ತಿಳಿಸಿದ್ದಾರೆ.

ಕೋವಿಡ್-19 ಪಾಸಿಟಿವ್ ಮಹಿಳೆಗೆ ಜನಿಸಿದ ಅವಳಿ ಹೆಣ್ಣು ಮಕ್ಕಳಲ್ಲಿ ಪ್ರಥಮ ಮಗು 2.0 ಕೆ.ಜಿ ಹಾಗೂ ಎರಡನೇ ಮಗು 2.1 ಕೆ.ಜಿ ತೂಕವನ್ನು ಹೊಂದಿದ್ದು, ತಾಯಿ ಸೇರಿದಂತೆ ಅವಳಿ ಹೆಣ್ಣು ಮಕ್ಕಳು ಆರೋಗ್ಯವಂತರಾಗಿದ್ದಾರೆಂದು ಅವರು ತಿಳಿಸಿದ್ದಾರೆ.

ಡಾ.ಮನ್‍ಪ್ರೀತ್ ಕೌರ್ ತಹರೀಯಾ, ಸಿಸ್ಟರ್ ಕಾಶೀಬಾಯಿ, ಡಾ.ಉಪಾಸೆ, ರವಿ ಕೂಚಬಾಳ, ಮೊಹಸೀನ್ ಮಮದಾಪೂರ, ಕ್ಲಾಸ್ ಡಿ ಸಿಬ್ಬಂದಿ ಮಲ್ಲಿಕಾರ್ಜುನ ಅವರನ್ನು ಒಳಗೊಂಡ ವೈದ್ಯರ ತಂಡವು ಕೋವಿಡ್-19 ಮಹಿಳೆಗೆ ಸಹಜ ಮತ್ತು ಯಶಸ್ವಿಯಾಗಿ ಹೆರಿಗೆ ಮಾಡಿಸಿದ್ದು, ಇದಕ್ಕಾಗಿ ವೈದ್ಯರ ತಂಡಕ್ಕೆ ಅಭಿನಂದನೆ ಜೊತೆಗೆ ಪ್ರಶಂಸೆ ಸಹ ನಾಗರೀಕರಿಂದ ವ್ಯಕ್ತವಾಗಿದೆ.

ಈ ಬಗ್ಗೆ ಡಾ.ಮನ್‍ಪ್ರೀತ್ ಕೌರ್ ತಹರೀಯಾ ಅವರು ಇದು ಇಂತಹ ಎರಡನೇ ಪ್ರಕರಣವಾಗಿದ್ದು, ಅನೇಮಿಯಾದಿಂದ ಬಳಲುತ್ತಿದ್ದ, ಈ ಮಹಿಳೆಗೆ ಬೆಳಿಗ್ಗೆ ಬೇನೆ ಕಾಣಿಸಿಕೊಂಡಿತ್ತು. ನಂತರ ಎಲ್ಲ ಸಿಬ್ಬಂದಿಗಳ ಸಹಕಾರದೊಂದಿಗೆ ಯಶಸ್ವಿಯಾಗಿ ಮಹಿಳೆಗೆ ಸಹಜ ಹೆರಿಗೆ ಮಾಡಿಸಲಾಯಿತು. ಅವಳಿ ಮಕ್ಕಳು ಮತ್ತು ತಾಯಿ ಆರೋಗ್ಯವಾಗಿದ್ದಾರೆ ಎಂದು ತಿಳಿಸಿದ್ದಾರೆ.


ambedkar image

LEAVE A REPLY

Please enter your comment!
Please enter your name here