ವಿಜಯಪುರ ತಹಸೀಲ್ದಾರ್ ವಾಹನ ಚಾಲಕನ ಶವ ನಾಲ್ಕು ದಿನದ ನಂತರ IB ಯಲ್ಲಿ ಪತ್ತೆ

0
137

ವಿಜಯಪುರ ಜೂನ್.21: ತಹಸೀಲ್ದಾರ್ ವಾಹನದ ಖಾಸಗಿ ಚಾಲಕ ಆತ್ಮಹತ್ಯಗೆ ಶರಣಾದ ಘಟನೆ ವಿಜಯಪುರ ನಗರದ ನೂತನ ಪ್ರವಾಸಿ ತಾಣದ ಕಟ್ಟಡದ ಕಿಟಕಿಗೆ ನೇಣು ಹಾಕಿಕೊಂಡಿದ್ದಾನೆ.

ಆರೀಫ್ ಜುನೇದಿ (38) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ. ನಾಲ್ಕು ದಿನಗಳಿಂದ ಮನೆಯಿಂದ ಕಾಣೆಯಾಗಿದ್ದು, ಸೇವೆಗೂ ಹಾಜರಾಗಿರಲಿಲ್ಲ. ಇದರಿಂದ ಆತಂಕಕ್ಕೊಳಗಾದ ಕುಟುಂಬಸ್ಥರು ಶನಿವಾರ ಮಧ್ಯಾಹ್ನ ಗಾಂಧೀವೃತ್ತ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ನಿನ್ನೆ ಸಂಜೆ 5 ಘಂಟೆ ವೇಳೆಗೆ ಆರೀಫ್ ಶವ ಪತ್ತೆಯಾಗಿದ್ದು, ಸ್ಥಳಕ್ಕೆ ವಿಜಯಪುರ ತಹಶೀಲ್ದಾರ ಮೋಹನ ಕುಮಾರಿ ಹಾಗೂ ಡಿವೈಎಸ್ಪಿ ಲಕ್ಷ್ಮೀ ನಾರಾಯಣ ಇತರ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಗಾಂಧಿವೃತ್ತ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


 

LEAVE A REPLY

Please enter your comment!
Please enter your name here