ಹುತಾತ್ಮ ಕರ್ನಲ್ ಸಂತೋಷ ಕುಟುಂಬಕ್ಕೆ 5 ಕೋಟಿ ಪರಿಹಾರ ಘೋಷಿಸಿದ ತೆಲಂಗಾಣ ಸಿಎಂ ಚಂದ್ರಶೇಖರ ರಾವ್

0
200

ಹೈದರಾಬಾದ್ ಜೂನ್.20: ಲಡಾಖನ ಗಲ್ವಾನ್ ಗಡಿಯಲ್ಲಿ ಭಾರತ ಚೀನಾ ನಡುವೆ ಸಂಭವಿಸಿದ ಸಂಘರ್ಷದಲ್ಲಿ ಹುತಾತ್ಮರಾದ ಕರ್ನಲ್ ಸಂತೋಷ ಬಾಬು ಅವರ ಕುಟುಂಬಕ್ಕೆ ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ 5 ಕೋಟಿ ಪರಿಹಾರ ಹಾಗೂ ಸಂತೋಷ ಬಾಬುರವರ ಪತ್ನಿಗೆ ಸರಕಾರಿ ಕೆಲಸ ನೀಡುವುದಾಗಿ ಘೋಷಿಸಿದ್ದಾರೆ.

ಹುತಾತ್ಮ ಸಂತೋಷ ಬಾಬು ಅವರ ಮನೆಗೆ ಸಿಎಂ ಚಂದ್ರಶೇಖರ ರಾವ್ ಬೇಟಿ ನೀಡಿ ಕುಟುಂಬದವರಿಗೆ ಸಾಂತ್ವಾನ ಹೇಳಿ ಜೊತೆಗೆ ಪರಿಹಾರ ನೀಡುವುದಾಗಿ ಭರವಸೆ ನೀಡಿದ್ದಾರೆ. ಇತರ 19 ಹುತಾತ್ಮ ಯೋಧರ ಕುಟುಂಬಸ್ಥರಿಗೆ ತಲಾ 10 ಲಕ್ಷ ರೂ. ನೀಡುವುದಾಗಿಯೂ ಅವರು ಘೋಷಿಸಿದ್ದಾರೆ.

ಭಾರತ ಚೀನಾ ಗಡಿ ಪ್ರದೇಶದಲ್ಲಿ ಪೆಟ್ರೋಲಿಂಗ್ ಪಾಯಿಂಟ್ 14 ರ ಬಳಿ ಟೆಂಟ್ ನಿರ್ಮಿಸಿತ್ತು. ಲೆಂಫ್ಟಿನೆಂಟ್ ಕಮಾಂಡರ ಮಟ್ಟದಲ್ಲಿ ಸಭೆ ನಡೆಸಿ ಟೆಂಟ್ ತೆರವುಗೊಳಿಸುವಂತೆ ಸೂಚಿಸಲಾಗಿತ್ತು. ಇದನ್ನು ಪರಿಶೀಲಿಸಲು ಕರ್ನಲ್ ಸಂತೋಷ ಬಾಬು, ಪಳನಿ, ಓಝೋ ಗಸ್ತು ಹೋಗಿದ್ದರು. ಆದರೆ ತಾತ್ಕಾಲಿಕ ಟೆಂಟ್ ನಿರ್ಮಿಸಿದ್ದ ಚೀನಿ ತೆರವು ಮಾಡದ ಹಿನ್ನೆಲೆಯಲ್ಲಿ ಮಾತುಕತೆ ನಡೆಸುತ್ತಿದ್ದಾಗಲೇ ಚೀನಿ ಸೈನಿಕರು ಹಲ್ಲೇ ನಡೆಸಿದರು. ಈ ವಿಚಾರ ತಿಳಿಯುತಿದಂತೆ ಭಾರತೀಯ ಸೈನಿಕರು ಮತ್ತಷ್ಟು ಜಮಾವಣೆಗೊಳ್ಳುತಿದ್ದಂತೆ ಚೀನಿ ಸೈನಿಕರು ಕಲ್ಲು ತೂರಾಟ ನಡೆಸಿ ಕಬ್ಬಿಣದ ರಾಡಗಳಿಂದ ಭಾರತೀಯ ಸೈನಿಕರಿಗೆ ಹೊಡೆದಿದ್ದಾರೆ. ಈ ಘರ್ಷಣೆಯಲ್ಲಿ ಭಾರತದ 20 ಸೈನಿಕರು ಹುತಾತ್ಮರಾದರು.


 

LEAVE A REPLY

Please enter your comment!
Please enter your name here