ಭಾರತದ ಸೈನಿಕರು ಹುತಾತ್ಮರಾದದ್ದು ಎಲ್ಲಿ? ರಾಹುಲ್ ಗಾಂಧೀ ಆಕ್ರೋಶ

0
172

ನವದೆಹಲಿ ಜೂನ.20: ಗಲ್ವಾನ್‍ನಲ್ಲಿ ಭಾರತ-ಚೀನಾ ಸಂಘರ್ಷ ನಡೆದು ಭಾರತದ 20 ಸೈನಿಕರು ಹುತಾತ್ಮರಾದರು. ಈ ಕುರಿತು ಕಾಂಗ್ರೇಸ್ ಸಂಸದ ರಾಹುಲ್ ಗಾಂಧಿ, ಭಾರತದ ಭೂಮಿಯನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಚೀನಾ ದೇಶಕ್ಕೆ ಒಪ್ಪಿಸಿದ್ದಾರೆ ಎಂದು ಕಿಡಿಕಾರಿದ್ದಾರೆ.

ತಮ್ಮ ಟ್ವೀಟರ್‍ನಲ್ಲಿ ಆಕ್ರೋಶ ವ್ಯಕ್ತಪಡಿಸಿದ ರಾಹುಲ್ ಅದು ನಿಜಕ್ಕೂ ಚೀನಾ ದೇಶದ ಭೂಮಿಯೇ ಆಗಿದ್ದರೆ ನಮ್ಮ ಸೈನಿಕರನ್ನು ಕಳುಹಿಸಿ ಹುತಾತ್ಮರಾಗುವಂತೆ ಮಾಡಿದೇಕೆ ? ನಿಜವಾಗಿಯೂ ಭಾರತದ ಸೈನಿಕರು ಹುತಾತ್ಮರಾದದ್ದು ಎಲ್ಲಿ ? ಎಂಬ ಪ್ರಶ್ನೆಗಳನ್ನು ಕೇಳಿದ್ದಾರೆ.

ನಮ್ಮ ಸೈನಿಕರನ್ನು ಕೊಲ್ಲಲು ಚೀನಾಗೆ ಎಷ್ಟು ಧೈರ್ಯ ? ಸೈನಿಕರನ್ನು ನಿಶಸ್ರ್ತವಾಗಿ ಕಳುಹಿಸಿದ್ದೇಕೆ ? ಇಷ್ಟಲ್ಲಾ ಘಟನೆ ಜರುಗಿದರೂ ಪ್ರಧಾನಿ ಮೋದಿ ಮೌನವಾಗಿರುವುದೇಕೆ? ಮೋದಿ ವಾಸ್ತವವನ್ನು ಏಕೆ ಮುಚ್ಚಿಡುತ್ತಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ.


 

 

LEAVE A REPLY

Please enter your comment!
Please enter your name here