ಕಲಬುರ್ಗಿಯಲ್ಲಿ ರೌಡಿಶೀಟರ್ ಹತ್ಯೆ: ಸ್ನೇಹಿತರಿಂದಲೇ ಸ್ಕೇಚ್

0
157

ಕಲಬುರ್ಗಿ ಜೂನ್ .20: ಕಲಬುರ್ಗಿಯಲ್ಲಿ ರೌಡಿಶೀಟರನನ್ನು ಮಾರಕಾಸ್ರ್ತಗಳಿಂದ ಬರ್ಬರವಾಗಿ ಕೊಲೆ ಮಾಡಿದ್ದಾರೆ. ಚಾಕುವಿನಿಂದ ಇರಿದು ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಲಾಗಿದೆ. ಕಲಬುರ್ಗಿ ನಗರದ ರಿಂಗ್ ರಸ್ತೆಯ ಪೀರ ಬಂಗಾಲಿ ಮೈದಾನದಲ್ಲಿ ಘಟನೆ ನಡೆದಿದೆ.

ಕೊಲೆಯಾದ ರೌಡಿಶೀಟರನನ್ನು ಹಸನ್ ಅಲಿ(24) ಎಂದು ಗುರುತಿಸಲಾಗಿದೆ. ಸ್ನೇಹಿತರ ನಡುವೆ ಗಲಾಟೆ ಜೋರಾಗಿ ವಿಕೋಪಕ್ಕೆ ಹೋಗಿ ಕೊಲೆ ನಡೆದಿದೆ ಎಂದು ಹೇಳಲಾಗುತ್ತಿದೆ. ಕೊಲೆಯಾದ ಹಸನ್ ಅಲಿ ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ. ಈತನ ಮೇಲೆ ಕೊಲೆ ಪ್ರಕರಣ, ಬೈಕ್ ಪ್ರಕರಣಗಳಲ್ಲಿ ಆರೋಪಿಯಾಗಿದ್ದ. ಕೊಲೆ ಪ್ರಕರಣವೊಂದರಲ್ಲಿ ಭಾಗಿಯಾಗಿದ್ದ ಅಲಿ ಆರು ತಿಂಗಳ ಹಿಂದಷ್ಟೇ ಬೇಲ್ ಮೇಲೆ ಹೊರಬಂದಿದ್ದ. ಹಳೆ ವೈಷಮ್ಯದಿಂದ ಸ್ನೇಹಿತರೇ ಕೊಲೆ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.

ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಡಿಸಿಪಿ ಕಿಶೋರ್ ಬಾಬು ಮಾಹಿತಿ ನೀಡಿದ್ದಾರೆ.


 

LEAVE A REPLY

Please enter your comment!
Please enter your name here