ಯೋಗಾ ಆ್ಯಟ್ ಹೋಮ್, ಯೋಗಾ ವಿಥ್ ಫ್ಯಾಮೀಲಿ

0
69

ವಿಜಯಪುರ ಜೂನ್ 19: ಕೊರೊನಾ ಹಾವಳಿಯ ಹಿನ್ನಲೆಯಲ್ಲಿ ಭಾರತ ಸರ್ಕಾರದ ಆಯುಷ್ ಮಂತ್ರಾಲಯದ ನಿರ್ದೇಶನದಂತೆ ಇದೇ ಜೂನ 21 ರಂದು ಆಚರಿಸಲಾಗುವ ವಿಶ್ವ ಯೋಗ ದಿನವನ್ನು ಮನೆಯಲ್ಲಿಯೇ ಸಕ್ರೀಯವಾಗಿ ಭಾಗವಹಿಸಿ ಆಚರಿಸುವಂತೆ ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

ಕೋವಿಡ್-19 ಸಾಂಕ್ರಾಮಿಕ ರೋಗ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಜೂನ 21 ರಂದು ಆಚರಿಸಲಾಗುವ ವಿಶ್ವ ಯೋಗ ದಿನವನ್ನು ಮನೆಯಲ್ಲಿ ಕುಟುಂಬ ಸದಸ್ಯರೊಂದಿಗೆ ‘’ಮನೆಯಲ್ಲೇ ಯೋಗ, ಕುಟುಂಬದೊಂದಿಗೆ ಯೋಗ’’(ಯೋಗಾ ಆ್ಯಟ್ ಹೋಮ್, ಯೋಗಾ ವಿಥ್ ಫ್ಯಾಮೀಲಿ)’’ ಎನ್ನುವ ಘೋಷ ವಾಖ್ಯಾನದೊಂದಿಗೆ ಯೋಗ ಕಾರ್ಯಕ್ರಮದಲ್ಲಿ ಸಕ್ರೀಯವಾಗಿ ಭಾಗವಹಿಸಿ ಯೋಗಾ ದಿನಾಚರಣೆ ಆಚರಿಸಲು ಅವರು ತಿಳಿಸಿದ್ದಾರೆ.
ಇದೇ ದಿನಾಂಕ 21 ರಂದು ಬೆಳಿಗ್ಗೆ 6-15 ಗಂಟೆಗೆ ಮಾನ್ಯ ಪ್ರಧಾನಮಂತ್ರಿಗಳು ವಿಶ್ವ ಯೋಗ ದಿನಾಚರಣೆಯನ್ನು ಉದ್ಘಾಟಿಸಲಿದ್ದು, ಬೆಳಿಗ್ಗೆ 7 ಗಂಟೆಗೆ ಡಿಡಿ ನ್ಯಾಷನಲ್, ಡಿಡಿ ಸುದ್ದಿವಾಹಿನಿ, ಡಿಡಿ ಭಾರತಿ, ಡಿಡಿ ಇಂಡಿಯಾ, ಡಿಡಿ ಉರ್ದು, ಡಿಡಿ ಸ್ಪೂಟ್ರ್ಸ, ಡಿಡಿ ಕಿಸಾನ ವಾಹಿನಿಗಳಲ್ಲಿ ಒಬ್ಬ ಪುರುಷ ಹಾಗೂ ಒಬ್ಬ ಮಹಿಳೆ ಯೋಗ ಪ್ರದರ್ಶನ ಮಾಡಲಿದ್ದು ನೇರ ಪ್ರಸಾರದಲ್ಲಿ ವೀಕ್ಷಿಸಿಬಹುದಾಗಿದೆ ಎಂದು ತಿಳಿಸಿದ್ದಾರೆ.

ಕೋವಿಡ್-19 ಹಿನ್ನಲೆಯಲ್ಲಿ ಸಾರ್ವಜನಿಕ ಸಭೆ ಸಮಾರಂಭಗಳಿಗೆ ನಿಷೇಧವಿರುವುರಿಂದ ಪ್ರಸ್ತ್ತುತ ಜೂನ್ 21ರ ಯೋಗಾ ದಿನಾಚರಣೆಯನ್ನು ಮನೆಯಿಂದಲೇ ಆಚರಿಸುವ ಕುರಿತಂತೆ ಆಯುರ್ವೇದ, ಯೋಗಾ ಮತ್ತು ಯುನಾನಿ, ಸಿದ್ದ ಮತ್ತು ಹೋಮಿಯೊಪತಿಕ್ ಆಯುಷ್ ಇಲಾಖೆಯ ಆಯುಕ್ತರು ಸುತ್ತೋಲೆ ಸಹ ಹೊರಡಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ.


 

LEAVE A REPLY

Please enter your comment!
Please enter your name here