ಅರಿಶಿನ ಲಾರಿ ದರೋಡೆ: 7 ಜನರ ಬಂದನ

0
105

ಬೆಳಗಾವಿ ಜೂ.16: ಏಳು ಜನ ದರೋಡೆಕೋರರನ್ನು ಬಂಧಿಸುವ ಮೂಲಕ ಅರಿಶಿನ ಲಾರಿ ಕಳ್ಳತನ ಹಾಗೂ ದರೋಡೆಗೆ ಸಂಬಂಧಿಸಿದಂತೆ ಬಂಧಿತರಿಂದ 1.3 ಕೋಟಿ ಮೌಲ್ಯದ ವಸ್ತುಗಳನ್ನು ಚಿಕ್ಕೋಡಿ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಬಂಧಿತರು ಅಥಣಿ ತಾಲೂಕಿನ ಸಂಬರಗಿ ಗ್ರಾಮದವರು ಎಂದು ಜಿಲ್ಲಾ ಪೊಲೀಸವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಈ ಕುರಿತು ಮಾಹಿತಿ ನೀದ್ದಾರೆ. ಜೂ.07 ರಂದು ತಮಿಳುನಾಡಿನ ಎಂ. ಚಿನ್ನಸ್ವಾಮಿ ಎಂಬುವರು ಅರಿಶಿಣ ತುಂಬಿಕೊಂಡು ಕಬ್ಬೂರ ಗ್ರಾಮದಿಂದ ಚಿಕ್ಕೋಡಿಗೆ ಬರುವಾಗ ಕಬ್ಬೂರದಿಂದ 2 ಕಿ.ಮೀ ದೂರದಲ್ಲಿ ದರೋಡೆಕೋರರು ಚಾಲಕ ಮತ್ತು ಕ್ಲೀನರ್‍ನನ್ನು ಅಪಹರಿಸಿದ್ದರು ನಂತರ ಲಾರಿಯನ್ನು ಅಪಹರಿಸಿ 13 ಲಕ್ಷ ರೂ. ಮೌಲ್ಯದ ಅರಿಶಿಣವನ್ನು ದರೋಡೆ ಮಾಡಿದ್ದರು.

ಬಂದಿತರಿಂದ ಲಾರಿ, ಟ್ರ್ಯಾಕ್ಟರ್, ಎರಡು ಕಾರು, ದ್ವಿಚಕ್ರ ವಾಹನ, ಸೇರಿದಂತೆ 1.3 ಕೋಟಿ ರೂ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡು ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ.


 

LEAVE A REPLY

Please enter your comment!
Please enter your name here