ಅವಳನ್ನು ದ್ವೇಷಿಸುವ ಮೊದಲು…..!

0
401

ಹೀಗೊಂದು ಮಾತು ಹೇಳಿದರೆ ನಿಮಗೆ ಬೇಸರವಾಗಲಿಕ್ಕಿಲ್ಲ. ದ್ವೇಷದಿಂದ ಏನನ್ನು ಸಾಧಿಸಲಿಕ್ಕೆ ಆಗುವುದಿಲ್ಲ. ಎಂಬ ಮಾತು ಎಲ್ಲರಿಗೂ ಗೊತ್ತು. ಆದರೂ ಪ್ರತಿಯೊಬ್ಬನಲ್ಲಿಯೂ ದ್ವೇಷದ ಭಾವನೆ ಇದ್ದೇ ಇರುತ್ತದೆ. ನಾವು ದ್ವೇಷವನ್ನು ಇನ್ನೊಬ್ಬರಿಗೆ ಕೊಡುವುದಾದರೆ, ಅದನ್ನು ಪ್ರೀತಿಯಿಂದಲೇ ಕೊಡಬೇಕು. ಆ ದ್ವೇಷವನ್ನು ಸ್ವೀಕರಿಸಲು ಸಾಧ್ಯವಿದೆ. ನಾನೀಗ ಮತ್ತೊಂದು ಮಾತು ಹೇಳಿದರೆ ನಿಮಗೆ ಆಘಾತವಾಗಬಹದು. “ಪ್ರೀತಿಯನ್ನು ಪ್ರೀತಿಯಿಂದ ಕೊಟ್ಟರೆ ಈ ಪ್ರಪಂಚದಲ್ಲಿ ಎಷ್ಟೋ ಜನ ದ್ವೇಷಿಸುವವರು ಇದ್ದಾರೆ” ಇದೆಲ್ಲ ಯಾಕೆ ಹೀಗೆ ಆಗುತ್ತದೆ ಎಂದರೆ ನಮ್ಮ ಪ್ರೀತಿಯಲ್ಲಿ ನಮಗೆ ತಿಳಿಯದ ಹಾಗೆ ಏಲ್ಲೋ ದ್ವೇಷದ ಭಾವನೆ ಇದ್ದಿರಬಹುದು. ಅಥವಾ ಯಾವುದಾದರೊಂದು ಸ್ವಾರ್ಥದ ಭಾವನೆಯಂತೂ ಇದ್ದಿರಬಹುದು. ಯಾವ ಪ್ರೀತಿ ಪ್ರತಿಫಲ ಬಯಸುತ್ತದೆಯೋ ಅದು ಬಹಳ ದಿನಗಳವರೆಗೆ ಬದುಕುವುದಿಲ್ಲ. ಹಾಗೂ ಆ ಪ್ರೀತಿಯ ಹಿಂದೆ ದ್ವೇಷದ ಭಾವನೆ ಬಂದಿತವಾಗಿ ಹುಟ್ಟಡಗಲೇಬೇಕಾಗುತ್ತದೆ. ಇಂಥ ಮಾತುಗಳೆಲ್ಲ ಒತ್ತಟ್ಟಿಗೆ ಇರಲಿ, ಆದರೆ, ಅವಳನ್ನು ದ್ವೇಷಿಸುವ ಮೊದಲು ಒಂದು ಸಲ ಆಳವಾಗಿ ವಿಚಾರಿಸಲೇಬೇಕಲ್ಲ.

‘ಅವಳು’ ಎನ್ನುವ ಪದವೇ ಬಹಳ ರೋಮಾಂಚನ. ಅವಳು ಪ್ರಪಂಚವನ್ನೇ ಮರೆಸಬಲ್ಲಳು. ಒಂದೇ ಮಾತಿನಲ್ಲಿ ಹೇಳುವದಾದರೆ, ಅವಳು ಬದುಕಿನ ಸೋಲು, ಗೆಲುವು, ಬೇಸರ, ಉತ್ಸಾಹ, ಆಲಸ್ಯ, ಕ್ರೀಯಾಶೀಲ, ಆತ್ಮವಿಶ್ವಾಸ, ಅಪನಂಬಿಕೆ, ಯಶಸ್ಸಿನ ಹಾದಿಯ ಬೆಳಕು, ಬೆಳಕಿನ ಹಾದಿಯ ಕತ್ತಲು ಏನೆಲ್ಲ ಅವಳು. ಏನೆಲ್ಲಾ ಆದರೂ ಕೊನೆಗೊಮ್ಮೆ ಶೂನ್ಯವಾಗಲೂ ಬಲ್ಲಳು.

ಅವಳು ಬದುಕಿನ ಶೂನ್ಯವಾಗಿ ಹೋಗುವಾಗ ದುಃಖ, ಚಿಂತೆ, ಜಿಗುಪ್ಸೆ, ಕೆಟ್ಟ ಆಲೋಚನೆ, ಮನಸ್ಸಿನ ಚಂಚಲತೆ, ಎದೆಯೊಳಗೆ ಭಾವನೆಗಳ ಭಾರ, ಪ್ರತಿಕ್ಷಣದ ಬದುಕಿನಲ್ಲಿ ಅಶಾಂತಿ, ಏನೆಲ್ಲ ಆಗುತ್ತದೆಯಲ್ಲ! ಇದೆಲ್ಲ ಯಾಕೆ ಹೀಗೆ ಆಗುವುದು? ಸ್ವಲ್ಪ ಗಮನಿಸಿದಾಗ ಅವಳ ಮೇಲೆ ಆಳವಾದ ನಮ್ಮ ಪ್ರೀತಿ ಇರಬಹುದು. ಇಲ್ಲವೇ ದ್ವೇಷ ಇರಬಹುದು. ಅವಳ ದ್ವೇಷಕ್ಕೆ ಕಾರಣ ಯಾವುದೇ ಆದರೂ, ಅವಳನ್ನು ದ್ವೇಷಿಸುವುದು ಎಷ್ಟೊಂದು ಸರಿ! ನೀವು ಅವಳನ್ನು ತುಂಬಾ ಪ್ರೀತಿಸುತ್ತೀರಿ ಎಂದುಕೊಳ್ಳುವಿರಿ. ಅವಳಿಗೊಸ್ಕರ ಏನೆಲ್ಲ ಸಾಹಸ ಮಾಡುವಿರಿ. ಏನೆಲ್ಲ ಮಾಡಿದರೂ, ಅವಳಿಗೆ ನಿಮ್ಮ ಬಗ್ಗೆ ಎಳ್ಳು ಕಾಳಿನಷ್ಟು ಪ್ರೀತಿ ಹುಟ್ಟುವುದಿಲ್ಲ. ಕೊನೆಗೆ ಬೇಸತ್ತು ಅವಳನ್ನು ದ್ವೇಷ ಭಾವನೆಯಿಂದ ನೋಡಲು ಪ್ರಾರಂಭ ಮಾಡುವಿರಿ. ನಿಮ್ಮ ದ್ವೇಷದ ಭಾವನೆಗೂ ಅವಳು ಯಾವ ಪ್ರತಿಕ್ರಿಯೆಯೂ ನೀಡುವುದಿಲ್ಲ. ಆಗ ನಿಮಗೆ ದಿಕ್ಕೆ ತಿಳಿಯದಂತೆ ಆಗುವುದು. ಯಾಕೆಂದರೆ, ‘ಅವಳು’ ಯಾರಿಗೂ ತಿಳಿದಿಲ್ಲ. ತಿಳಿಯವುದೂ ಇಲ್ಲ. ಇನ್ನೂ ನಿಮಗೆ ಹೇಗೆ ತಿಳಿಯಬೇಕು?

ನಾವು ಅವಳನ್ನು ದ್ವೇಷಿಸುವುದರಿಂದ ಬದುಕಿನಲ್ಲಿ ಕಳೆದುಕೋಳ್ಳವುದೇ ಬಹಳ. ಹಾಗೆ ಪ್ರೀತಿಸುತ್ತಾ ಹೋದರೆ, ಬದುಕು ಅದ್ಬುತವಾದ ಕಲ್ಪನೆಯ ಲೋಕಕ್ಕೆ ಇಳಿದು ಬಿಡುವುದು. ಕಲ್ಪನೆಯ ಲೋಕ ತಲುಪಿದಾಗ ಬದುಕಿನಲ್ಲಿ ಕಳೆದುಕೊಳ್ಳುವುದು ಇನ್ನೂ ಹೆಚ್ಚು. ಅವಳ ಮೇಲಿನ ಪ್ರೀತಿ ಮತ್ತು ದ್ವೇಷವನ್ನು ಎರಡನ್ನು ಬಿಟ್ಟು, ನಮ್ಮ ಪಾಡಿಗೆ ನಾವಷ್ಟೇ ಇದ್ದರೆ, ರಮ್ಯವಾದ ಬದುಕಿನ ಸುಂದರ ಕನಸುಗಳನ್ನು ಆಳವಾದ ಚಿಂತನೆಯ ಭಾವನೆಗಳನ್ನು ಪ್ರೀತಿ ಮತ್ತು ದ್ವೇಷವನ್ನು ಒಂದೇ ಮಾತಿನಲ್ಲಿ ಹೇಳುವುದಾದರೆ ಬದುಕಿನ ದೊಡ್ಡ ಅದೃಷ್ಠವನ್ನು ಹಾಗೂ ದುರಂತವನ್ನು ಎರಡನ್ನು ಕಳೆದುಕೊಳ್ಳುತ್ತದೆ. ಅವಳಿರುವುದು ಪ್ರೀತಿಸಲು, ಪ್ರೀತಿಸಬೇಕು.ಅವಳಿರುವುದು ಸುಂದರ ಮಧುರವಾದ ಭಾವನೆಗಳನ್ನು ಕೊಡಲು. ಅವಳಿಂದ ಇಂಥ ಮಧುರವಾದ ಭಾವನೆಗಳನ್ನು ಮಾತ್ರ ಪಡೆಯಬೇಕು.

ಈ ಪ್ರಪಂಚದಲ್ಲಿ ನಾವು ಏನೆಲ್ಲ ಮಾಡಿದರೂ ಅವಳಿಗಾಗಿಯೇ! ಸಂಸಾರಿಯಾಗಬೇಕೆಂದರೆ ಅವಳೇ ಕಾರಣ. ಬ್ರಹ್ಮಚಾರಿ, ಸನ್ಯಾಸಿಯಾಗಬೇಕಾದರೇ ಅವಳೇ ಕಾರಣ. ಎಲ್ಲವೂ ಅವಳೇ ಆಗಿರುವಾಗ ಅವಳಿಂದ ಎಲ್ಲವನ್ನು ಪಡೆಯುವವ ನೀನಾಗಬೇಕು. ನೀನು ಅವಳನ್ನು ಎಷ್ಟು ತಿಳಿದುಕೊಳ್ಳಲು ಹಂಬಲಿಸುತ್ತಿಯೋ ಅಷ್ಟು ಅವಳು ನಿಗೂಢವಾಗುತ್ತ ನಡೆಯುತ್ತಾಳೆ. ಅವಳಲ್ಲಿರುವುದೆಲ್ಲ ಆತ್ಮೀಯತೆ, ಅವಳು ಎಲ್ಲರೊಂದಿಗೂ ಹೊಂದಿಕೊಂಡು ಹೋಗುವ ಶಕ್ತಿಯಿದೆ.

ಅವಳು ನಿನ್ನೊಂದಿಗೂ ಹೊಂದಿಕೊಂಡು ಹೋಗುತ್ತಾಳೆ. ಆದರೆ, ನಿನ್ನಲ್ಲಿ ಯಾವುದಾದರೊಂದು ಕೊರತೆ ಕಂಡು ಬಂದರೆ, ಅವಳು ನಿನ್ನಿಂದ ದೂರ ಹೋಗುವ ಸಾಧ್ಯತೆಯುಂಟು. ಆಗ ನಿನ್ನಲ್ಲಿ ದ್ವೇಷದ ಭಾವನೆ ಹುಟ್ಟಿಕೊಳ್ಳಬಹುದು. ಅವಳು ನಿನ್ನಿಂದ ದೂರ ಹೋದರೆ, ಅವಳು ಕೊಡುವ ಪ್ರೀತಿ ಮುಗಿಯಿತೆಂದು ತಿಳಿದುಕೊಳ್ಳಬೇಡ. ಯಾಕೆಂದರೆ, ಅವಳು ತನ್ನ ಪ್ರೀತಿಯನ್ನು ಕೊಡುವ ಹೊಸ ವಿಧಾನವದು. ಅವಳೆಲ್ಲಿಯೇ ಇರಲಿ, ಪ್ರತಿ ಕ್ಷಣವು ಅವಳನ್ನೇ ಪ್ರೀತಿಸುತ್ತಾ ಇದ್ದರೆ, ಆಗ ಸಿಗುವ ಆನಂದ ಎಷ್ಟು ನೋಡು? ದ್ವೇಷಿಸುತ್ತಿದ್ದರೆ, ಮನಸ್ಸಿನಲ್ಲಾಗುವ ಬದಲಾವಣೆ ನೋಡು. ಯಾವುದರಲ್ಲಿ ಹೆಚ್ಚಿನ ಸುಖವಿದೆ ಎಂಬುದು ತಿಳಿಯುತ್ತದೆ.


advertisement

LEAVE A REPLY

Please enter your comment!
Please enter your name here