ವಿಜಯಪುರ: ಕೊರೋನಾ ಅಟ್ಟಹಾಸ ಮತ್ತಿಬ್ಬರಲ್ಲಿ ಸೋಂಕು ದೃಢ: 6 ಜನ ಗುಣಮುಖ

0
146

ವಿಜಯಪುರ ಮೇ. 28 : ಜಿಲ್ಲೆಯಲ್ಲಿ ಇಂದು ಸಂಜೆಯವರೆಗೆ ಮತ್ತೆ ಇಬ್ಬರಿಗೆ ಕೋವಿಡ್-19 ಸೋಂಕು ತಗುಲಿರುವುದು ದೃಢಪಟ್ಟಿದೆ. ರೋಗಿ ಸಂಖ್ಯೆ : 2420 (32 ವರ್ಷದ ಪುರುಷ) ಹಾಗೂ ರೋಗಿ ಸಂಖ್ಯೆ : 2421 (23 ವರ್ಷದ ಪುರುಷ)ಗೆ ಸೋಂಕು ತಗುಲಿದ್ದು, ಇವರಿಗೆ ಮಹಾರಾಷ್ಟ್ರದಿಂದ ಸೋಂಕು ತಗುಲಿರುವದು ಧೃಡಪಟ್ಟಿದೆ ಎಂದು ಜಿಲ್ಲಾಧಿಕಾರಿ ವೈ .ಎಸ್ ಪಾಟೀಲ್ ಅವರು ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಈವರೆಗೆ 81 ಕೋವಿಡ್ ಪಾಸಿಟಿವ್ ರೋಗಿಗಳಿದ್ದು, ಈ ಪೈಕಿ 54 ಜನರು ಗುಣಮುಖರಾಗಿದ್ದು, 22 ಸಕ್ರಿಯ ರೋಗಿಗಳಿಗೆ ಆಸ್ಪತ್ರೆಯಲ್ಲಿ ಪರಿಣಾಮಕಾರಿ ಚಿಕಿತ್ಸೆ ನೀಡಲಾಗುತ್ತಿದೆ. ಇಂದು ರೋಗಿ ಸಂಖ್ಯೆ : 1728 (29 ವರ್ಷದ ಮಹಿಳೆ), ರೋಗಿ ಸಂಖ್ಯೆ : 1729 (20 ವರ್ಷದ ಪುರುಷ), ರೋಗಿ ಸಂಖ್ಯೆ : 411 (30 ವರ್ಷದ ಮಹಿಳೆ), ರೋಗಿ ಸಂಖ್ಯೆ : 1091 (04 ವರ್ಷದ ಹೆಣ್ಣುಮಗು), ರೋಗಿ ಸಂಖ್ಯೆ : 1494 (30 ವರ್ಷದ ಪುರುಷ), ರೋಗಿ ಸಂಖ್ಯೆ : 1122 (35 ವರ್ಷದ ಮಹಿಳೆ), ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಈವರೆಗೆ ವಿದೇಶ ಸೇರಿದಂತೆ ಇತರ ಪ್ರದೇಶಗಳಿಂದ 27,383 ಜನರು ಬಂದ ಬಗ್ಗೆ ವರದಿಯಾಗಿದ್ದು, ಇವರ ಮೇಲೆ ತೀವ್ರ ನಿಗಾ ಇಡಲಾಗಿದೆ. ಒಟ್ಟು 81 ಕೋವಿಡ್ -19 ಪಾಸಿಟಿವ್ ಪ್ರಕರಣಗಳು ದೃಢಪಟ್ಟಿದ್ದಾರೆ. 5820 ಜನರು 28 ದಿನಗಳ ಐಸೋಲೇಶನ್ ಅವಧಿ ಪೂರ್ಣಗೊಳಿಸಿದ್ದಾರೆ. 21,510 ಜನರು (1 ರಿಂದ 28 ದಿನಗಳ) ರಿರ್ಪೋಟಿಂಗ್ ಅವಧಿಯಲ್ಲಿದ್ದು, ಈವರೆಗೆ ಒಟ್ಟು 5 ಜನ ಕೋವಿಡ್-19 ರೋಗಿಗಳು ಮೃತಪಟ್ಟಿದ್ದಾರೆ. 54 ಜನರು ಕೋವಿಡ್-19 ರೋಗದಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದು, 22 ಜನರು ಆಸ್ಪತ್ರೆಯಲ್ಲಿರುವ ಕೋವಿಡ್-19 ಸಕ್ರಿಯ ರೋಗಿಗಳಾಗಿದ್ದಾರೆ. ಈವರೆಗೆ 22,065 ಜನರ ಗಂಟಲು ದ್ರವ ಮಾದರಿಯನ್ನು ಸಂಗ್ರಹಿಸಿದ್ದು, 10,876 ಜನರ ನೆಗೆಟಿವ್ ವರದಿ ಬಂದಿದೆ. ಇನ್ನೂ 11,108 ಜನರ ಗಂಟಲು ದ್ರವ ಮಾದರಿ ಪರೀಕ್ಷಾ ವರದಿ ಬರಬೇಕಾಗಿದೆ ಎಂದು ಅವರು ತಿಳಿಸಿದ್ದಾರೆ.


 

LEAVE A REPLY

Please enter your comment!
Please enter your name here