ದಮನಿತ(ರ) ಧ್ವನಿ ಆನಂದ್ ತೇಲ್ತುಂಬ್ಡೆ

0
209
ರವೀಂದ್ರ ಎನ್ ಎಸ್ - ಲೇಖಕರು

ಖ್ಯಾತ ಲೇಖಕ,ಚಿಂತಕ ಆನಂದ್ ತೇಲ್ತುಂಬ್ಡೆ ಹಾಗೂ ಇತರರ ಅಸಾಂವಿಧಾನಿಕ ಬಂಧನವಾಗಿ ತಿಂಗಳು ಕಳೆದು ಹೋಗಿದೆ ಆದರೆ ಸರ್ಕಾರ ಇದುವರೆಗೆ ಯಾವುದೇ ರೀತಿಯ ಅವರ ಬಗೆಗಿನ (ತನಿಖೆ)ಮಾಹಿತಿಯನ್ನು ಬಹಿರಂಗ ಪಡಿಸಿಲ್ಲ , ಇದು ನಿಜವಾಗಿಯೂ ಕಳವಳಕಾರಿ.

ಒಬ್ಬ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ ಲೇಖಕ ಚಿಂತಕರನ್ನು ಸಕಾರಣ ಇಲ್ಲದೆ ಆಳುವ ಸರ್ಕಾರ ಬಂಧನಕ್ಕೆ ಒಳಪಡಿಸಿದಾಗಲೂ ಸಹ ವಿರೋಧ ಪಕ್ಷಗಳು ಅಂತ ಕರೆಸಿಕೊಳ್ಳುವ ಪಕ್ಷಗಳು ಮೌನವಾಗಿ ಇರುವುದು ಮತ್ತಷ್ಟು ಆತಂಕಕ್ಕೆ ಈಡು ಮಾಡಿ ಕೊಡುತ್ತಿದೆ. ವಿರೋಧ ಪಕ್ಷಗಳು ಮೌನವಾಗಿರುವುದು ಕೇವಲ ಆನಂದ ತೇಲ್ತುಂಬ್ಡೆ ಅವರ ಪ್ರಕರಣ ದಲ್ಲಿ ಮಾತ್ರವಲ್ಲ.ಗುಜರಾತ್ ನ IPS ಅಧಿಕಾರಿ ಸಂಜೀವ್ ಭಟ್ ಅವರ ಬಂಧನದಲ್ಲೂ ಕೂಡ ಜಾಣ ಮೌನವನ್ನು ವಹಿಸಿದ್ದನ್ನು ಮರೆಯುವಂತಿಲ್ಲ.ಕಾವಲು ನಾಯಿಯಂತಿರಬೇಕಾದ ವಿರೋಧ ಪಕ್ಷಗಳು ತಮ್ಮ ಕರ್ತವ್ಯ ವನ್ನು ಮರೆತಾಗ ಅನಿವಾರ್ಯವಾಗಿ ಸಾರ್ವಜನಿಕರು ಧ್ವನಿ ಎತ್ತಲೇ ಬೇಕಾಗುತ್ತದೆ ಇಲ್ಲದೇ ಹೋದಲ್ಲಿ ಸಮಾಜ, ಜನಾಂಗ, ಸಮುದಾಯಗಳ ಮೇಲೆ ಸರ್ಕಾರಗಳು ನಡೆಸುವ ದೌರ್ಜನ್ಯ ದಬ್ಬಾಳಿಕೆಗಳ ಇರುದ್ದ ಎತ್ತುವ ಧ್ವನಿಗಳೇ ಇಲ್ಲವಾಗುವ ಅಪಾಯ ಇದೆ.

ಎಲ್ಲ ಸಮಯದಲ್ಲೂ ಸರ್ಕಾರ ಸರೀಯಾದ ಕಾರ್ಯ ನಿರ್ವಹಿಸುತ್ತದೆ ಎಂದು ಹೇಳುವಂತಿಲ್ಲ ಅಧಿಕ ಸಮಯ ಸರ್ಕಾರಗಳು ಮಾಡುವುದು ದಮನಿತರ ಧ್ವನಿಗಳನ್ನು ಹತ್ತಿಕ್ಕುವ ಕೆಲಸವನ್ನೇ. ಇದು ಭಾರತ ಮಾತ್ರವಲ್ಲ ಜಗತ್ತಿನ ಎಲ್ಲ ದೇಶಗಳಲ್ಲೂ ಕಂಡುಬರುವ ಒಂದು ಸಾಮಾನ್ಯ ರಾಜಕೀಯ‌ ಲಕ್ಷಣ. ಇಂತಹ ಸಂದರ್ಭಗಳಲ್ಲಿ ಶೋಷಿತರ ಪರ ಎತ್ತುವಂತಹ ಧ್ವನಿಗಳು ಜನಗಳ ಮಧ್ಯೆ ಇರಬೇಕು. ಈ ಧ್ವನಿಗಳು ಆಳುವ ವರ್ಗ ಅಥವಾ ಬಂಡವಾಳ ಶಾಹಿಗಳ ಶೋಷಣೆಗಳ ವಿರುದ್ದ ಸಮಾಜ, ಸಮುದಾಯಗಳನ್ನು ಜಾಗೃತಗೊಳಿಸುವ ಪ್ರಭಲ ಶಕ್ತಿಗಳಾಗಿರುತ್ತವೆ.

ಖ್ಯಾತ ಲೇಖಕ,ಚಿಂತಕ ಆನಂದ್ ತೇಲ್ತುಂಬ್ಡೆ

ಆನಂದ್ ತೇಲ್ತುಂಬ್ಡೆ ಅವರು ಅಂತಹ ಒಂದು ಧ್ವನಿ ಆಗಿದ್ದಾರೆ ರಾಷ್ಟ್ರ ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳುವ ಒಬ್ಬ ಚಿಂತಕ ಪ್ರಖರ ಲೇಖಕ. ಅಂತಹ ಒಬ್ಬ ಲೇಖಕರನ್ನು ಎಪ್ರಿಲ್14 ರ ಅಂಬೇಡ್ಕರ್ ಅವರ ಜನ್ಮ ದಿನದಂದದೇ ಬಂಧನಕ್ಕೆ ಒಳಪಡಿಸಿರುವುದು (ತೇಲ್ತುಂಬ್ಡೆ ಅವರು ಅಂಬೇಡ್ಕರ್ ಮೊಮ್ಮಗಳು ರಮಾಬಾಯಿ ಅವರ ಪತಿ) ಕೇವಲ ಅಂಬೇಡ್ಕರ್ ಅವರ ಕುಟುಂಬದ ಮೇಲಿನ‌ ದಾಳಿಯಲ್ಲ ಅಂಬೇಡ್ಕರ್ ಅನುಯಾಯಿಗಳಿಗೂ ಒಂದು ರೀತಿಯ ಪರೋಕ್ಷ(ಪ್ರತ್ಯಕ್ಷ) ಎಚ್ಚರಿಕೆಯಾಗಿದೆ ಎನ್ನುವ ಸೂಕ್ಷ್ಮ ತೆಯನ್ನು ಎಲ್ಲ ಅಂಬೇಡ್ಕರ್ ಅನುಯಾಯಿಗಳು ಅರಿತುಕೊಳ್ಳ ಬೇಕಿದೆ.

ಇಲ್ಲಿ ಪ್ರಸ್ತಾಪಿಸಲೇ ಬೇಕಾದ ಇನ್ನೊಂದು ಮುಖ್ಯ ವಿಷಯ ಎಂದರೆ ಕೆಲವು ಜನಗಳು ತೆಲ್ತುಂಬ್ಡೆ ಅವರು ಅಂಬೇಡ್ಕರ್ ವಾದಿಯಲ್ಲ ಅವರು ಕಮ್ಯುನಿಸ್ಟ್ ರು, ಅಂಬೇಡ್ಕರ್ ಅವರನ್ನು ಒಪ್ಪಿಕೊಂಡವರಲ್ಲ etc (ಗಾಂಧೀಜಿ ಮೊಮ್ಮಗ ತುಷಾರ ಗಾಂಧೀ ಕೂಡ ಗಾಂಧೀವಾದಿ ಅಲ್ಲ) ಎನ್ನುವ ರೂಮರ್ ಗಳನ್ನು ಹರಡಿಸಿ ತಾವು ಮಾತ್ರ perfect ಅಂಬೇಡ್ಕರ್ ವಾದಿಗಳು ಎನ್ನುವ ರೀತಿಯಲ್ಲಿ ಪ್ರತಿಕ್ರೀಯಿಸುತ್ತಿದ್ದಾರೆ.ಆದರೆ ಅವರಿಗೆ ಬಹುಶಃ ಗೊತ್ತಿರಲಿಕ್ಕಿಲ್ಲ ಡಾ|ಅಂಬೇಡ್ಕರ್ ಅವರ ಪ್ರಕಟಿತ ಪುಸ್ತಕ ಗಳನ್ನು ಓದಿರುವ ಅವರು/ನಾವು ಗಳು ಅಂಬೇಡ್ಕರ್ ವಾದಿಗಳಾಗಲು ಸಾಧ್ಯ ಇರುವಾಗ ಡಾ| ಅಂಬೇಡ್ಕರ್ ಅವರ ಪ್ರಕಟಿತ ಅಪ್ರಕಟಿತ( ಡಾ|ಬಾಬಾಸಾಹೇಬರ ಅಪ್ರಕಟಿತ ಬರಹಗಳ ಸಂಗ್ರಹ ಇರುವುದು ತೇಲ್ತುಂಬ್ಡೆ ಅವರ ಬಳಿ) ಬರಹಗಳನ್ನು ಓದಿಕೊಂಡ ತೇಲ್ತುಂಬ್ಡೆ ಅವರು ಅಂಬೇಡ್ಕರ್ ವಾದಿಗಳಾಗಲು ಸಾಧ್ಯ ಇಲ್ಲವೇ? ಖಂಡಿತ ಸಾಧ್ಯ ಇದೆ ಅವರೊಬ್ಬ ಅಂಬೇಡ್ಕರ್ ವಾದಿ ಎನ್ನುವುದರಲ್ಲಿ ಅನುಮಾನ ಇಲ್ಲ. ಅಂಬೇಡ್ಕರ್ ‘ವಾದಿ’ ಮಾರ್ಕ್ಸ ‘ವಾದಿ’ ಎಂದ ತಕ್ಷಣ ಬೆರೊಂದು ಸಿದ್ದಾಂತ ಅಥವಾ ‘ವಾದ’ ವನ್ನು ಅಧ್ಯಯನ ಮಾಡಬಾರದು ಅಥವಾ ಆ ಸಿದ್ಧಾಂತಗಳನ್ನು ಗೌರವಿಸಬಾರದು ಅಂತೇನೂ ಇಲ್ಲ.

ದೇವನೂರ ಮಹಾದೇವ

ಹಾಗೇಯೇ ನಾನು ಇಂತಹ ‘ವಾದಿ’ಎಂದು ಹೇಳಿಕೊಳ್ಳಲೇಬೇಕು. ಎಲ್ಲ ಸಮಯದಲ್ಲೂ ಬೇರೆ ವಾದಿಗಳನ್ನ ವಿರೋಧ ಮಾಡಲೇ ಬೇಕು ಅಂತನೂ ಇಲ್ಲ. ಈ ದೇಶದಲ್ಲಿ ಅಂಬೇಡ್ಕರ್ ವಾದ ಇದೆ ಗಾಂಧೀ ವಾದ ಇದೆ.ಲೋಹಿಯಾ ವಾದ. ಮಾರ್ಕ್ಸ್ ವಾದ ಹೀಗೆ ಹಲವಾರು ವಾದಗಳು ಮತ್ತು ಅವುಗಳನ್ನು ಅನುಸರಿಸುವ ವಾದಿಗಳು ಇದ್ದೆ ಇದ್ದಾರೆ ಅವರವರ ವಾದ ಅವರವರ ಸಿದ್ದಾಂತ ಅವರ ಜೊತೆ. ಕೇವಲ ಒಂದೇ ವಾದ ಇರಲು ಸಾಧ್ಯವಿಲ್ಲ ಹಾಗೆ ಇರಬೆಕು ಎಂದು ಬಯಸುವುದೂ ಕೂಡ ತಪ್ಪು. ಎಲ್ಲ ವಾದಗಳೂ ಇರಬೇಕು ಆದರೆ ಎಲ್ಲ ವಾದಗಳು ಕೊನೆಗೆ ನೀಡಬೇಕಾಗಿದ್ದು ಮಾತ್ರ ಮಾನವತಾ’ವಾದ’ ದ ಸಂದೇಶವನ್ನು. ಇವತ್ತು ಅಂತಹ ಮಾನವತಾ ವಾದ ದಲ್ಲಿ ನಂಬಿಕೆ ಇಟ್ಟ ನೂರಾರು ಸಾಹಿತಿಗಳು,ಸಂಘಟನೆಗಳು.

ಲೇಖಕರು,ನ್ಯಾಯವಾದಿಗಳು,ಪತ್ರಕರ್ತರು ಆನಂದ್ ತೇಲ್ತುಂಬ್ಡೆಯವರ ಅಸಾಂವಿಧಾನಿಕ ಬಂಧನವನ್ನು ವಿರೋಧಿಸಿ ಇವತ್ತು ‘ನ್ಯಾಯ ದಿನ’ಕ್ಕೆ ಕರೆ ನೀಡಿದ್ದಾರೆ. ನಮ್ಮ ನಮ್ಮ ವಾದಗಳನ್ನು ನಮ್ಮ ಜೊತೆ ಇರಿಸಿಕೊಂಡೇ ನಾವೆಲ್ಲರೂ ಆನಂದ್ ತೇಲ್ತುಂಬ್ಡೆ ಅವರ ಬಿಡುಗಡೆಗೆ ಒತ್ತಾಯಿಸಬೇಕಿದೆ ಏಕೆಂದರೆ ಪ್ರಭುತ್ವದ ವಿರುದ್ಧ ಎತ್ತುವ ಧ್ವನಿ ಯಾವತ್ತೂ ನ್ಯಾಯದ ಪರ ಅಂತಹ ಧ್ವನಿಗೆ ಬೆಂಬಲು ನೀಡಲು ಯಾವುದೇ ವಾದದ ಅಥವಾ ವಾದಿಯಾಗುವ ಅಗತ್ಯ ಇಲ್ಲ ಕೇವಲ ನ್ಯಾಯ ಪರ ನಿಲ್ಲುವ ವ್ಯಕ್ತಿತ್ವ ಇದ್ದರೆ ಸಾಕು.ಇಂಥ ಸಂದರ್ಭಗಳಲ್ಲಿ ವಾದ ಗಳನ್ನು ಹುಡುಕುತ್ತ ಹೋದಲ್ಲಿ ಮುಂದಿನ ದಿನಗಳಲ್ಲಿ ಗಾಂಧೀ ವಾದಿಗಳು. ಅಂಬೇಡ್ಕರ್ ವಾದಿಗಳು. ಲೋಹಿಯಾ ವಾದಿಗಳು ಯಾರೇ ಇರಲಿ ಅವರಿಗೆ ಅಪಾಯ ತಪ್ಪಿದ್ದಲ್ಲ ಇವತ್ತು ತೇಲ್ತುಂಬ್ಡೆ ನಾಳೆ ನಾವು..


 

LEAVE A REPLY

Please enter your comment!
Please enter your name here