ವಿಜಯಪುರ: ಕೊರೋನಾ ಸೋಂಕು ಪ್ರಭಾವ ಇಳಿಮುಖ – ಗ್ರೀನ್ ಝೋನ್ ನತ್ತ ಜನರ ನಿರೀಕ್ಷೆ !

0
195

ವಿಜಯಪುರ ಮೇ.10 : ಕೊರೋನಾ ಸೋಂಕಿನಿಂದ ಗುಣಮುಖರಾದ ಇಬ್ಬರನ್ನು ಇಂದು ಜಿಲ್ಲಾಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ರೋಗಿ ಸಂಖ್ಯೆ – 399 (27 ವರ್ಷ ಮಹಿಳೆ) ರೋಗಿ ಸಂಖ್ಯೆ – 457 (17 ವರ್ಷ ಯುವಕ) ಇಂದು ಜಿಲ್ಲಾಸ್ಪತ್ರೆಯಿಂದ ಬಿಡುಗಡೆಗೊಂಡಿದ್ದು, ಈವರೆಗೆ ಒಟ್ಟು 33 ಕೊರೋನಾ ರೋಗಿಗಳು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಸದ್ಯ ಜಿಲ್ಲಾಸ್ಪತ್ರೆಯಲ್ಲಿ 13 ಕೊರೋನಾ ಸಕ್ರಿಯ ರೋಗಿಗಳು ಇದ್ದು, ಪರಿಣಾಮಕಾರಿ ಚಿಕಿತ್ಸೆ ನಡೆಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ ಮುಖ್ಯಕಾರ್ಯನಿರ್ವಹಣಾಧಿಕಾರಿಗಳು ತಿಳಿಸಿದ್ದಾರೆ.

ಇಂದು ಬೆಳಗ್ಗಿನ ವರೆಗೆ ಜಿಲ್ಲೆಗೆ ಈವರೆಗೆ ವಿದೇಶದಿಂದ ಮತ್ತು ಇತರೆ ಕಡೆಯಿಂದ ಒಟ್ಟು 2134 ಬಂದ ಬಗ್ಗೆ ವರದಿಯಾಗಿದ್ದು, 1490 ಜನರು 1 ರಿಂದ 28 ದಿನಗಳ ರೀಪೊರ್ಟಿಂಗ್ ಅವಧಿಯಲ್ಲಿದ್ದಾರೆ. 610 ಜನರು 28 ದಿನಗಳ ಐಸೋಲೇಶನ್ ಅವಧಿ ಪೂರ್ಣಗೊಳಿಸಿದ್ದಾರೆ. ಈವರೆಗೆ 2466 ಗಂಟಲು ದ್ರವ ಮಾದರಿ ಕಳುಹಿಸಲಾಗಿ 2373 ಪ್ರಕರಣಗಳ ಪರೀಕ್ಷಾ ವರದಿ ನೆಗೆಟಿವ್ ಬಂದಿದೆ. ಒಟ್ಟು 49 ಪಾಸಿಟಿವ್ ಪ್ರಕರಣ ದೃಢಪಟ್ಟಿದ್ದು, ಇನ್ನೂ 44 ಜನರ ಗಂಟಲು ದ್ರವ ಮಾದರಿ ಪರೀಕ್ಷಾ ವರದಿ ಬರಬೇಕಾಗಿದೆ.


 

LEAVE A REPLY

Please enter your comment!
Please enter your name here