ವಿಜಯಪುರ: ಇಂದು ಕೊರೋನಾ ಸೋಂಕಿನಿಂದ 6 ಜನ ಗುಣಮುಖ

0
134

ವಿಜಯಪುರ ಮೇ.09: ಕೊರೋನಾ ಸೋಂಕಿನಿಂದ ಗುಣಮುಖರಾದ ಆರು ಜನರು ಇಂದು ಜಿಲ್ಲಾಸ್ಪತ್ರೆಯಿಂದ ಬಿಡುಗಡೆಹೊಂದಿದ್ದು, ಈವರೆಗೆ ಒಟ್ಟು 31 ಕೊರೋನಾ ರೋಗಿಗಳು ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ ಎಂದು ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ ತಿಳಿಸಿದ್ದಾರೆ.

ಇಂದು 50 ವರ್ಷದ ಮಹಿಳೆ ರೋಗಿ ಸಂಖ್ಯೆ 397, 28 ವರ್ಷದ ಪುರುಷ ರೋಗಿ ಸಂಖ್ಯೆ 402, 14 ವರ್ಷದ ಗಂಡು ಮಗು ರೋಗಿ ಸಂಖ್ಯೆ 407, 18 ವರ್ಷದ ಯುವತಿ ರೋಗಿ ಸಂಖ್ಯೆ 410, 27 ವರ್ಷದ ಯುವಕ ರೋಗಿ ಸಂಖ್ಯೆ -467 ಹಾಗೂ 27 ವರ್ಷದ ಯುವಕ ರೋಗಿ ಸಂಖ್ಯೆ 511 ಇವರು ಇಂದು ಜಿಲ್ಲಾಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ.

ರೋಗಿ ಸಂಖ್ಯೆ 510 ಸಂಪರ್ಕದಿಂದ 11 ವರ್ಷದ ಹೆಣ್ಣು ಮಗುವಿಗೆ ಕೋವಿಡ್-19 ಸೋಂಕು ತಗುಲಿರುವ ಬಗ್ಗೆ ಇಂದು ದೃಢಪಟ್ಟಿದ್ದು, ರೋಗಿ ಸಂಖ್ಯೆ 769 ಇವರು ಕಂಟೇನ್ಮೆಂಟ್ ವಲಯದಿಂದ ಬಂದವರಾಗಿದ್ದಾರೆ. ಈವರೆಗೆ ಒಟ್ಟು 49 ಕೋವಿಡ್ -19 ಪಾಸಿಟಿವ್ ಪ್ರಕರಣಗಳು ದೃಢಪಟ್ಟಿದ್ದು, ಈವರೆಗೆ ಒಟ್ಟು 31 ಕೋವಿಡ್-19 ದಿಂದ ಗುಣಮುಖರಾದ ಜನರು ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಮೂರು ಜನರು ಕೋವಿಡ್-19 ದಿಂದ ಸಾವನ್ನಪ್ಪಿದ್ದು, ಸದ್ಯಕ್ಕೆ ಜಿಲ್ಲಾಸ್ಪತ್ರೆಯಲ್ಲಿ 15 ಜನ ಕೋವಿಡ್-19 ಪಾಸಿಟಿವ್ ರೋಗಿಗಳು ಸಕ್ರಿಯ ರೋಗಿಗಳಾಗಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಈವರೆಗೆ 2085 ಜನರು ವಿದೇಶ ಮತ್ತು ಇತರೆ ಕಡೆಗಳಿಂದ ಬಂದ ಬಗ್ಗೆ ವರದಿಯಾಗಿದ್ದು, ತೀವ್ರ ನಿಗಾ ಇಡಲಾಗಿದೆ. 1590 ಜನರು 1 ರಿಂದ 28 ದಿನಗಳವರೆಗಿನ ರಿಪೋರ್ಟಿಂಗ್ ಅವಧಿಯಲ್ಲಿದ್ದಾರೆ. ಈವರೆಗೆ 2432 ಜನರ ಗಂಟಲು ದ್ರವ ಮಾದರಿ ಸಂಗ್ರಹಿಸಲಾಗಿ, 2328 ಜನರ ಗಂಟಲು ದ್ರವ ಮಾದರಿ ಪರೀಕ್ಷಾ ವರದಿ ನೆಗೆಟಿವ್ ಬಂದಿದೆ. 55 ಜನರ ವರದಿ ಇನ್ನೂ ಬರಬೇಕಾಗಿದೆ ಎಂದು ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ ತಿಳಿಸಿದ್ದಾರೆ.


 

LEAVE A REPLY

Please enter your comment!
Please enter your name here