ಚತ್ರಪತಿ ಶಾಹುರವರನ್ನು ಕೊಲ್ಲಲು ಅತೀ ಹೆಚ್ಚು ಹೊಂಚು ಹಾಕಿದ್ದು ‘ಶಿವಾಜಿ ಕ್ಲಬ್’ ಎಂಬ ಉಗ್ರ ಸಂಘಟನೆ….!?

0
250
ಭಾರತದ ಕ್ರಾಂತಿಕಾರಿ ರಾಜ ಚತ್ರಪತಿ ಶಾಹು ಮಹಾರಾಜರ ಇತಿಹಾಸ ಇಂದು ಬಹುತೇಕರಾದ ನಾವುಗಳು ಇಂದು ಮರೆಯುವ ಹಂತಕ್ಕೆ ಬಂದು ತಲುಪಿದ್ದೇವೆ. ಅವರ ಮಹಾಸಾಧನೆಗಳನ್ನು ಹೇಳಲು ವರ್ಣಿಸಬೇಕಾಗಿಲ್ಲಾ ಕಾರಣ ಅವರ ಹೆಸರೇ ಅವರನ್ನು ವರ್ಣಿಸುತ್ತದೆ ಎಂದರೆ ತಪ್ಪಾಗಲಿಕ್ಕಿಲ್ಲಾ.

ಅಂದು ಭಾರತ ದೇಶಕ್ಕೇ ಬ್ರಾಹ್ಮಣೇತರ ಮಾಧ್ಯಮ ಲೋಕಬೇಕು ಎಂದು ಅಂದೇ ಹೊರಾಟ ಮಾಡಿದ್ದರು. ಇದು ಅವರ ದೂರದೃಷ್ಟಿಯನ್ನು ಹೇಳುತ್ತದೆ. ಅದಕ್ಕಾಗಿ ಅವರು ದಕ್ಷಿಣ ಭಾರತದಲ್ಲಿ ಬ್ರಾಹ್ಮಣೇತರ ಚಳುವಳಿಗೆ ಕಾರಣರಾಗಿದ್ದರು ಹೀಗಾಗಿ ದಕ್ಷಿಣ ಭಾರತದ ಬ್ರಾಹ್ಮಣೇತರರ ಚಳುವಳಿಯ ಪಿತಾಮಹ ಅನ್ನುತ್ತಾರೆ. ಅಷ್ಟೇ ಅಲ್ಲಾ, ಡಾ ಅಂಬೇಡ್ಕರರನ್ನು ಈ ದೇಶಕ್ಕೆ ಪ್ರಜಾಪ್ರಭುತ್ವದ ಅಡಿಪಾಯ ಎಂದು 1921 ರಲ್ಲೇ ಹೇಳಿದ್ದರು ಮತ್ತು ಅವರ ಸಾಧನೆಗಳನ್ನು ನೋಡಿ ಡಾ ಅಂಬೇಡ್ಕರರಿಗೆ `ಪಂಡಿತ` ಎಂಬ ಬಿರುದನ್ನು ಕೂಡಾ ನೀಡಿದ್ದರು. ಅಷ್ಟೇ ಅಲ್ಲಾ ಸೆಕ್ಯೂಲರ ಬ್ರಾಹ್ಮಣ ಪತ್ರಕರ್ತರನ್ನೂ ಸನ್ಮಾನಿಸಿ ಅವರಿಗೆ ದನ ಸಹಾಯ ಕೂಡಾ ಮಾಡಿದ್ದರು. ಇವರ ಪ್ರೇರಣೆಯಿಂದ ಹುಬ್ಬಳ್ಳಿಯಲ್ಲಿ 1915 ರಲ್ಲಿ ಲಿಂಗಾಯತರ ಅಧಿವೇಶನ ಕೂಡಾ ನಡೀತು ಅದಕ್ಕೇ ಹಣಕಾಸಿನ ಸಹಾಯ ಕೂಡಾ ಮಾಡಿದ್ದರು.

ಚತ್ರಪತಿ ಶಾಹುರವರ ಕೊನೆಯದಿನಗಳು ಕೆಟ್ಟದಾಗಿದ್ದವು ಎಂದು ಅವರ ಇತಿಹಾಸ ಸಾರಿ ಸಾರಿ ಹೇಳುತ್ತದೆ. ಅಂತಹದರಲ್ಲಿ ಅವರ ಅಚ್ಚುಮೆಚ್ಚಿನ ಮಗ ರಾಜಕುಮಾರ ಶಿವಾಜಿ ಬೇಟೆಯಾಡಲು ಹೋಗಿ ಪ್ರಾಣ ಕಳಕೊಂಡರು ಮತ್ತು ಅದಕ್ಕಿಂತ ಇನ್ನೂ ಹೆಚ್ಚಾಗಿ ಪುತ್ರ ರಾಜಕುಮಾರ ಶಿವಾಜಿಯರ ಮಡದಿ (ಸೊಸೆ) ಇಂದುಮತಿ ಕೇವಲ 12 ವರ್ಷ ಇದ್ದುದರಿಂದ ಮಹಾರಾಜರಿಗೆ ಇನ್ನಷ್ಟು ಅಘಾತಕಾರಿಯಾಗಿತ್ತು ಇಂತಹ ಘಳಿಗೆಯಲ್ಲಿ ಅವರ ಕೊನೆಯ ದಿನಗಳನ್ನು ಕಳೆದರು.

ಇತಿಹಾಸದ ಪುಟಗಳಲ್ಲಿ ದಾಖಲಾಗದೇ ಉಳಿದ ಒಂದು ಸತ್ಯವನ್ನು ಇಲ್ಲಿ ಹೇಳಬೇಕಾಗಿದೆ.
ಸಾಮಾಜಿಕ ಹೋರಾಟದ ರಾಜರು ಎಷ್ಟು ಕಷ್ಟ ಅನುಭವಿಸಿದರು ಎಂಬ ಮುಚ್ಚಿಹೋದ ಕಹಿ ಸತ್ಯವನ್ನು ಈಗ ಎಲ್ಲದರೂ ಸಿಕ್ಕರೆ ನಾವು ಈಗ ಓದಿ ತಿಳಿದೊಳ್ಳಬೇಕು ಅಷ್ಟೇ. ಚತ್ರಪತಿ ಶಾಹು ಮಹಾರಾಜರನ್ನು ಭಾರತದ ಇತಿಹಾಸದ ಪುಟಗಳಲ್ಲಿ ‘ಕ್ರಾಂತಿಕಾರಿ ರಾಜ’ ಎಂದು ಬಣ್ಣಿಸುತ್ತಾರೆ. ಆದ್ರೆ ಕ್ರಾಂತಿಕಾರಿ ಯಾರ ವಿರುದ್ದವಿತ್ತು ಎಂಬುದು ನಾವು ಮೊದ್ಲು ತಿಳಿದುಕೊಳ್ಳಬೇಕು. ಶಿವಾಜಿ ಮನೆತನದ ಕುಡಿಯಾದ ಚತ್ರಪತಿ ಶಾಹು
ಮಹಾರಾಜರನ್ನು ಕೊಲ್ಲಲು ‘ಶಿವಾಜಿ ಕ್ಲಬ್’ ಎಂಬ ಉಗ್ರ ಸಂಘಟನೆ ಹುಟ್ಟಿದ್ದು ಮಾತ್ರ ಇತಿಹಾಸದ ಪುಟಗಳಲ್ಲಿ ಅಡಗೀ ಕುಳಿತಿದೆ.

advertisement

1894 ರಲ್ಲಿ ಕೊಲ್ಹಾಪುರದಲ್ಲಿ ಉಗ್ರ ಸಂಘಟನೆಯೊಂದು ‘ಶಿವಾಜಿ ಕ್ಲಬ್’ ಎಂದು ಹೆಸರಿಟ್ಟುಕೊಂಡು ಸ್ವತಂತ್ರದ ನೆಪ ಮಾಡಿ ಶಾಹುರವರನ್ನು ಕೊಲ್ಲುವ ಹಿಡನ್ ಅಜೆಂಡಾದೊಂದಿಗೆ ಹುಟ್ಟಿಕೊಂಡು ಬಿಟ್ತು. ಅವರು ಬ್ರಿಟಿಷರಿಗೆ ಬರೆದ ಪತ್ರಗಳ ಪ್ರಕಾರ ಬದ್ಧ ವೈರಿಗಳಾದ B. ಜನಾಂಗದ ಮುಖಂಡರೇ ಇದಕ್ಕೆ ನಾಯಕರಿದ್ದರು. ಮಹಾರಾಜರು
ವೇದೋಕ್ತಿ ಮಹಾ ಬರಿಗಾಳಿ ಸಮಸ್ಯೆಯ ನಂತ್ರ B ಜನಾಂಗವನ್ನು ಎದುರಿಸಿ ಅವರ ರೆಕ್ಕೆಗಳನ್ನು ಕಟ್ಟಿ ಹಾಕಿದರು. ಆದ್ದರಿಂದ B ಜನಾಂಗವು ಶಾಹು ಮಹಾರಾಜರಿಗೆ ದೊಡ್ಡ ಹೊಡೆತ ಕೊಡುವದೇ ಇದರ ಮುಖ್ಯ ಉದ್ದೇಶವಾಗಿತ್ತು. ಒಂದು ಕಡೆ ಶಿವಾಜಿಯ ಬಗ್ಗೆ ಪ್ರೇರಣೆ ತುಂಬುದೊದು ಮತ್ತೊಂದು ಕಡೆ ಬ್ರಿಟಿಷರನ್ನು ಎದುರಿಸಲು ಜನಾಂಗವನ್ನು ತಯಾರಿ ಮಾಡುತ್ತಿತ್ತು. ಇದರಿಂದಾಗಿ ಬ್ರಿಟಿಷರಿಗೆ ಮತ್ತು ಚತ್ರಪತಿ ರಾಜರ ನಡುವೆ ವೈಮನಸ್ಸು ತರುವದು ಇದಾಗಿತ್ತು. ಅಂದರೆ ಒಂದೇ ಕಲ್ಲಲ್ಲಿ ಎರಡು ಹಕ್ಕಿಯನ್ನು ಹೊಡೆಯಲು ಹುಟ್ಟಿತ್ತು ಇ ಶಿವಾಜಿ ಕ್ಲಬ್.

ಕೊಲ್ಹಾಪುರದಲ್ಲಿ 1908 ಮಾರ್ಚ 3 ರಂದು ಶಾಹು ಮಹಾರಾಜರ ಮಗಳಾದ ಅಕ್ಕಾಸಾಹೇಬರವರ ಮದುವೆ ಇತ್ತು. ಈ ಮದುವೆಯ ಕಾರ್ಯಕ್ರಮಕ್ಕೆ ಬಾಂಬೆ ಗವರ್ನರ್ ಕ್ಲಾರ್ಕ್, ಕೊಲ್ಹಾಪುರದ ರಾಜಕೀಯ ಎಜೆಂಟ್ ಫೆರಿಸ್, ಮುದೋಳದ ಮಹಾರಾಜರು ಮತ್ತು ಇತರ ಬ್ರಿಟಿಷ ಅಧಿಕಾರಿಗಳು ಬರುವವರಿದ್ದರು. ಈ ಮದುವೆ ಕಾರ್ಯಕ್ರಮದಲ್ಲಿ ಬಾಂಬ ಹಾಕಿ ಮಹಾರಾಜರನ್ನಷ್ಟೇ ಅಲ್ಲಾ ಅವರ ಬೆಂಬಲಕ್ಕೆ ನಿಂತವರನ್ನಲ್ಲಾ ಕೊಲ್ಲುವದಾಗಿತ್ತು. ಉಗ್ರರಾದ ದಾಮು, ಗಣಪತರಾವ್, ಮಧೋರ ಎಂಬುವವರು ಕೊಲ್ಲುವ ಷ್ಯಡ್ಯಂತ್ರದ ಮುಂದಾಳತ್ವ ವಹಿಸಿದ್ದರು.

ಎಲ್ಲಾ ತಯಾರು ಮಾಡಿಕೊಂಡು ಆ ದಿನದಂದು ಬಾಂಬ ಹಾರಿಸಲು ತಯಾರಾದರು. ಆದ್ರೆ ಬಾಂಬ ಮಾತ್ರ ಪೂಣೆಯಿಂದ ಕೊಲ್ಹಾಪುರಕ್ಕೆ ಬರಲೇ ಇಲ್ಲಾ. ಬಾಂಬು ಹಾರಲಿಲ್ಲಾ ಅವರ ಗುರಿಯೂ ಇಡೆರಲಿಲ್ಲಾ. ಆದ್ರೆ ಅಂದು ಮದುವೆ ಮಾತ್ರ ಯಶಸ್ವಿಯಾಗಿ ನೆರವೇರಿತು. ಶಿವಾಜಿ ಕ್ಲಬ್ ಶಾಹುರವರನ್ನು ಕೊಲ್ಲುವ ಹೊರಾಟ ಮುಂದುವರೆಸಿತು. ಮೂರು ತಿಂಗಳಲ್ಲೇ ಕೊಲ್ಲುತ್ತೇವೆ ಎಂಬ ಬೆದರಿಕೆ ಪತ್ರಗಳೂ ಕೂಡಾ ಬಂದಿದ್ದವು. ಇದರ ಕುರಿತು ಚತ್ರಪತಿಗಳು ತಮ್ಮ ಸ್ನೇಹಿತರಾದ ಕ್ಲಾಡ್ ಹಿಲ್ಲ್ ರಿಗೆ ಪತ್ರ ಬರೀತಾರೆ “ನಾನು ಪೂಣೆಯಿಂದ ಕೊಲ್ಹಾಪುರಕ್ಕೆ ಬರುವಾಗ ರಸ್ತೆಯಲ್ಲಿ ಬಾಂಬ ಇಟ್ಟಿದ್ದರು ಅದು ತಡಮಾಡಿ ಸ್ಪೊಟವಾಗಿದ್ದರಿಂದ ಕುದರೆಗಳಿಗೆ ಗಾಯವಾಗಿವೆ ನಾನು ಪ್ರಾಣಾಪಾಯದಿಂದ ಪಾರಾದೆ” ಎಂದು ಪತ್ರದ ಮುಖಾಂತರ ತಮ್ಮ ಅಳಲನ್ನು ತೊಡಿಕೊಂಡಿದ್ದರು.

ಇಲ್ಲಿ B ಜನರಿಗೆ ತಮ್ಮ ಗುರಿಯನ್ನು ಮುಟ್ಟಲು ಅಥ್ವಾ ಅಧಿಕಾರ ಪಡೆಯಲು ಶಿವಾಜಿಯ ಹೆಸರಲ್ಲೇಕೆ ‘ಶಿವಾಜಿಕ್ಲಬ್’ ಮಾಡಿದರು ? ಬೇರೆ ಯಾರು ಸಿಗಲೇ ಇಲ್ಲವೇ ? ಶಾಹು ಮಹಾರಜರನ್ನು ಕೊಲ್ಲಲು ಶಿವಾಜಿ ಹೆಸರು ಏಕೆ ಬಳಸಿಕೊಂಡರು ಎಂಬುದು ನಾವು ಅರ್ಥ್ ಮಾಡಿಕೊಳ್ಳಬೇಕು ಅಷ್ಟೇ.

ಅದು ಏನೇ ಇರಲಿ. ಚತ್ರಪತಿ ಶಿವಾಜಿಯ ಹೆಸರಲ್ಲಿ ‘ಶಿವಾಜಿ ಕ್ಲಬ್’ ತಗೆದು ಶಿವಾಜಿಯನ್ನು ಉಗ್ರನನ್ನಾಗಿ ಮಾಡಲು ಮತ್ತು ಚತ್ರಪತಿ ಶಾಹುರವರನ್ನು ಕೊಲ್ಲಲು ಶಿವಾಜಿಯನ್ನು ಹೈಜಾಕ್ ಮಾಡಿದ್ದರು.‌ ಆದ್ರೆ, ಅದೇ ಮುಂದುವರೆದು ಇಂದು ಚತ್ರಪತಿ ಶಿವಾಜಿ ಈಗ ದೇಶದ ಹಿಂದೂ ಐಕಾನ್ ಆಗಿ ಬಿಟ್ರು. ಈ ದೇಶದಲ್ಲಿ B ಗಳು ಏನೇ ಮಾಡಿದರು ಇತಿಹಾಸದ ಪುಟಗಳಲ್ಲಿ ಅವರಿಗೆ ರಿವರ್ಸ ಆಗುತ್ತಲೇ ಬಂದಿದೆ ಅನ್ನೊದು ಕೂಡಾ ತಿಳಕೋಬೇಕು.

ಇಷ್ಟೇಲ್ಲಾ ಅವರ ವಿರುದ್ದ ಷಡ್ಯಂತ್ರವಿದ್ದರೂ ಕೊನೆಗೆ ಬರೊಡಾದಿಂದ ಮದುವೆ ಮುಗಿಸಿಕೊಂಡು ಬರುತ್ತಿರುವಾಗ ಮುಂಬೈ ಮಾರ್ಗದ ಲೊನಾವಾಲದ ಲಾಜ್ಡ್ ವೊಂದರಲ್ಲಿ ಅಂದು ರಾತ್ರಿ ಮೇ 6-1922 ರಂದು ಮಲಗಿದವರು ಬೆಳಿಗ್ಗೇ ಮತ್ತೇ ಏಳಲಿಲ್ಲಾ. ಇದು ಭಾರತದ ಇತಿಹಾಸದ ಕ್ರಾಂತಿಕಾರಿ ಯುಗದ ಅವದಿಯೊಂದು ಮುಕ್ತಾಯವಾಗಿ ಬಿಟ್ತು. ಅವರ ಸಾಮಾಜಿಕ ಹೊರಾಟದ ದಿಟ್ಟ ನಿರ್ದಾರಗಳನ್ನು ನೋಡಿದರೆ ಇನ್ನೂ ಓದಬೇಕು ಎನ್ನುವ ಹುಮ್ಮಸ್ಸು ನಮ್ಮಲ್ಲಿ ಉಕ್ಕುತ್ತಲೇ ಬರುತ್ತದೆ. ಅದರಂತೆ ಅವರ ಕೊನೆಯ ಮೇ 6 ರ ದಿನದ ನೆನಪು ಮನಸ್ಸಿಗೆ ಇನ್ನಷ್ಟು ನಾಟುವಂತೆ ಮಾಡುತ್ತದೆ.

ಸುರೇಂದ್ರ ಉಗಾರೆ, ಬೆಳಗಾವಿ.


 

LEAVE A REPLY

Please enter your comment!
Please enter your name here