ವಿಜಯಪುರ : 6 ತಿಂಗಳ ಮಗು ಕೊರೋನಾ ವೈರಸ್ ನಿಂದ ರಕ್ಷಣೆ : ಜನರ ಮೆಚ್ಚುಗೆಗೆ ವೈದ್ಯ ಬಳಗ

0
153

ವಿಜಯಪುರ ಮೇ.05: ಕೋವಿಡ್-19 ದಿಂದ ಗುಣಮುಖರಾದ ಮೂವರು ರೋಗಿಗಳು ಜಿಲ್ಲಾಸ್ಪತ್ರೆಯಿಂದ ಬಿಡುಗಡೆಗೊಂಡಿದ್ದು ಇವರಲ್ಲಿ ಆರು ತಿಂಗಳ ಗಂಡು ಮಗು ಕೂಡಾ ಗುಣಪಡಿಸಿರುವುದು ಇಲ್ಲಿಯ ತಜ್ಞ ವೈದ್ಯರ ಸಾಧನೆಗೆ ಹಿಡಿದ ಕೈಗನ್ನಡಿಯಾಗಿದೆ ಎಂದು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ತಿಳಿಸಿದ್ದಾರೆ.

ರಾಜ್ಯ ವೈದ್ಯಕೀಯ ತಂಡ ಮತ್ತು ಜಿಲ್ಲಾ ವೈದ್ಯಕೀಯ ತಂಡದ ತಜ್ಞವೈದ್ಯರು ವೈದ್ಯಕೀಯ ಸಿಬ್ಬಂದಿಗಳ ನಿರಂತರ ಪರಿಶ್ರಮ ಮತ್ತು ಕಾಳಜಿಯ ಫಲವಾಗಿ ಮಹಾಮಾರಿ ಕೋವಿಡ್-19 ದಿಂದ ಆರು ತಿಂಗಳ ಮುಗುವನ್ನೂ ಕೂಡಾ ಗುಣಪಡಿಸಿರುವುದು ವಿಶೇಷವಾಗಿದ್ದು, ಜನರ ಮೆಚ್ಚುಗೆಗೆ ವೈದ್ಯ ಬಳಗ ಪಾತ್ರವಾಗಿದೆ.

ಇಂದು ಬಿಡುಗಡೆಗೊಂಡ ರೋಗಿಗಳಲ್ಲಿ ರೋಗಿ ಸಂಖ್ಯೆ 309 (ಮಹಿಳೆ- 70 ವರ್ಷ) ರೋಗಿ ಸಂಖ್ಯೆ 329 (ಮಗು -6 ತಿಂಗಳು) ರೋಗಿ ಸಂಖ್ಯೆ 330 (ಮಹಿಳೆ -28 ವರ್ಷ) ಇವರು ಸಂಪೂರ್ಣ ಗುಣಮುಖರಾಗಿದ್ದು ಆಸ್ಪತ್ರೆಯಿಂದ ಇಂದು ಬಿಡುಗಡೆಹೊಂದಿದ್ದಾರೆ.

ಜಿಲ್ಲೆಯಲ್ಲಿ ಈವರೆಗೆ 47 ಪಾಸಿಟಿವ್ ಪ್ರಕರಣಗಳು ದೃಡಪಟ್ಟಿವೆ. ಇವರಲ್ಲಿ ಮೂವರು ಕೋವಿಡ್-19 ಸೋಂಕಿತ ರೋಗಿಗಳು ಮೃತಪಟ್ಟಿದ್ದು, 22 ಕೋವಿಡ್-19 ರೋಗಿಗಳು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಇನ್ನುಳಿದ 22 ಕೋವಿಡ್-19 ರೋಗಿಗಳ ಆರೋಗ್ಯ ಸ್ಥಿರವಾಗಿದ್ದು ಪರಿಣಾಮಕಾರಿ ಚಿಕಿತ್ಸೆ ನಡೆಯುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಇದೇ ಸಂದರ್ಭದಲ್ಲಿ ಜಿಲ್ಲಾಸ್ಪತ್ರೆ ಸರ್ಜನ್ ಡಾ. ಎಸ್.ಎ ಕಟ್ಟಿ, ಡಾ.ಲಕ್ಕಣ್ಣವರ, ಡಾ.ಬಿರಾದಾರ, ರವಿ ಕಿತ್ತುರ, ಶ್ರೀಮತಿ ಎಸ್.ಎ ಮೋಮಿನ್, ಎಸ್.ಎಂ ಅಗೇದಾಳ, ಎಸ್,ಎ ಭಜಂತ್ರಿ ಹಾಗೂ ಜಿಲ್ಲಾಸ್ಪತ್ರೆಯ ಸಿಬ್ಬಂದಿಗಳು ಇದ್ದರು.


advertisement

LEAVE A REPLY

Please enter your comment!
Please enter your name here