ವಿಜಯಪುರ: ಕರ್ತವ್ಯ ನಿರತ ಎಎಸ್ಪಿಗೆ ಅಪಘಾತ.

0
173

ವಿಜಯಪುರ: ಮೇ.4:  ವಿಜಯಪುರ ಜಿಲ್ಲೆಯ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಡಾ. ರಾಮ್. ಎಲ್. ಅರಸಿದ್ದಿ ರವರು ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳ ಕರ್ತವ್ಯ ಪರಿಶೀಲನೆ ಕುರಿತು ಮೇಲ್ವಿಚಾರಣೆ ಮಾಡುತ್ತಾ ಕಾಮತ್ ಹೊಟೇಲ್ ಬಳಿ ಬಂದಾಗ ರಸ್ತೆಯ ಬದಿಯ ಬ್ಯಾರಿಕೇಡ್‍ಗಳು ಅಸ್ತವ್ಯಸ್ತ ಇರುವುದನ್ನು ಗಮನಿಸಿ, ರಸ್ತೆಯ ಬದಿಯಲ್ಲಿ ನಿಂತು ಅಲ್ಲಿರುವ ಸಿಬ್ಬಂದಿಗಳಿಗೆ ಬ್ಯಾರಿಕೇಡಗಳನ್ನು ಸರಿಯಾಗಿ ಜೋಡಣೆ ಮಾಡುವ ಕುರಿತು ಸೂಚನೆ ನೀಡುತ್ತಿರುವಾಗ ಸುಮಾರು 10.20 ಗಂಟೆಗೆ ವಿಜಯಪುರ ಶಹರದ ಬಸವೇಶ್ವರ ಸರ್ಕಲ್ ಕಡೆಯಿಂದ ದ್ವೀಚಕ್ರ ವಾಹನ ಚಾಲಕನೊಬ್ಬ ತನ್ನ ವಾಹನ ಸಂಖ್ಯೆ ಏಂ-48 ಇ-6536 ನೇದ್ದನ್ನು ಅತಿ ವೇಗವಾಗಿ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಕರ್ತವ್ಯ ನಿರತರಾಗಿದ್ದ ಡಾ. ರಾಮ್ ಎಲ್ ಅರಸಿದ್ದಿ, ರವರಿಗೆ ಹಾಯಿಸಿದ್ದರ ಪರಿಣಾಮವಾಗಿ, ಸದರಿಯವರಿಗೆ ತೊಡೆ ಭಾಗ ಮತ್ತು ತಲೆಗೆ ಬಲವಾದ ಗಾಯಗಳಾಗಿವೆ. ಹಾಗೂ ಅವರ ಅಂಗರಕ್ಷಕನಾದ ರಾಘವೇಂದ್ರ ಜಾಧವ ರವರಿಗೂ ಸಹ ಸಣ್ಣಪುಟ್ಟ ಗಾಯಗಳಾಗಿರುತ್ತವೆ. ಕೂಡಲೇ ಚಿಕಿತ್ಸೆಗೆ ಬಿ.ಎಲ್.ಡಿ.ಇ. ಆಸ್ಪತ್ರೆಗೆ ದಾಖಲಿಸಿದ್ದು, ತುರ್ತು ಚಿಕಿತ್ಸಾ ಘಟಕದಲ್ಲಿ ಉಪಚಾರ ಪಡೆಯುತ್ತಿರುತ್ತಾರೆ. ಈ ಕುರಿತಂತೆ ವಿಜಯಪುರ ಸಂಚಾರಿ ಪೊಲೀಸ್ ಠಾಣೆಯಲ್ಲಿ  ಪ್ರಕರಣ ದಾಖಲಾಗಿದೆ.


advertisement

LEAVE A REPLY

Please enter your comment!
Please enter your name here