ವಿಜಯಪುರ: ಇಂದು 4 ಜನ ಕೊರೋನಾ ಸೋಂಕಿತರು ಗುಣಮುಖ: ಜಿಲ್ಲೆಯಲ್ಲಿ ಒಟ್ಟು 19 ಜನ ಗುಣಮುಖ

0
171

ವಿಜಯಪುರ ಮೇ.04: ಕೋವಿಡ್-19 ದಿಂದ ಗುಣಮುಖರಾದ ನಾಲ್ವರು ರೋಗಿಗಳು ಇಂದು ಜಿಲ್ಲಾಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.
ರೋಗಿ ಸಂಖ್ಯೆ : 400 (ಮಹಿಳೆ- 25 ವರ್ಷ) 403 (ಮಹಿಳೆ-47 ವರ್ಷ) 404 (ಹುಡುಗ -10 ವರ್ಷ) 405 (ಮಹಿಳೆ-34 ವರ್ಷ) ಬಿಡುಗಡೆಗೊಂಡ ರೋಗಿಗಳಾಗಿದ್ದು, ಈವರೆಗೆ ಕೋವಿಡ್-19 ದಿಂದ ಗುಣಮುಖರಾದ ಒಟ್ಟು 19 ರೋಗಿಗಳು ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.

ಜಿಲ್ಲೆಯ ಈವರೆಗಿನ ಒಟ್ಟು 47 ಪಾಸಿಟಿವ್ ಪ್ರಕರಣಗಳಲ್ಲಿ ಇಬ್ಬರು ಮೃತಪಟ್ಟಿದ್ದು, ಇನ್ನುಳಿದ 26 ಕೋವಿಡ್-19 ಪಾಸಿಟಿವ್ ರೋಗಿಗಳ ಆರೋಗ್ಯ ಸ್ಥಿರವಾಗಿದ್ದು, ಪರಿಣಾಮಕಾರಿ ಚಿಕಿತ್ಸೆ ಕೈಗೊಳ್ಳಲಾಗುತ್ತಿದೆ ಎಂದು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ತಿಳಿಸಿದ್ದಾರೆ.


advertisement

LEAVE A REPLY

Please enter your comment!
Please enter your name here