ವಿಜಯಪುರ: ಜಿಲ್ಲೆಯಲ್ಲಿ ಈವರೆಗೆ ಕೊರೋನಾ ಸೋಂಕಿನಿಂದ 6 ಜನ ಗುಣಮುಖ ಇಂದು ಗುಣಮುಖರಾದ ಐದು ಜನ ರೋಗಿಗಳಿಗೆ ಚಪ್ಪಾಳೆ ತಟ್ಟಿ, ಮುಂದಿನ ಜೀವನಕ್ಕೆ ಶುಭ ಹಾರೈಸಿ, ಬಿಡುಗಡೆ

0
190

ವಿಜಯಪುರ ಎ.27 : ಕೋವಿಡ್-19 ಸೋಂಕಿತ ಐವರು ರೋಗಿಗಳು ಸಹ ಗುಣಮುಖರಾಗಿದ್ದು, ಜಿಲ್ಲಾಸ್ಪತ್ರೆಯಿಂದ ಇಂದು ಬಿಡುಗಡೆ ಗೊಳಿಸಲಾಗಿದೆ ಎಂದು ಜಿಲ್ಲಾ ಪಂಚಾಯತ ಮುಖ್ಯಕಾರ್ಯನಿರ್ವಹಣಾಧಿಕಾರಿಗಳು ತಿಳಿಸಿದ್ದಾರೆ.

ನಿನ್ನೆ ರೋಗಿ ಸಂಖ್ಯೆ 221 ಬಿಡುಗಡೆಗೊಳಿಸಲಾಗಿದ್ದು, ಅದರಂತೆ ಇಂದು ಕೋವಿಡ್-19 ಮಹಾಮಾರಿಯಿಂದ ಗುಣಮುಖರಾದ ಐದು ಜನರಿಗೆ ಚಪ್ಪಾಳೆ ತಟ್ಟುವ ಮೂಲಕ, ಸಸಿ ನೀಡುವ ಮೂಲಕ ಹಾಗೂ ಜಿಲ್ಲಾಡಳಿತದ ವತಿಯಿಂದ ಡ್ರೈಫ್ರೂಟ್ಸ್ ನೀಡಿ ಸಂಭ್ರಮದ ಕ್ಷಣವಾಗಿ ವೈದ್ಯರು, ವೈದ್ಯ ಸಿಬ್ಬಂದಿಗಳು ರೋಗಿಗಳಿಗೆ ಬೀಳ್ಕೋಟ್ಟರು.

ಇಂದು ಬಿಡುಗಡೆಗೊಂಡ ಐವರು ರೋಗಿಗಳಲ್ಲಿ ರೋಗಿ ಸಂಖ್ಯೆ 221 ( 60 ವರ್ಷದ ಮಹಿಳೆ) ರೋಗಿ ಸಂಖ್ಯೆ 228 (13 ವರ್ಷದ ಬಾಲಕ) ರೋಗಿ ಸಂಖ್ಯೆ 229 ( 12 ವರ್ಷದ ಬಾಲಕಿ) ರೋಗಿ ಸಂಖ್ಯೆ 230 ( 10 ವರ್ಷದ ಬಾಲಕ) ರೋಗಿ ಸಂಖ್ಯೆ 231 ( 49 ವರ್ಷದ ಪುರುಷ) ರೋಗಿ ಸಂಖ್ಯೆ 232 (20 ವರ್ಷದ ಮಹಿಳೆ) ಇವರು ಇಂದು ಬಿಡುಗಡೆ ಹೊಂದಿದ್ದು, ಜಿಲ್ಲೆಗೆ ಅತ್ಯಂತ ಸಂತಸದ ಕ್ಷಣವಾಗಿದೆ ಎಂದು ಅವರು ತಿಳಿಸಿದ್ದಾರೆ.
ವೈದ್ಯರ, ತಜ್ಞ ವೈದ್ಯರ ಹಾಗೂ ವೈದ್ಯಕೀಯ ಸಿಬ್ಬಂದಿಗಳ ಅತ್ಯುತ್ತಮ ಸೇವೆಯ ಫಲವಾಗಿ ಇಂದು ಈ ರೋಗಿಗಳು ಗುಣಮುಖರಾಗಿದ್ದು, ವೈದ್ಯರಿಗೆ ಅಭಿನಂದನೆ ಹೇಳುವ ಜೊತೆಗೆ ರೋಗಿಗಳಿಗೆ ಭವಿಷ್ಯದ ಜೀವನ ಆರೋಗ್ಯಕರ ಮತ್ತು ಸುಖಕರವಾಗಿರಲೆಂದು ಜಿಲ್ಲಾಧಿಕಾರಿಗಳು, ಜಿ.ಪಂ ಸಿಇಒ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಶುಭ ಹಾರೈಸಿದ್ದಾರೆ.


 

LEAVE A REPLY

Please enter your comment!
Please enter your name here