ವಿಜಯಪುರ: ಅಕ್ರಮ ಮಧ್ಯ ಮಾರಾಟ ಎರಡು ಬಾರ್ ಗಳ ಲೈಸನ್ಸ್ ರದ್ದು

0
167

ವಿಜಯಪುರ ಎ.25: ಕೊರೋನಾ ವೈರಸ್ ತಡೆಗಟ್ಟುವ ಹಿನ್ನಲೆಯಲ್ಲಿ ಹಾಗೂ ಸಾರ್ವಜನಿಕರ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಸಾಮಾಜಿಕ ಅಂತರ ಕಾಪಾಡಲು ಅಬಕಾರಿ ಇಲಾಖೆ ವತಿಯಿಂದ ರಾಜ್ಯಾದ್ಯಂತ ಕರ್ನಾಟಕ ಅಬಕಾರಿ ಕಾಯ್ದೆ 1965ರ ಕಲಂ 21(1) ಹಾಗೂ 3(2) ರನ್ವಯ ದಿನಾಂಕ 14-03-2020, 21-03-2020 ಮತ್ತು 24-03-2020 ರಿಂದ ಜಾರಿಗೆ ಬರುವಂತೆ ಎಲ್ಲ ಮಧ್ಯದಂಗಡಿಗಳನ್ನು ಮಚ್ಚಲು ಆದೇಶಿಸಲಾಗಿದೆ ಎಂದು ವಿಜಯಪುರದ ಅಬಕಾರಿ ಇಲಾಖೆಯ ಉಪ ಆಯುಕ್ತರು ತಿಳಿಸಿದ್ದಾರೆ.

ಈ ಆದೇಶ ಉಲ್ಲಂಘಿಸಿ ಪ್ರೇಸಿಡೆಂಟ್ ಮರ್ಚಂಟ್ಸ್ ರಿಕ್ರಿಯೇಶನ್ ಕ್ಲಬ್ ಸಿಲ್-4 ಮತ್ತು ಶ್ರೀ ಬಿ.ಭುಜಂಗಶೆಟ್ಟಿ (ಪಂಚಮಿ ಬಾರ್) ಸಿಲ್-9 ಸನ್ನದುದಾರರು ಮಧ್ಯ ಮಾರಾಟ ಮಾಡಿರುವ ಬಗ್ಗೆ ಅವರ ವಿರುದ್ಧ ಪ್ರಕರಣಗಳು ದಾಖಲಾಗಿರುವ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿಗಳು ಎರಡು ಸನ್ನದುಗಳನ್ನು ದಿನಾಂಕ 23-04-2020 ರಿಂದ ಜಾರಿಗೆ ಬರುವಂತೆ ರದ್ದುಗೊಳಿಸಿ ಆದೇಶ ಹೊರಡಿಸಿದ್ದಾರೆ ಎಂದು ಅಬಕಾರಿ ಉಪ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


 

LEAVE A REPLY

Please enter your comment!
Please enter your name here