ವಿಜಯಪುರ: ಈವರೆಗೆ ಜಿಲ್ಲೆಯಲ್ಲಿ 10 ಕೊರೋನಾ ಪಾಸಿಟಿವ್, 1 ಸಾವು

0
196

ವಿಜಯಪುರ ಎ.15: ವಿಜಯಪುರ ಜಿಲ್ಲೆಗೆ ವಿದೇಶ ಮತ್ತು ಇತರ ಕಡೆಗಳಿಂದ ಇಲ್ಲಿಯವರೆಗೆ 686 ಜನ ಬಂದಿರುವ ಬಗ್ಗೆ ವರದಿಯಾಗಿದ್ದು, ಒಟ್ಟು 10 ಕೊರೋನಾ ಪಾಸಿಟಿವ್ ಪ್ರಕರಣಗಳು ದಾಖಲಾಗಿದ್ದು, ಇದರಲ್ಲಿ ಒಬ್ಬರು ಮೃತಪಟ್ಟಿದ್ದಾರೆಂದು ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ ಅವರು ತಿಳಿಸಿದ್ದಾರೆ.

ಜಿಲ್ಲೆಯಲ್ಲಿ 335 ಐಶೋಲೇಶನ್‍ದಲ್ಲಿದ್ದು, 350 ಗಿಂತ ಜನರು 28 ದಿನಗಳ ಅವಧಿ ಪೂರ್ಣಗೊಳಿಸಿದ್ದಾರೆ. ಈವರೆಗೆ ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿದ್ದ 362 ಗಂಟಲು ದ್ರವ ಮಾದರಿಗಳಲ್ಲಿ 256 ನೆಗೆಟಿವ್ ವರದಿ ಬಂದಿದ್ದು, ಇನ್ನೂ 96 ಜನರ ವರದಿ ಬರಬೇಕಾಗಿದೆ ಎಂದು ಅವರು ತಿಳಿಸಿದ್ದಾರೆ.

ನಗರದಲ್ಲಿ ಕೊರೋನಾ ಸೋಂಕಿತರಾದವರೊಂದಿಗೆ ಸಂಪರ್ಕ ಹೊಂದಿರುವವರ ಬಗ್ಗೆ ತನಿಖೆ ನಡೆದಿದ್ದು, ರೋಗಿ ಸಂಖ್ಯೆ 221 ಇವರೊಂದಿಗೆ ಸಂಪರ್ಕ ಇದ್ದವರ ಬಗ್ಗೆ ಗುರುತಿಸುವ ಕಾರ್ಯ ಮುಂದುವರೆದಿದ್ದು, ಮುಂದಿನ ದಿನಗಳಲ್ಲಿ ಪತ್ತೆಯಾಗಲಿದೆ ಎಂದು ತಿಳಿಸಿದ್ದಾರೆ. ರೋಗಿ ಸಂಖ್ಯೆ 228 ಗೆ ಸಂಬಂಧಪಟ್ಟಂತೆ ಮಹಾರಾಷ್ಟ್ರದ ಪುಣೈನ ಖಾಸಗಿ ಕಂಪನಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಮಹಿಳೆಯಿಂದ ಪಾಸಿಟಿವ್ ಕೊರೋನಾ ಸೋಂಕು ತಗುಲಿರುವ ಬಗ್ಗೆ ದೃಢಪಟ್ಟಿದೆ ಎಂದು ಅವರು ತಿಳಿಸಿದ್ದಾರೆ.

ವಿಜಯಪುರ ಹಾಗೂ ಬಾಗಲಕೋಟ ಜಿಲ್ಲೆಗಳ ಉಸ್ತುವಾರಿ ನೋಡಿಕೊಳ್ಳಲು ಬೆಳಗಾವಿ ವಿಭಾಗದ ಪ್ರಾದೇಶಿಕ ಆಯುಕ್ತರಾದ ಶ್ರೀ ಆದಿತ್ಯ ಆಮ್ಲನ್ ಬಿಸ್ವಾಸ್ ಇವರನ್ನು ಸರ್ಕಾರ ನೇಮಿಸಿದ್ದು, ಅನುಭವಿ ಮತ್ತು ಹಿರಿಯ ಅಧಿಕಾರಿ ಇವರಾಗಿದ್ದು, ಸೂಕ್ತ ಮಾರ್ಗದರ್ಶನ ಸಹ ದೊರೆಯಲಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ಪ್ರಾದೇಶಿಕ ಆಯುಕ್ತರು ಇಂದು ನಗರದ ಹರಣಶಿಖಾರಿ ಕಾಲೋನಿ, ಚಪ್ಪರ್‍ಬಂದ್ ಕಾಲನಿ, ಝೆಂಡಾ ಕಟ್ಟಿ, ಹಕೀಂ ಚೌಕ್ ಸೇರಿದಂತೆ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿದ ಅವರು ವ್ಯವಸ್ಥೆ, ವೈದ್ಯಕೀಯ ಮತ್ತು ಔಷಧಿಯ ವ್ಯವಸ್ಥೆ, ಅಗತ್ಯ ವಸ್ತುಗಳ ಪೂರೈಕೆ ಮತ್ತು ಕೊರೋನಾ ಪಾಸಿಟಿವ್ ಹೊಂದಿರುವ ಎರಡು ಕುಟುಂಬಗಳ ಸ್ಥಳಗಳನ್ನು ಪರಿಶೀಲನೆ ನಡೆಸಿದ್ದು, ಸರ್ಕಾರದ ನಿರ್ದೇಶನದಂತೆ ಸೂಕ್ತ ಮಾರ್ಗದರ್ಶನ ನೀಡುತ್ತಿದ್ದು, ಅತ್ಯಂತ ಸಹಕಾರಿಯಾಗಿದೆ ಎಂದು ಹೇಳಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನುಪಮ್ ಅಗರವಾಲ್ ಅವರು ಮಾತನಾಡಿ ಕೊರೋನಾ ಸೋಂಕಿತರ ಸಂಪರ್ಕದ ಬಗ್ಗೆ ತೀವ್ರ ತನಿಖಾ ಕಾರ್ಯ ನಡೆದಿದೆ ಎಂದು ತಿಳಿಸಿದರು. ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೋವಿಂದ ರೆಡ್ಡಿ ಉಪಸ್ಥಿತರಿದ್ದರು.


 

ambedkar image

LEAVE A REPLY

Please enter your comment!
Please enter your name here