ವಿಜಯಪುರ: ರೆಡ್ ಜೋನ್ ಪ್ರದೇಶಗಳಿಗೆ ದಿನನಿತ್ಯದ ಸಾಮಗ್ರಿ ಪೂರೈಕೆ

0
177

ವಿಜಯಪುರ ಎ.14: ವಿಜಯಪುರ ನಗರದ ಕೊರೋನಾ ರೆಡ್ ಜೋನ್ ಘೋಷಿಸಿದ ಪ್ರದೇಶಗಳಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ಅಗತ್ಯ ವಸ್ತುಗಳ ಪೂರೈಕೆಗಾಗಿ ಈ ಕೆಳಕಂಡ ಸಿಬ್ಬಂದಿಗಳನ್ನು ನೇಮಕ ಮಾಡಿ ಮಹಾನಗರ ಪಾಲಿಕೆ ಆಯುಕ್ತರು ಆದೇಶ ಹೊರಡಿಸಿದ್ದಾರೆ.

ನಗರದಲ್ಲಿ ಕೋವಿಡ್-19 ರೋಗ ನಿಯಂತ್ರಿಸುವ ನಿಟ್ಟಿನಲ್ಲಿ ಕಾಮತ್ ಹೊಟೇಲ್ ಹಿಂದೆ, ಹಕೀಂ ಚೌಕ್, ಹರಣಶಿಖಾರಿ ಓಣಿ, ಕೊಂಚಿಕೊರವರ ಓಣಿ, ಬಡಿಕಮಾನ್, ಚಪ್ಪರ್ ಬಂದ ಓಣಿ, ಜುಮ್ಮಾ ಮಸೀದಿ ಹಿಂದಿರುವ ಕೆ.ಎಚ್.ಬಿ ಕಾಲನಿ, ಪೈಲ್ವಾನ್ ನಗರ, ಮಹೆಬೂಬ ನಗರ, ಬೆಂಡಿಗೇರಿ ಓಣಿ, ಸುಭಾಸ್ ಕಾಲನಿ, ಶಾಂತಿ ನಗರಗಳನ್ನು ರೆಡ್ ಜೋನ್ ಎಂದು ಘೋಷಿಸಲಾಗಿರುತ್ತದೆ.

ಈ ಕಾಲನಿಗಳಲ್ಲಿರುವ ಸಾರ್ವಜನಿಕರಿಂದ ಬರುವ ದೂರವಾಣಿಯಿಂದ ಮಾಹಿತಿ ಪಡೆದುಕೊಂಡು ದಿನನಿತ್ಯದ ಸಾಮಗ್ರಿಗಳನ್ನು ಪೂರೈಸಲು ಸಹಾಯವಾಣಿ ಮೂಲಕ ತಿಳಿಸಿದ್ದಲ್ಲಿ ಈ ಸಾರ್ವಜನಿಕರ ಹೆಸರು, ವಿಳಾಸ ಹಾಗೂ ದೂರವಾಣಿ ಸಂಖ್ಯೆ ಪಡೆದುಕೊಂಡು ಸಾಮಗ್ರಿಗಳ ಕಿಟ್‍ನ್ನು ತಯಾರಿಸಲು ಅಧೀನ ಸಿಬ್ಬಂದಿಗಳಿಗೆ ಮಾಹಿತಿ ಸಲ್ಲಿಸಲು ಈ ಕೆಳಕಾಣಿಸಿದ ಸಿಬ್ಬಂದಿಗಳಿಗೆ ಬೆಳಿಗ್ಗೆ 8.00 ಗಂಟೆಯಿಂದ ಮಧ್ಯಾಹ್ನ 2.00 ಗಂಟೆಯವರೆಗೆ ಸಹಾಯವಾಣಿ ಕರ್ತವ್ಯ ನಿರ್ವಹಿಸಲು ಸೂಚಿಸಿದ್ದು, ಕರ್ತವ್ಯ ಲೋಪವೇನಾದರೂ ಕಂಡುಬಂದಲ್ಲಿ ಅಂತಹ ಸಿಬ್ಬಂದಿಗಳ ಮೇಲೆ ಶಿಸ್ತು ಕ್ರಮ ಕೈಗೊಳ್ಳಲಾಗುತ್ತದೆ.

ಈ ಸಹಾಯವಾಣಿ ಸಿಬ್ಬಂದಿಗಳ ಹೆಸರು ಹಾಗೂ ಮೊ.ಸಂ: ಕಾವ್ಯ.ಎಸ್ ಇಂಗಳೇಶ್ವರ, ಸಹಾಯಕ ಅಭಿಯಂತರರು (ಮೊ : 9845991132) ರಷ್ಮಿ ಮಾಲಗಾವಿ, ಸಹಾಯಕ ಅಭಿಯಂತರರು (ಮೊ : 7680820881) ಪ್ರೀಯಾಂಕಾ ಕುಲಕರ್ಣಿ ಸಹಾಯಕ ಅಭಿಯಂತರರು (ಮೊ : 9901093720) ಪರಿಮಳಾ ಚಿಮ್ಮಲಗಿ ಕಿರಿಯ ಅಭಿಯಂತರರು (ಮೊ : 9481082045) ಆರ್.ಎ ಮುಜಾವರ, ಎಫ್.ಜಿ.ಆರ್.ಐ (ಮೊ : 8310425195) ಪ್ರೀತಿ ಇವನಿ, ದ್ವಿ.ದ.ಸ (ಮೊ : 8197804052) ಪಲ್ಲವಿ ಗುನ್ನಾಪೂರ, ಸಿನಿಯರ್ ವಾಲಮನ್ (ಮೊ : 6363585604) ಇವರಿಗೆ ಮೇಲ್ವಿಚಾರಕರಾಗಿ ಗೀತಾ ಎಸ್ ನಿಂಬಾಳ್ಕರ್, ಕಚೇರಿ ವ್ಯವಸ್ಥಾಪಕರು, ಶೀಲ್ಪಶ್ರೀ ಸಾಗರ, ಕಚೇರಿ ವ್ಯವಸ್ಥಾಪಕರು, ಇವರನ್ನು ನೇಮಿಸಲಾಗಿದೆ ಎಂದು ಮಹಾನಗರ ಪಾಲಿಕೆ ಆಯುಕ್ತರು ಆದೇಶದಲ್ಲಿ ತಿಳಿಸಿದ್ದಾರೆ.


 

LEAVE A REPLY

Please enter your comment!
Please enter your name here