“ಪ್ರೀತಿಯ ಹುಚ್ಚು ಹಚ್ಚಿಕೊಂಡ ಹುಡುಗ-ಹುಡುಗಿಯರೆ ಪ್ರೇಮದ ಅಮಲಿನಲ್ಲಿ ಮುಳಗಬೇಡಿ”

0
306

“ಪ್ರೀತಿ” ಪ್ರತಿಯೊಬ್ಬರಲ್ಲೂ ಪುಟಿಯುವ ಚೇತನ. ಜೀವನದಲ್ಲಿ ಪ್ರೀತಿಸದವರು ಯಾರಿದ್ದಾರೆ ಹೇಳಿ? ಕಣ್ಣ ಭಾಷೆಯಲ್ಲಿ ಮಾತನಾಡಿಸುವ ಹುಡುಗಿಯ ನೋಟಕ್ಕೆ ಕರಗಿ ನೀರಾಗುವ ಹುಡುಗರದೆಷ್ಟೋ ಜನ ಇದ್ದಾರೆ. ಪ್ರೀತಿಯಲ್ಲಿ ಬಿದ್ದ ಮನಸ್ಸಿಗೆ ಕುಂತರೂ, ನಿಂತರೂ, ನಡೆದಾಡಿದರೂ, ನಿದ್ರಾಲೋಕದೊಳಗಿದ್ದರೂ ಪ್ರೇಮದ ಅಮಲಿನಲ್ಲಿಯೆ ತೆಲಾಡುವ ಹುಡುಗ-ಹುಡುಗಿಯರು ಕಾಣುವ ಕನಸ್ಸುಗಳಿಗೆ ಕೊನೆಯಿಲ್ಲ.ಮಾತುಗಳಿಗೆ ಮಿತಿಯಿಲ್ಲ. ಪ್ರೀತಿ ಎಂದರೇನೆಂದು ಅರಿಯದ, ಆಗತಾನೆ ಹರೆಯಕ್ಕೆ ಕಾಲಿಟ್ಟ ಟೀನೇಜ ಹುಡುಗ-ಹುಡುಗಿಯರು ಕಲ್ಪನೆಯ ಸಾವಿರಾರು ಕನಸ್ಸುಗಳನ್ನು ಕಟ್ಟಿಕೊಂಡು ಕನಸು ನನಸಾಗುವ ಖುಷಿಯಲ್ಲಿ ನೆಲವಾವುದೋ, ಆಕಾಶವಾವುದೋ ತಿಳಿಯದೆ ಪ್ರೀತಿಯ ಹುಚ್ಚಲಿ ತಮ್ಮ ಶಿಕ್ಷಣವನ್ನು, ಭವಿಷ್ಯವನ್ನು ಹಾಳು ಮಾಡಿಕೊಂಡು ಚಿಕ್ಕ ವಯಸ್ಸಿನಲ್ಲಿಯೇ ಮಾದಕ ಪಾನಿಯಗಳಿಗೆ ಮಾರುಹೋಗಿ ಚಟದ ದಾಸರಾಗುತ್ತಿದ್ದಾರೆ. ಊಟ, ನಿದ್ದೆ ಇಲ್ಲದೇ ಆಕೆಯ/ಆತನ ನೆನಪಿನಲ್ಲೆ ಸಮಯವನ್ನು ವ್ಯರ್ಥ ಹಾಳು ಮಾಡುತ್ತಾರೆ. ಕಾಲೇಜಿನಲ್ಲಿ ಪಿರಡಗೆ ಕೂಡದೆ,ಕ್ಲಾಸ್‍ಗೆ ಚಕ್ಕರ ಹಾಕಿ ಕ್ಯಾಂಪಸನಲ್ಲಿ ಸ್ನೇಹಿತರೊಡನೆ ಹರಟೆ ಹೊಡೆಯುತ್ತಾ ಹುಚ್ಚುಚ್ಚಾಗಿ ವರ್ತಿಸುವ ಹುಡುಗ-ಹುಡುಗಿಯರೇ ನಿಮ್ಮದು ನಿಜವಾಗ್ಲೂ ಲವ್ವಾ?ಅಥವಾ ಆಕರ್ಷಣೆಯಾ?
ಪ್ರೀತಿಗೂ ಆಕರ್ಷಣೆಗೂ ವ್ಯತ್ಯಾಸವಿದೆ. ಪ್ರೀತಿಯಲ್ಲಿ ಎರಡು ಹೃದಯಗಳ ನಡುವೆ ಮಧುರವಾದ ಬಾಂಧವ್ಯವಿದೆ. ಭಾವನೆಗಳಿವೆ, ಆಸಕ್ತಿ, ಅಭಿರುಚಿಗಳಿವೆ. ಒಬ್ಬರನ್ನೊಬ್ಬರು ಅರಿತುಕೊಳ್ಳುವ ಮನಸ್ಥಿತಿ ಇದೆ. ಆದರೆ ಆಕರ್ಷಣೆಯಲ್ಲಿ ಇದಾವುದೂ ಇಲ್ಲ. ಹರೆಯಕ್ಕೆ ಕಾಲಿಡುವ ಪಡ್ಡೆ ಹುಡುಗರು ಹುಡುಗಿಯರ ಪಿಗರ ನೋಡಿ ಆಕರ್ಷಣೆಗೊಳಗಾದರೆ, ಹುಡುಗಿಯರು ಹುಡುಗರ ಡ್ರೆಸ್, ಕಾರ, ಬೈಕ್, ದುಡ್ಡು ನೋಡಿ ಆಕರ್ಷಣೆಗೊಳಗಾಗುವುದು ಸರ್ವೆ ಸಾಮಾನ್ಯದ ಮಾತಾಗಿದೆ. ಆದರೆ ಇಂದು ಮಿಡಿಯಾಗಳ ಪ್ರಭಾವ, ಅತ್ಯಾಧುನಿಕ ಮೊಬೈಲಗಳ ಸೌಕರ್ಯದಿಂದಾಗಿ ಹುಡುಗ-ಹುಡುಗಿ ಪ್ರೀತಿ ಮತ್ತು ಆಕರ್ಷಣೆಯ ನಡುವಿನ ವ್ಯತ್ಯಾಸವನ್ನು ಗುರುತಿಸಲಾಗದಷ್ಟು ಗೊಂದಲ ಉದ್ಬವಿಸಿಕೊಂಡಿದೆ.

ಪ್ರೀಯ ಸ್ನೇಹಿತರೆ, ನಿಮ್ಮ “ಪ್ರೀತಿ”, ಜೀವನದ ಸಂಗಾತಿಯ ಆಯ್ಕೆಗಾಗಿಯೋ ಅಥವಾ ಆ ಕ್ಷಣದ ಮೋಹಕ್ಕಾಗಿಯೋ?ಕಾಲ ಹರಣಕ್ಕಾಗಿಯೋ?ಎಂಬ ವಿವೇಚನೇ ಇರಲಿ. ಐove is bಟiಟಿಜ ಅಂತಾರೆ. ಆದರೆ ಪ್ರೀತಿಸುವವರು ಕುರುಡಾಗಿರಬಾರದು. ನಿಮ್ಮ ಪ್ರೇಮ ನಿಮಗಾಗಲಿ, ನಿಮ್ಮ ಮನೆಯವರಿಗಾಗಲಿ ಮುಳುವಾಗದಿರಲಿ. ನಿಮ್ಮ ಕುಟುಂಬದ ಮೇಲಾಗುವ, ನಿಮ್ಮ ಭವಿಷ್ಯದ ಮೇಲಾಗುವ ಪರಿಣಾಮದ ಬಗ್ಗೆ ಸಾವಧಾನವಾಗಿ ಯೋಚಿಸಿ ನಿರ್ಣಯ ತೆಗೆದುಕೊಳ್ಳಿ. ಪ್ರೀತಿಯ ತುಡಿತಕ್ಕೊ, ಮಿಡಿತಕ್ಕೊ, ಆಕ್ಷಣದ ತಲ್ಲಣಕ್ಕೊ ಬೆರಗಾಗಿ ದೈಹಿಕ ಆಕರ್ಷಣೆಗೆ ಒಳಗಾಗಿ ಅನಾಹುತಕ್ಕೆ ಎಡೆಮಾಡಿಕೊಳ್ಳದಿರಿ. ಹೂವಿಂದ ಹೂವಿಗೆ ಹಾರುವ ದುಂಬಿಯಂತೆ ನಿಮ್ಮ ಬಾಳ ಸಂಗಾತಿಯನ್ನ ಬದಲಾಯಿಸಬೇಡಿ, ವಂಚಿಸಬೇಡಿ. ಬದುಕು ಮತ್ತೆಲ್ಲೋ ಬಯಸಿದ್ದನ್ನು ಸಿಗದಂತೆ ಮಾಡುತ್ತದೆ. ಕಟ್ಟಿದ ಕನಸುಗಳೆಲ್ಲ ಕ್ಷಣಾರ್ಧದಲ್ಲಿ ನುಚ್ಚು ನೂರಾಗುತ್ತವೆ. ಕಳೆದು ಹೋದವನು/ಳು ಮನಸ್ಸಿನ ಆಳದಲ್ಲೆಲ್ಲೋ ಕಲಕುವ ಒಂದು ಮಧುರ ನೆನಪಾಗಿ ಕಣ್ಣೀರ ಹನಿಗಳು ಉದುರುತ್ತವೆ.
ಪ್ರೇಮದ ಅಮಲಿನಲ್ಲಿ ಮುಳುಗಿರುವ ನಿಮಗೆ ಹಿರಯರ ನಡೆ ನುಡಿಗಳು ತೃಪ್ಥಿ ಕೊಡದೆ ಹೋಗಬಹುದು. ಯಾವುದು ಸರಿ, ಯಾವುದು ತಪ್ಪು ಎಂದು ನಿರ್ಧಾರ ತೆಗೆದುಕೊಳ್ಳುವಷ್ಟು ಬೌದ್ದಿಕ ಸಾಮಥ್ರ್ಯ ಬೆಳೆದಿರುವುದಿಲ್ಲ. ಕೆಲವರು ಕಾಮದ ಭಾವನೆಯಿಂದ ಅಥವಾ ಇನ್ನಾವುದೋ ಆಕರ್ಷಣೆಯಿಂದ ಎದುರಿಗಿರುವವರನ್ನೆಲ್ಲ ಪ್ರೀತಿಸುತ್ತೆನೆಂದು ಹೇಳುವುದು ಪ್ರೀತಿಯಲ್ಲ. ಅದು ಕಾಮ. ನಿಜವಾದ ಪ್ರೇಮ ಕಾಮವಿಲ್ಲದೆಯೂ ಬದುಕುತ್ತದೆ,ಬಾಳುತ್ತದೆ. ಇಂಥ ಪವಿತ್ರ ಪ್ರೇಮದ ಕುರಿತು ಅರಿಯಿರಿ.ನಿಮ್ಮನ್ನು ಮೆಚ್ಚಿಸಲು, ಪುಸಲಾಯಿಸಲು ಸಾವಿರ ಸುಳ್ಳುಗಳನ್ನು ಯಾರಾದರೂ ಹೇಳಬಹುದು.ಇಂತವರ ಕುರಿತು ಎಚ್ಚರದಿಂದ ಇರುವುದು ಒಳಿತು. ಸ್ವಲ್ಪ ಆಯ ತಪ್ಪಿದರೂ “ಪ್ರೇಮ”ನಿಮ್ಮನ್ನು ಪಾತಾಳಕ್ಕೆ ತಳ್ಳಿ ಬಿಡುತ್ತದೆ.ಕಾರಣ ನಿಮ್ಮ ಹೃದಯ ಕದ್ದಿರುವ ಹುಡುಗ-ಹುಡುಗಿ ಪ್ರೀತಿಯನ್ನು ಸ್ವೀಕರಿಸುವಾಗ ತುಂಬಾ ಜಾಗೃತರಾಗಿರುವುದು ಅವಶ್ಯಕವಾಗಿದೆ.

Love is truth ಪ್ರೇಮವೊಂದು ಸತ್ಯ, Love is beauty, Love is poison, Love is sweet, Love is blind, ಪ್ರೇಮ ಕುರುಡಾದರೂ, ಪ್ರೇಮಿಗಳು ಕುರುಡರೆ?ಒಂದು ವೇಳೆ ಪ್ರೇಮಿಗಳು ಕುರುಡರಾದರೆ, ಹರಿಯುವ ನದಿ, ಬೀಸುವ ಗಾಳಿ,ಸ್ಥಬ್ದವಾಗಿ ಪ್ರೇಮಿಗಳ ಜೀವನ ಅಯೋಮಯವಾಗುತ್ತದೆ. “ಪ್ರೀತಿ”ಎಂದರೆ ಸುಖವಲ್ಲ, ಸುಂದgವಾಗಿ ಅರಳಿ ನಿಂತಿರುವ ಹೂವಲ್ಲ, ಅದು ಯಾವಾಗಲೂ ಖಡ್ಗದ ಅಲಗಿನಂತೆ ಹೋಗುವಾಗಲೂ ಕೊಯ್ಯುತ್ತದೆ,ಬರುವಾಗಲೂ ಕೊಯ್ಯುತ್ತದೆ.ಹಾಗಾದರೆ ಹರೆಯಕ್ಕೆ ಕಾಲಿಡುವ,ಕಾಲಿಟ್ಟಿರುವ ಪ್ರೀಯ ಸ್ನೇಹಿತರೆ ಒಮ್ಮೆ ನಿಧಾನವಾಗಿ ಯೋಚಿಸಿ ಪ್ರೀತಿ ಯಾವುದು ಆಕರ್ಷಣೆ ಯಾವುದು.

ನಿನ್ನ ವಾತ್ಸಲ್ಯ.

 

LEAVE A REPLY

Please enter your comment!
Please enter your name here