ಪರವಾನಿಗೆ ಪಡೆಯದೆ ಆಹಾರ ಹಂಚಿದಲ್ಲಿ ಕ್ರಿಮಿನಲ್ ಮೊಕದ್ದಮೆ

0
83

ವಿಜಯಪುರ  ಎ.04: ನೋವೆಲ್ ಕೊರೋನಾ ವೈರಸ್ ಸಾಂಕ್ರಾಮಿಕ ರೋಗವನ್ನು ತಡೆಗಟ್ಟುವ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರವು ಎಪ್ರೀಲ್ 14 ರ ವರೆಗೆ ದೇಶಾದ್ಯಂತ ಲಾಕ್‍ಡೌನ್ ಘೋಷಿಸಿದ ಹಿನ್ನಲೆಯಲ್ಲಿ ಬೇರೆ ರಾಜ್ಯಗಳ ವಲಸೆ ನಿರಾಶ್ರಿತರಿಗೆ, ನಿರ್ಗತಿಕರಿಗೆ, ಬಿಕ್ಷುಕರಿಗೆ ಆಹಾರ ಒದಗಿಸುವ ಕಾರ್ಯವನ್ನು ಜಿಲ್ಲಾಡಳಿತವು ಮಹಾನಗರ ಪಾಲಿಕೆ ವಿಜಯಪುರ ಇವರಿಗೆ ವಹಿಸಿದೆ.
ಸಾರ್ವಜನಿಕರು ಯಾವುದೇ ಪರವಾನಿಗೆ ಪಡೆಯದೆ ಆಹಾರ ಹಂಚಿ ಜನದಟ್ಟಣೆ ಮಾಡುತ್ತಿರುವುದು ಕಂಡು ಬಂದಿದ್ದು, ಈ ರೀತಿ ಹಂಚಿಕೆಯಿಂದ ಕೋವಿಡ್-19 ಸಾಂಕ್ರಾಮಿಕ ರೋಗವನ್ನು ನಿಯಂತ್ರಿಸಲು ತೊಂದರೆಯಾಗಲಿದೆ. ಆದ್ದರಿಂದ ಸಾರ್ವಜನಿಕರು ಜಿಲ್ಲಾಡಳಿತದ ಪರವಾನಿಗೆ ಪಡೆಯದೇ ಆಹಾರವನ್ನು ಹಂಚಬಾರದು ಅದನ್ನು ಮಹಾನಗರ ಪಾಲಿಕೆ ವಿಜಯಪುರಗೆ ವಹಿಸಿಕೊಡಬೇಕು ಇದಕ್ಕೆ ತಪ್ಪಿದಲ್ಲಿ ಐಪಿಸಿ ನಿಯಮದನ್ವಯ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಕಾನೂನು ರಿತ್ಯ ಕ್ರಮ ಕೈಗೊಳ್ಳಲಾಗುದು ಎಂದು ಮಹಾನಗರ ಪಾಲಿಕೆ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here