ಬದುಕಿನಲ್ಲಿ ಮನುಷ್ಯ ಹುಡುಕುವುದೇನು?

0
186

ಈ ಸೃಷ್ಠಿಯಲ್ಲಿ ಮನುಷ್ಯನ ಉಗಮ ಎಂದಾಯಿತೊ, ಅಂದಿನಿಂದ ಮನುಷ್ಯ ಏನನ್ನೋ ಹುಡುಕುತಲಿದ್ದಾನೆ. ಅದು ಅವನಿಗೆ ಇನ್ನೂ ಸಿಕ್ಕಿಲ್ಲ. ಮನುಷ್ಯ ಬದುಕಿನಲ್ಲಿ ಹುಡುಕುವುದೇ ಬಹಳ ಯಾಕೆಂದರೆ, ಅವನು ಕಳೆದುಕೊಂಡದ್ದು ಬಹಳ. ನಾವು ಜೀವನದಲ್ಲಿ ಏನೇ ಕಳೆದುಕೊಂಡರೂ ಅದು ಮರಳಿ ಸಿಗುವಂತಿರಬೇಕು. ಎಷ್ಟೋ ಜನ ಸುಂದರ ಹೆಂಡತಿಗಾಗಿ ಶೋಧಿಸುತ್ತಾರೆ. ಎಷ್ಟೋ ಜನ ಹಣಕ್ಕಾಗಿ ಶೋಧಿಸುತ್ತಾರೆ. ಎಷ್ಟೋ ಜನ ಕಿರ್ತಿಗಾಗಿ ಶೋಧಿಸುತ್ತಾರೆ. ಎಷ್ಟೋ ಜನ ಅಧೀಕಾರಕ್ಕಾಗಿ ಶೋಧಿಸುತ್ತಾರೆ, ಎಷ್ಟೋ ಜನ ಪ್ರೀತಿಗಾಗಿ ಶೋಧಿಸುತ್ತಾರೆ. ಹೀಗೆ ಮನುಷ್ಯನ ಶೋಧಗಳ ಪಟ್ಟಿ ಮಾಡುತ್ತಾ ಹೋದರೆ, ಅದಕ್ಕೆ ಕೊನೆಯಿಲ್ಲ.

ಬಹಳ ಸತ್ಯವಾದ ಮಾತು ಹೇಳಬೇಕಾದರೆ, ನಾವು ಏನೆ ಕಳೆದುಕೊಂಡರೂ ಸಹ ಕ್ಷಣಿಕ ಕಳೆದುಕೊಳ್ಳುತ್ತೇವೆ. ಹಾಗೆ ನಾವು ಏನೇ ಪಡೆದುಕೊಂಡರೂ ಸಹ ಕ್ಷಣಿಕ ಪಡೆದುಕೊಳ್ಳುತ್ತೇವೆ. ಹಾಗೆ ನಾವು ಏನೇ ಹೂಡುಕಿದರೂ ಕ್ಷಣಿಕ ಮಾತ್ರ ಹುಡುಕುತ್ತೇವೆ. ಯಾಕೆಂದರೆ ಶಾಶ್ವತವಾಗಿದ್ದದ್ದು ನಮಗೆ ಸಿಗುವುದೇ ಇಲ್ಲ. ಜೀವನದಲ್ಲಿ ನಾವು ಏನು ಬಯಸುತ್ತೇವೆ? ಯಾವುದು ಸಿಗುತ್ತದೆಯೋ ಅದನ್ನೆ ಬಯಸುತ್ತೇವೆ. ಬಯಸಿದ್ದು ಸಿಗಬಾರದು. ಅದು ಸಿಕ್ಕಂತಾಗಬೇಕು. ಆದರೂ ಸಿಗಬಾರದು. ಅದು ಸಿಗುವರೆಗೆ ನಾವು ಬಯಸಿದ್ದು ಬಿಡಬಾರದು. ಹೀಗಾದಾಗ ಜೀವನದಲ್ಲಿ ಏನೋ ಒಂದು ಅದ್ಬುತವಾದ ಕೂತುಹಲ ಉಳಿಯಲು ಸಾಧ್ಯವಿದೆ. ಮನುಷ್ಯ ತನ್ನ ಜೀವನದಲ್ಲಿ ಎಲ್ಲಿಯವರೆಗೆ ಕೂತುಹಲ ಕಾಯ್ದುಕೊಳ್ಳುತ್ತಾನೆಯೋ, ಅಲ್ಲಿಯವರೆಗೆ ಅವನ ಜೀವನದಲ್ಲಿ ಜಿಗುಪ್ಸೆ ಸುಳಿಯಬಾರದು.

ಯಾವನ ಜೀವನದಲ್ಲಿ ಜಿಗುಪ್ಸೆಯ ಭಾವನೆ ಮೂಡುತ್ತದೆಯೋ ಅವನು ಬಹಳ ಕಾಲ ಬದುಕಲು ಸಾಧ್ಯವಿಲ್ಲ. ನಾವು ಜೀವನದಲ್ಲಿ ಏನೆ ಹುಡುಕುವ ಮೊದಲು ಒಂದು ಸಲ ಆಳವಾಗಿ ಯೋಚಿಸಬೇಕು. ನಾನು ಕಳೆದುಕೊಂಡಿರುವುದಾದರೂ ಏನೂ?ಅದು ಮರಳಿ ಸಿಗಬಹುದೇ? ಸಿಕ್ಕರೆ ಅದನ್ನು ಎಷ್ಟು ದಿನಗಳವರೆಗೆ ಕಾಪಾಡಿಕೊಳ್ಳಬಲ್ಲೆ? ನಾನು ಈಗ ಅದನ್ನು ಏತಕ್ಕಾಗಿ ಹುಡುಕುತ್ತಿರುವೆ? ಅದು ಸಿಗದಿದ್ದರೆ ನನ್ನ ಜೀವನವೇ ಬರಡಾಗಿ ಹೋಗುವುದೇ? ಹೀಗೆ ಹಲವಾರು ಪ್ರಶ್ನೆಗಳನ್ನು ಹಾಕಿಕೊಂಡಾಗ ಅದಕ್ಕೆ ಹತ್ತಿರವಾದ ಸ್ವಲ್ಪ ಪರಿಹಾರ ದೊರೆಯಬಹುದು. ಈ ಪ್ರಪಂಚದಲ್ಲಿ ಯಾವುದಕ್ಕೂ ಶಾಶ್ವತವಾದ ಪರಿಹಾರವಿಲ್ಲ. ಈ ಸತ್ಯವನ್ನು ಅರಿತಾಗ ಮನುಷ್ಯ ತನ್ನ ಬದುಕಿನಲ್ಲಿ ಯಾವುದನ್ನು ಹುಡುಕುತ್ತಾನೆಯೋ ಅದರಿಂದ, ಕಳೆದು ಹೊದದ್ದು ಸಿಕ್ಕಂತಾಗಬಹುದು. ಮನುಷ್ಯ ಬದುಕನ್ನು ಹುಡುಕುವುದನ್ನು ಬಿಟ್ಟರೆ ಅವನು ಬದುಕಿನಲ್ಲಿ ಏನನ್ನು ಕಳೆದುಕೊಳ್ಳಲು ಸಾಧ್ಯವಿಲ್ಲ.
ಎಸ್.ಪಿ.ಯಂಭತ್ನಾಳ,ಸಾಹಿತಿ

LEAVE A REPLY

Please enter your comment!
Please enter your name here