
ವಿಜಯಪುರ: 2025-26 ನೆಯ ಶೈಕ್ಷಣಿಕ ಸಾಲಿನ ನವೋದಯ ವಸತಿ ಶಾಲೆಯ ಪ್ರವೇಶ ಪೂರ್ವ ಪರೀಕ್ಷೆಯಲ್ಲಿ ನಗರದ ಕನಕದಾಸ ಬಡಾವಣೆಯಲ್ಲಿರುವ ಶ್ರೀ ಸಿದ್ದೇಶ್ವರ ಕೋಚಿಂಗ್ ಕ್ಲಾಸಿಸ್ ನ ಮಕ್ಕಳು ಅಮೋಘ ಸಾಧನೆಗಳಿಸಿದ್ದಾರೆ. ಪರೀಕ್ಷೆಗೆ ಕುಳಿತ 27 ಮಕ್ಕಳಲ್ಲಿ 6 ಮಕ್ಕಳು ಆಯ್ಕೆಯಾಗುವುದರ ಮೂಲಕ ದಾಖಲೆಯನ್ನು ನಿರ್ಮಿಸಿದ್ದಾರೆ.
ಶಾರಿಕಾ ಖಾಜಿ (ಶೇ 95),ಮಲ್ಲಿಕಾರ್ಜುನ ಖಾನಾಪುರ ( ಶೇ 92.50),ಆಶ್ವಿಕ ಜಮಖಂಡಿ (ಶೇ 92.50),ರವಿ ನಾಯಕ ( ಶೇ 90),ಅಭಿನವ ಅರಕೇರಿ( ಶೇ 90),ಬಸನಗೌಡ ಬಿರಾದಾರ, ತೊನಶ್ಯಾಳ (ಶೇ88.75) ಅಂಕಗಳನ್ನು ಪಡೆದುಕೊಂಡು ಸಂಸ್ಥೆಯ ಕೀರ್ತಿಯನ್ನು ಹೆಚ್ಚಿಸಿದ್ದಾರೆ.
ದಿನಕ್ಕೊಂದು ಆವಿಷ್ಕಾರಗಳ ಮೂಲಕ ಪ್ರಗತಿಪಥದತ್ತ ಮುನ್ನುಗ್ಗುತ್ತಿರುವ ಇಂದಿನ ಪ್ರಪಂಚದಲ್ಲಿ ಪ್ರತಿಯೊಬ್ಬ ಮಗು ತನ್ನನ್ನು ತಾನು ಸ್ಪರ್ಧಾ ಕಣಕ್ಕೆ ಅಣಿಗೊಳಿಸಿಕೊಳ್ಳುವುದು ಅನಿವಾರ್ಯವಾಗಿದೆ, ಅದಕ್ಕಾಗಿ ಪಾಲಕರ ಸಹಕಾರ, ಶಿಕ್ಷಕರ ಮಾರ್ಗದರ್ಶನ, ಸಂಸ್ಕಾರ, ಹಾಗೂ ವಿದ್ಯಾರ್ಥಿಸ್ನೇಹಿ ಶಿಕ್ಷಣ ಸಂಸ್ಥೆಗಳ ಪಾತ್ರ ಅನನ್ಯವಾಗಿದೆ ಎಂದು ಮಕ್ಕಳ ಸಾಧನೆಯನ್ನು ಕೊಂಡಾಡಿದ ಸಂಸ್ಥಾಪಕ ಅಧ್ಯಕ್ಷ ಸುರೇಶ್ ಜತ್ತಿ ಮಾತನಾಡುತ್ತಾ ಸಂಸ್ಥೆಗೆ ಪ್ರಾರಂಭವಾದ ಅತ್ಯಂತ ಕಡಿಮೆ ಅವಧಿಯಲ್ಲಿ ಸಂಸ್ಥಾಪಕರ ಸಮರ್ಥ ಮಾರ್ಗದರ್ಶನ, ಶಿಕ್ಷಕರ ಅತ್ಯುತ್ತಮ ಪಾಠ ಬೋಧನೆ, ಮಕ್ಕಳ ಹಗಲಿರುಳು ಅಭ್ಯಾಸದ ಫಲವಾಗಿ ಜ್ಞಾನ ದಾಸೋಹ ನೀಡುತ್ತ ನಾಡಿನೆಲ್ಲೆಡೆ ಮನೆ ಮಾತಾಗಿರುವುದು ಹೆಮ್ಮೆ ತಂದಿದೆ ಎಂದರು.
ಮಕ್ಕಳ ಸಾಧನೆಗೆ ಪ್ರಧಾನ ಕಾರ್ಯದರ್ಶಿ ನೀಲಾ ಜತ್ತಿ, ಆಡಳಿತಾಧಿಕಾರಿ ಮಧು ಬಿರಾದಾರ, ಸೌಮ್ಯ ಗಲಗಲಿ, ಪೃಥ್ವಿ ಎಂ,ರಾಘವೇಂದ್ರ ರಾಠೋಡ, ಅನಿತಾ ರಾಠೋಡ ಸೇರಿದಂತೆ ಸಿಬ್ಬಂದಿ ವರ್ಗದವರು ಹರ್ಷ ವ್ಯಕ್ತಪಡಿಸಿದ್ದಾರೆ.

