ನೂತನ ಕೇಂದ್ರ ಕಾರಾಗೃಹಕ್ಕೆ ಜಿಲ್ಲಾಧಿಕಾರಿ ಟಿ.ಭೂಬಾಲನ್ ಭೇಟಿ

ಡಿಸಿ ಟಿ.ಭೂಬಾಲನ್

ವಿಜಯಪುರ ಡಿ.02: ವಿಜಯಪುರದ ಅರಕೇರಿ ಗ್ರಾಮದ ಹತ್ತಿರ ನಿರ್ಮಾಣವಾಗುತ್ತಿರುವ ನೂತನ ಕೇಂದ್ರ ಕಾರಾಗೃಹದ ಕಾಮಗಾರಿ ಸ್ಥಳಕ್ಕೆ ಭೇಟಿ ಶುಕ್ರವಾರ ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ನೂತನ ಕೇಂದ್ರ ಕಾರಾಗೃಹಕ್ಕೆ ಭೂತನಾಳ ಕೆರೆಯಿಂದ ನೀರಿನ ಸೌಲಭ್ಯವನ್ನು ಒದಗಿಸುವ 650.00 ಲಕ್ಷಗಳ ಅಂದಾಜು ವೆಚ್ಚದ ಪ್ರಸ್ತಾವನೆ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡ ಅವರು, ನೂತನ ಕೇಂದ್ರ ಕಾರಾಗೃಹದ ಕಾಮಗಾರಿಗಳ ಎಲ್ಲ ವಿಭಾಗಗಳ ವೀಕ್ಷಣೆ ನಡೆಸಿ, ಕಾರಾಗೃಹದ ಹೊರವೃತ್ತದ ಸುತ್ತುವರಿಗೆ ತೆರಳಿ ಭದ್ರತಾ ಗೋಡೆಯನ್ನು ವೀಕ್ಷಿಸಿದರು. ಈ ಸಂದರ್ಭದಲ್ಲಿ ಕಾರಾಗೃಹ ಇಲಾಖೆಯ ಅಧಿಕಾರಿಗಳು ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು, ಅಭಿಯಂತರರು ಉಪಸ್ಥಿತರಿದ್ದರು.


ಇದನ್ನೂ ಓದಿ:ಪೌರಕಾರ್ಮಿಕರಿಗೆ ಗೌರವ ನೀಡುವುದು ಪ್ರತಿ ನಾಗರಿಕನ ಕರ್ತವ್ಯ:ವಿಜಯಕುಮಾರ ಆಜೂರ

Share the Post:

ಇತ್ತೀಚಿನ ಸುದ್ದಿಗಳು