Vijayapura News : ಕಸಾಪದಲ್ಲಿ ಡಾ. ಬಿ.ಆರ್ ಅಂಬೇಡ್ಕರ್ ಕುರಿತು ಚಿಂತನಾ ಗೋಷ್ಠಿ | ಭಾರತ ದೇಶದ ಹಣೆಬರಹ ಬರೆದ ಡಾ. ಬಿ.ಆರ್.ಅಂಬೇಡ್ಕರ್ – ಮಹೇಶ್ ಕ್ಯಾತನ್ ಅಭಿಪ್ರಾಯ

"ಡಾ.ಬಿ.ಆರ್ ಅಂಬೇಡ್ಕರ್ ರವರ ಜೀವನ ಮತ್ತು ಬದುಕು ಬರಹಗಳ" ಕುರಿತು ಉಪನ್ಯಾಸ ನೀಡಿದ ಡಾ.ಶೈಲಾ ಬಳಗಾನೂರ

0
82
ಅಂಬೇಡ್ಕರ್‌ ಚಿಂತನಾ ಗೋಷ್ಠಿ image

ವಿಜಯಪುರ : ಮಹಾನ್ ಮಾನವತಾವಾದಿ, ಸಮಾನತೆಯ ಹರಿಕಾರ, ಭಾರತದ ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್ ರವರು ದೇಶದ ಹಣೆಬರಹ ಬರೆದು ಭಾರತವನ್ನು ಹೊಸ ದಿಕ್ಕಿನತ್ತ ಕೊಂಡೊಯ್ಯುವ ಮೂಲಕ ಸಮಾನತೆ ಮತ್ತು ಮಾನವ ಹಕ್ಕುಗಳಿಗಾಗಿ ಹೋರಾಡಿದ ಧೀಮಂತ ವ್ಯಕ್ತಿಗಳಾಗಿದ್ದರು ಎಂದು ಅಂಬೇಡ್ಕರ್‌ ಚಿಂತನಾ ಗೋಷ್ಠಿ ಯಲ್ಲಿ ವಿಶ್ರಾಂತ ಅರಣ್ಯಾಧಿಕಾರಿ ಮಹೇಶ ಕ್ಯಾತನ್ ಅಭಿಪ್ರಾಯಪಟ್ಟರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಜರುಗಿದ ಡಾ. ಬಿ.ಆರ್ ಅಂಬೇಡ್ಕರ್ ಚಿಂತನಾಗೋಷ್ಠಿಯಲ್ಲಿ ಭಾವಚಿತ್ರಕ್ಕೆ ಪುಷ್ಪಾರ್ಚಣೆ ಮಾಡುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಸಾಮಾಜಿಕ ನ್ಯಾಯಕ್ಕಾಗಿ ನಿರಂತರ ಹೋರಾಟ ನಡೆಸಿದ ಡಾ. ಬಿ.ಆರ್. ಅಂಬೇಡ್ಕರರು ಹಾಕಿಕೊಟ್ಟ ಸ್ವಾತಂತ್ರ್ಯ, ಸಮಾನತೆ ಹಾಗೂ ಭ್ರಾತೃತ್ವದ ಅಂಶಗಳನ್ನು ನಾವೆಲ್ಲ ಜೀವನದಲ್ಲಿ ಅಳವಡಿಸಿಕೊಂಡು ಅವರ ಚಿಂತನೆಗಳನ್ನು ಸಾಕಾರಗೊಳಿಸೋಣ ಎಂದರು.

ಇದನ್ನೂ ಓದಿ: ಡಾ. ಅಂಬೇಡ್ಕರ್‌ರವರನ್ನು ಭಾರತೀಯ ಮಹಿಳೆಯರು ಮರೆತಿರುವರೇ?

ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ಜಿಲ್ಲಾ ಕಸಾಪ ಗೌರವ ಕೋಶಾಧ್ಯಕ್ಷ ಡಾ ಸಂಗಮೇಶ ಮೇತ್ರಿ ಮಾತನಾಡಿ ಎಲ್ಲರೂ ಸಮಾನವಾಗಿ ನಿಲ್ಲುವಂತಹ ರಾಷ್ಟ್ರವನ್ನು ನಿರ್ಮಾಣ ಮಾಡುವ ಕನಸು ಕಂಡವರು ಅಂಬೇಡ್ಕರರು ಅವರ ಕನಸನ್ನು ನಾವೆಲ್ಲ ನನಸಾಗಿಸಿ ಎಲ್ಲರ ಏಕತೆ ಮತ್ತು ಘನತೆಗಾಗಿ ಶ್ರಮಿಸಿದ ಮಹಾನ್ ಹೋರಾಟಗಾರರಾಗಿದ್ದ ಡಾ. ಬಿ.ಆರ್. ಅಂಬೇಡ್ಕರ್ ಅವರ ಚಿಂತನೆಗಳು ನಮಗೆಲ್ಲ ಸ್ಪೂರ್ತಿ ಎಂದರು.

ಅಂಬೇಡ್ಕರ್‌ ಚಿಂತನಾ ಗೋಷ್ಠಿ ಯಲ್ಲಿ “ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ಮಹಿಳೆ” ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದ ಬೆಂಗಳೂರಿನ ಬಂಜಾರಾ ಅಕಾಡೆಮಿಯ ಸದಸ್ಯೆ ಸುರೇಖಾ ರಾಠೋಡ ಮಾತನಾಡಿ ಮಹಿಳೆಯರು ಸಾಮಾಜಿಕವಾಗಿ ಸಬಲಗೊಳ್ಳಬೇಕು, ಹೆಣ್ಣು ಆರ್ಥಿಕವಾಗಿ ಸ್ವತಂತ್ರಳಾಗಿರಬೇಕು. ಮಹಿಳೆಯರ ಮೇಲೆ ಮದುವೆ ಎಂಬ ಬಂಧವನ್ನು ಒತ್ತಾಯವಾಗಿ ಹೇರಬಾರದು ಎನ್ನುತ್ತ ತನ್ನ ಜೀವನ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವ ಹಕ್ಕು ಪ್ರತಿಯೊಬ್ಬ ಮಹಿಳೆಗೂ ಸಹ ನೀಡಬೇಕು ಅವಳು ಗಂಡನ ಗುಲಾಮಳಾಗಬಾರದು ಅವಳಿಗೂ ಸಹ ತನ್ನದೇಯಾದ ಸ್ವಾತಂತ್ರ್ಯ ನೀಡುವ ಮೂಲಕ ಅವಳಿಗೆ ಗೌರವ ನೀಡುವ ಭಾವನೆಯನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಕರೆ ನೀಡಿದರು.

ಇದನ್ನೂ ಓದಿ: ಬಸನಗೌಡ ಪಾಟೀಲ ಯತ್ನಾಳ ಹಿಂದೂ ವಿರೋಧಿಯೋ ಮುಸ್ಲಿಂ ವಿರೋಧಿಯೋ ?

“ಡಾ.ಬಿ.ಆರ್ ಅಂಬೇಡ್ಕರ್ ರವರ ಜೀವನ ಮತ್ತು ಬದುಕು ಬರಹಗಳ” ಕುರಿತು ಉಪನ್ಯಾಸ ನೀಡಿದ ಡಾ.ಶೈಲಾ ಬಳಗಾನೂರ ಮಾತನಾಡುತ್ತ, ತಮ್ಮ ಇಡೀ ಜೀವನದಲ್ಲಿ ತಾವು ಕಂಡುಂಡಿರುವ ನೋವುಗಳು ನನ್ನ ಮುಂದಿನ ಪೀಳಿಗೆ ಅನುಭವಿಸಬಾರದು ಎಂಬುದನ್ನು ಹಲವಾರು ಕಾನೂನು ಮತ್ತು ಹಕ್ಕುಗಳ ಮೂಲಕ ಪರಿಹರಿಸಿ, ಶಿಕ್ಷಣ, ಸಂಘಟನೆ ಮತ್ತು ಹೋರಾಟಗಳ ಮೂಲಕ ಇದಕ್ಕೆಲ್ಲ ಪರಿಹಾರ ಕಂಡುಕೊಂಡ ಮಹಾನ್ ಮೇಧಾವಿ ಡಾ. ಬಿ.ಆರ್. ಅಂಬೇಡ್ಕರ್ ಎಂದರು.

ಕಾರ್ಯಕ್ರಮದ ವೇದಿಕೆಯಲ್ಲಿ ಸಿದ್ದು ಮೇಲಿನಮನಿ, ಶಿಕ್ಷಕರಾದ ಎಸ್.ಜಿ. ಲಕ್ಕುಂಡಿಮಠ, ಕವಯಿತ್ರಿಯರಾದ ಮಮತಾ ಮುಳಸಾವಳಗಿ, ಶೋಭಾ ಹರಿಜನ ಉಪಸ್ಥಿತರಿದ್ದು ಕವನ ವಾಚನ ಮಾಡುತ್ತ ಮಾತನಾಡಿದರು.
ಶಿಲ್ಪಾ ಭಸ್ಮೆ ಸ್ವಾಗತಿಸಿ ಗೌರವಿಸಿದರು. ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಡಾ ಮಾಧವ ಗುಡಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಪರವೀನ ಶೇಖ ನಿರೂಪಿಸಿದರು. ರೂಪಾ ರಜಪೂತ ವಂದಿಸಿದರು.

ಇದನ್ನೂ ಓದಿ: Vijayapura News : ಕೂಡಲೇ ಬ್ಯಾಕಲಾಗ್ ಹುದ್ದೆಗಳು ಭರ್ತಿ ಮಾಡಬೇಕು : ಬಿ ಎಚ್ ನಾಡಗಿರಿ

ಕಾರ್ಯಕ್ರಮದಲ್ಲಿ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲೀಕಾರ, ಡಾ. ವ್ಹಿ.ಡಿ.ಐಹೊಳ್ಳಿ, ಡಾ. ಸಿದ್ದಣ್ಣ ಉತ್ನಾಳ, ಬಿ.ಎಂ.ಅಜೂರ, ಕೆ.ಎಚ್ ಹಣಮಾಣಿ, ಶಾಂತಾ ವಿಭೂತಿ, ರಾಜೇಸಾಬ ಶಿವನಗುತ್ತಿ, ಶ್ರೀಕಾಂತ ಚಿಮ್ಮಲಗಿ, ಜಿ.ಎಸ್ ಬಳ್ಳೂರ, ಶಾರದಾ ಐಹೊಳ್ಳಿ, ಎ.ಡಿ. ಮುಲ್ಲಾ, ಸಿದ್ರಾಮಪ್ಪ ಜಂಗಮಶೆಟ್ಟಿ, ಶಂಕರ ಪವಾರ, ಎಸ್.ಎಸ್. ಮಾನೆ, ಅಮೋಘಸಿದ್ಧ ಪೂಜಾರಿ, ತೇಜಸ್ವಿನಿ ವಾಂಗಿ, ಫಕ್ರುದ್ದೀನ್ ಅಲಿಅಹ್ಮದ್ ಹಿರೇಕೊಪ್ಪ, ರಶ್ಮಿ ಬದ್ನೂರ, ಸಕ್ಕುಬಾಯಿ ಬ್ಯಾಳಿ, ನಾಮದೇವ ಕಾಳೆ, ರಾಹುಲ ಚವ್ಹಾಣ, ಗಂಗಮ್ಮ ರಡ್ಡಿ, ಸಿಮ್ರನ್ ವಾಲೀಕಾರ, ಯಾಶೀನ ಶೇಖ, ಬಿ.ಎಸ್ ದೊಡಮನಿ, ಕೆ.ಕೆ ಬನ್ನೆಟ್ಟಿ, ಲತಾ ವಾಲೀಕಾರ, ಸಹನಾ ಬಿರಾದಾರ, ಸನ್ನಿಧಿ ಬಿರಾದಾರ, ಹಾಗೂ ಲಕ್ಷ್ಮೀ ಬಿರಾದಾರ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.


LEAVE A REPLY

Please enter your comment!
Please enter your name here