Bagalkote News | ಅಂತರ ಮಹಾವಿದ್ಯಾಲಯಗಳ 18ನೇ ಅಥ್ಲೇಟಿಕ್ಸ್ ಕ್ರೀಡಾಕೂಟ | ಕ್ರೀಡಾಕೂಟದಲಿ ಲಕ್ಷ್ಮೀ ಕಮತಗಿ, ಸುಶ್ಮೀತಾ ಬಡಿಗೇರ ನೂತನ ದಾಖಲೆ

ನಗರದ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಅಂತರ ಮಹಾವಿದ್ಯಾಲಯಗಳ ಅಥ್ಲೇಟಿಕ್ಸ್ ಕ್ರೀಡಾಕೂಟದಲ್ಲಿ ಜೊತೆಗೆ ಚಿನ್ನದ ಪದಕ ಪಡೆದುಕೋಂಡು ವಿಶ್ವವಿದ್ಯಾಲಯಕ್ಕೆ ನೂತನ ದಾಖಲೆ ಮಾಡಿದೆ.

0
23
18ನೇ ಅಥ್ಲೇಟಿಕ್ಸ್ ಕ್ರೀಡಾಕೂಟ image
200 ಹಾಗೂ 400 ಮೀಟರ್ ಓಟದಲ್ಲಿ ಪ್ರಥಮ ಸ್ಥಾನಗಳಿಸಿ ಚಿನ್ನದ ಪದಕ ಗಳಿಸಿದ ಲಕ್ಷ್ಮೀ ಕಮತಗಿ ಇವಳಿಗೆ ಕುಲಪತಿಗಳಾದ ಡಾ.ತುಳಸಿಮಾಲಾ ಅವರು ಪ್ರಶಸ್ತಿ ಪ್ರಧಾನ ಮಾಡಿ ಅಭಿನಂದಿಸಿದರು.

ಬಾಗಲಕೋಟೆ: 18ನೇ ಅಥ್ಲೇಟಿಕ್ಸ್ ಕ್ರೀಡಾಕೂಟ, ನಗರದ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಅಂತರ ಮಹಾವಿದ್ಯಾಲಯಗಳ ಅಥ್ಲೇಟಿಕ್ಸ್ ಕ್ರೀಡಾಕೂಟದಲ್ಲಿ ಜೊತೆಗೆ ಚಿನ್ನದ ಪದಕ ಪಡೆದುಕೋಂಡು ವಿಶ್ವವಿದ್ಯಾಲಯಕ್ಕೆ ನೂತನ ದಾಖಲೆ ಮಾಡಿದೆ.

ಇದನ್ನೂ ಓದಿ: Vijayapura news | ಕ್ರೀಡೆಯಲ್ಲಿ ಸಾಧನೆ ಮಾಡುವುದಕ್ಕೆ ಕಠಿಣ ಪರಿಶ್ರಮ ಹಾಗೂ ನಿಷ್ಠೆ ಅಗತ್ಯವಿದೆ | ಶರಣಬಸಪ್ಪ ಅರಕೇರಿ

18ನೇ ಅಥ್ಲೇಟಿಕ್ಸ್ ಕ್ರೀಡಾಕೂಟ ವಿಜಯಪುರದಲ್ಲಿ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಅಂತರ ಮಹಾವಿದ್ಯಾಲಯಗಳ 2024-25 ನೇ ಸಾಲೀನ 18ನೇ ಅಥ್ಲೇಟಿಕ್ಸ್ ಕ್ರೀಡಾಕೂಟ ದಿನಾಂಕ 20ರಿಂದ 22 ವರೆಗೆ ಹಮ್ಮಿಕೊಳ್ಳಲಾಗಿತ್ತು. ಈ ಕ್ರೀಡಾಕೂಟದಲ್ಲಿ ವಿದ್ಯಾರ್ಥಿನಿ ಲಕ್ಷ್ಮೀ ಕಮತಗಿ 200 ಹಾಗೂ 400 ಮೀಟರ್ ಓಟದಲ್ಲಿ ಪ್ರಥಮ ಸ್ಥಾನಗಳಿಸಿ ಚಿನ್ನದ ಪದಕ ಮುಡಿಗೇರಿಸಿಕೊಂಡು ದಾಖಲೆ ಮಾಡಿದ್ದಾಳೆ, ಜೋತಗೆ 20ಕಿ.ಮೀ ನಡೆಗೆಯಲ್ಲಿ ವಿದ್ಯಾರ್ಥಿನಿ ಸುಶ್ಮೀತಾ ಬಡಿಗೇರ ದ್ವಿತೀಯ ಸ್ಥಾನಗಳಿಸಿ ನೂತನ ದಾಖಲೆ ನಿರ್ಮಿಸುವ ಮೂಲಕ ಸರಕಾರಿ ಪ್ರಥಮ ದರ್ಜೆ ಕಾಲೇಜಿಗೆ ಕೀರ್ತಿ ತಂದಿದ್ದಾರೆ.

ಇದನ್ನೂ ಓದಿ: Vijayapura News | ಆಧುನಿಕ ಕನ್ನಡ ರಂಗಭೂಮಿ ‘ಪಿತಾಮಹ’ ಶಾಂತಕವಿ ಸಕ್ಕರಿ ಬಾಳಾಚಾರ್ಯರು

ಈ ಕ್ರೀಡಾಪಟುಗಳಿಗೆ ಹಾಗೂ ತರಬೇತಿ ನೀಡಿದ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ಸುನೀಲ ನಡಕಟ್ಟಿ ಅವರುಗಳಿಗೆ ಕಾಲೇಜು ಅಭಿವೃದ್ಧಿ ಸಮಿತಿಯ ಅಧ್ಯಕ್ಷರು ಹಾಗೂ ಶಾಸಕರಾದ ಎಚ್.ವಾಯ್.ಮೇಟಿ ಹಾಗೂ ಕಾಲೇಜಿನ ಪ್ರಾಂಶುಪಾಲರಾದ ಡಾ. ಎಸ್.ಎನ್.ಪಟ್ಟಣಶೆಟ್ಟಿ, ಹಾಗೂ ಸರ್ವ ಸಿಬ್ಬಂದಿ ವರ್ಗ ಈ ವಿದ್ಯಾರ್ಥಿಗಳಿಗೆ ಅಭಿನಂಧನೆಗಳನ್ನು ಸಲ್ಲಿಸಿದ್ದಾರೆ.


LEAVE A REPLY

Please enter your comment!
Please enter your name here