ವಿಜಯಪುರ: ಕನ್ನಡ ರಾಜ್ಯೋತ್ಸವ 01, ನಾವು ನಮ್ಮ ನೆಲ, ಜಲ, ಗಡಿ, ಭಾಷೆಗಳನ್ನು ರಕ್ಷಿಸದಿದ್ದರೆ ನಮ್ಮತನವನ್ನು ಕಳೆದುಕೊಂಡು ನಿರಾಶ್ರಿತರಾಗುತ್ತೇವೆ. ಕನ್ನಡಿಗರೆಲ್ಲ ಒಂದಾಗಿ ಒಗ್ಗಟ್ಟಾಗಿ ನಾಡನ್ನು, ರೈತರನ್ನು, ಬಡವರನ್ನು ಉಳಿಸಿಕೊಳ್ಳಲು ಹೋರಾಟ ಮಾಡುವ ಕಾಲ ಬಂದಿದೆ ಎಂದು ಪ್ರೇಮಾನಂದ ಬಿರಾದಾರ ಹೇಳಿದರು.
ಇದನ್ನೂ ಓದಿ: Vijayapura News | ಅಭಿವೃದ್ಧಿಯಲ್ಲಿ ಭಾಷೆಯ ಪಾತ್ರ ತುಂಬಾ ಮಹತ್ವದ್ದಾಗಿದೆ | ಕುಲಪತಿ ಪ್ರೋ. ಬಿ.ಕೆ ತುಳಸಿಮಾಲ
ಕನ್ನಡ ರಾಜ್ಯೋತ್ಸವ 01, ಅವರು ಕೀರ್ತಿನಗರ ಉದ್ಯಾನದಲ್ಲಿ ಕನ್ನಡ ರಾಜ್ಯೋತ್ಸವದ ಧ್ವಜಾರೋಹಣ ಮಡಿ ಮಾತನಾಡಿದರು. ಸಮಾನ ಮನಸ್ಕರ ವೇದಿಕೆ ಅಧ್ಯಕ್ಷ ಜಂಬುನಾಥ ಕಂಚ್ಯಾಣಿ ಮಾತನಾಡಿ ಕನ್ನಡ ಭಾಷೆ ಸಂಸ್ಕøತಿ ಉಳಿಯಬೇಕಾದರೆ ನಮ್ಮ ಮಕ್ಕಳನ್ನು ಕನ್ನಡ ಮಾಧ್ಯಮದಲ್ಲಿ ಓದಿಸುವ ಛಲ ತೊಡಬೇಕು. ಒಂದು ರೀತಿಯಲ್ಲಿ ಕನ್ನಡ ಭಾಷೆ ಅವನತಿ ಹೊಂದಿದರೆ ಅದಕ್ಕೆ ಕನ್ನಡಿಗರೆ ಹೊಣೆಯಾಗಬೇಕಾಗುವುದೆಂದು ಹೇಳಿದರು.
ಇದನ್ನೂ ಓದಿ: Vijayapura News | ಕನ್ನಡ ಅಭಿಮಾನ ಬೆಳಿಸಿಕೊಳ್ಳೋಣ: ಭಾರತಿ ಪಾಟೀಲ
ಜಯದೇವ ಸೂರ್ಯವಂಶಿ ಸ್ವಾಗತಿಸಿದರು. ಎಂ.ಪಿ. ತಂಗಾ ವಂದಿಸಿದರು. ಎಸ್.ಟಿ. ಪಾಟೀಲ ಎಂ.ಕೆ. ಕಾರಜೋಳ, ಬಾಪುಗೌಡ ಬಿರಾದಾರ, ಚಂದ್ರಶೇಖರ ನಿಂಬಾಳ, ಅಶೋಕ ಬೆಳ್ಳುಬ್ಬಿ, ಅಶೋಕ ಹಿರೇಗೌಡರ, ಅರ್ಜುನ ಜಾಧವ ಮುಂತಾದವರು ಉಪಸ್ಥಿತರಿದ್ದರು.


















