ವಿಜಯಪುರ: ಸಂಗೀತ ವಿದ್ವಾನ್ ದಿ. ಶ್ರೀ ಶ್ರೀಮಂತ ಅವಟಿ ಅವರ ದ್ವಿತಿಯ ವರ್ಷದ ಪುಣ್ಯ ಸ್ಮರಣೆಯ ಅಂಗವಾಗಿ ರವಿವಾರ ದಿನಾಂಕ: 20-10-2024 ರಂದು ನಗರದ ಕಂದಗಲ್ ಶ್ರೀ ಹಣಮಂತ್ರಾಯ ರಂಗಮಂದಿರದಲ್ಲಿ “ವಿದ್ವಾನ್ ಶ್ರೀಮಂತ ಅವಟಿ ಯುವ ಸಂಗೀತ ಪುರಸ್ಕಾರ 2024 ಹಾಗೂ ಸುಗಮ ಸಂಗೀತ ಕಾರ್ಯಕ್ರಮ” ಜರುಗಿತು.
ಇದನ್ನೂ ಓದಿ: Vijayapura News | ರಾಷ್ಟ್ರಮಾತೆ ವೀರರಾಣಿ ಕಿತ್ತೂರು ರಾಣಿ ಚನ್ನಮಾಜಿಯವರ 249ನೇ ಜಯಂತ್ಯೋತ್ಸವ
ಈ ಸಂದರ್ಭದಲ್ಲಿ ಪರಮ ಪೂಜ್ಯರಾದ ಶ್ರೀ ಬಸವಲಿಂಗ ಮಹಾಸ್ವಾಮಿಗಳು ಜ್ಞಾನಯೋಗಾಶ್ರಮ ವಿಜಯಪುರ ಮತ್ತು ಪರಮ ಪೂಜ್ಯ ಶ್ರೀ ಶಿವಯೋಗಿಶ್ವರ ಸ್ವಾಮಿಜಿ, ಗುರುದೇವಾಶ್ರಮ ಕಾಖಂಡಕಿ ದಿವ್ಯ ಸಾನಿಧ್ಯವನ್ನು ವಹಿಸಿದ್ದರು. ಹಾಗೂ ಮುಖ್ಯ ಅತಿಥಿಗಳಾಗಿ ನಾಡಿನ ಹೆಸರಾಂತ ಸಂಗೀತ ಕಲಾವಿದರಾದ ಶ್ರೀ ಶಂಕರ ಶಾನುಭೋಗ ಬೆಂಗಳೂರು ಮತ್ತು ವಾಗ್ಮಿಗಳಾದ ಅಶೋಕ ಹಂಚಲಿ ರವರು ಇದ್ದರು.
ಇದನ್ನೂ ಓದಿ: Vijayapura News | ಗ್ರಂಥಗಳು ಜನಸಾಮಾನ್ಯರನ್ನು ತಲುಪಬೇಕು; ಕಾವ್ಯಶ್ರೀ ಎಸ್. ಸಾವಳಸಂಗ
ಈ ವೇಳೆ ಕಾರ್ಯಕ್ರಮದಲ್ಲಿ ಯುವ ಸಂಗೀತ ಪ್ರಶಸ್ತಿ ಪುರಸ್ಕೃತರಾದ ಕುಮಾರಿ: ದೀಪ್ತಿ ಭಟ್ ಬೆಂಗಳೂರು ಹಾಗೂ ಸಂಗಮೇಶ ಪೂಜಾರಿ, ಯುವರಾಜ ಮಾದನಶೆಟ್ಟಿ. ಸಂಗೀತ ಕಲಾವಿದರಾದ ಡಾ. ಹರೀಶ ಹೆಗಡೆ, ವೀರೇಶ ವಾಲಿ, ಸೌಮ್ಯ ಪತ್ತಾರ, ಶ್ರೀಕಾಂತ ಕ್ವಾಟಿ, ಗಣೇಶ ಬಾಗವತ್ ಹಾಗೂ ಎಲ್ಲಾ ಸಂಗೀತ ಕಲಾವಿದರು ಮತ್ತು ಆಸಕ್ತರು ಹಾಗೂ ಪ್ರತಿಷ್ಠಾನದ ಅಧ್ಯಕ್ಷರಾದ ಶ್ರೀ ಶಂಕರ ಅವಟಿ, ಕಾರ್ಯದರ್ಶಿಗಳಾದ ಶ್ರೀಮತಿ ರಶ್ಮೀ ಶ್ರೀಮಂತ ಅವಟಿ, ಉಪಾಧ್ಯಕ್ಷರಾದ ಬಸವರಾಜ ಅವಟಿ ಮತ್ತು ಎಲ್ಲಾ ಸದಸ್ಯರುಗಳು, ಗುರುಹಿರಿಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು, ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.



















