ವಿಜಯಪುರ : ನಗರದ ಉಕ್ಕಲಿ ರಸ್ತೆಯಲ್ಲಿರುವ ಲೊಯೋಲ ಖಾಸಗಿ ಕೈಗಾರಿಕಾ ತರಬೇತಿ ಸಂಸ್ಥೆಯಿಂದ Loyola Industrial Training Institute ಗಾಂಧಿ ಜಯಂತಿಯ ನಿಮಿತ್ತ್ಯವಾಗಿ ಶಿವಗಿರಿಯಿಂದ ಸಿಂದಗಿ ಬೈಪಾಸ ವರೆಗೆ ಸ್ವಚ್ಛತಾ ಅಭಿಯಾನವನ್ನು ಕೈಗೊಳ್ಳಲಾಯಿತು.
ಪ್ರಾಚಾರ್ಯರಾದ ಫಾದರ. ಆಂಟೋನಿ ಲಾರೆನ್ಸರವರು ಸ್ವಚ್ಛತಾ ಪ್ರತಿಜ್ಞಾ ವಿಧಿಯನ್ನು ಭೋದಿಸಿ ವಿದ್ಯಾರ್ಥಿಗಳಲ್ಲಿ ಸ್ವಚ್ಛತೆ ಹಾಗೂ ಆರೋಗ್ಯಕರ ಪರಿಸರವನ್ನು ನಿರ್ಮಾಣ ಮಾಡುವಂತೆ ಎಲ್ಲಾ ವಿದ್ಯಾರ್ಥಿಗಳಲ್ಲಿ ಸ್ವಚ್ಛತಾ ಅರಿವನ್ನು ಮೂಡಿಸಿದರು.
Loyola Industrial Training Institute ಈ ಅಭಿಯಾನದಲ್ಲಿ ಎಲ್ಲಾ ಸಿಬ್ಬಂದಿಗಳು ವಿದ್ಯಾರ್ಥಿ ಪ್ರತಿನಿಧಿಗಳು ಮತ್ತು ಎಲ್ಲಾ ವಿದ್ಯಾರ್ಥಿಗಳು ಆಸ್ತಕಿಯಿಂದ ಪಾಲ್ಗೊಂಡು ಎಲ್ಲ ತ್ಯಾಜ್ಯಗಳನ್ನು ಸಂಗ್ರಹಿಸಿ ಮಹಾನಗರ ಪಾಲಿಕೆಯ ಪೌರ ಕಾರ್ಮಿಕರಿಗೆ ಸಲ್ಲಿಸಲಾಯಿತು.
ಇದನ್ನೂ ಓದಿ: ರಾಜೀನಾಮೆ ಕೊಡಲು ಸಾಧ್ಯವೇ? | ಸಿದ್ದರಾಮಯ್ಯ ಬೆಂಬಲಿಸಿದ ಜೆಡಿಎಸ್ ಹಿರಿಯ ಶಾಸಕರ ಪ್ರಶ್ನೆ…!



















