ಐಪಿಎಸ್ ಅಧಿಕಾರಿ ಚಂದ್ರಶೇಖರ ಅವಹೇಳನಕಾರಿ ಪದ ಬಳಕೆ ಖಂಡಿಸಿ ಅವರನ್ನು ಅಮಾನತುಗೊಳಿಸಲು ಆಗ್ರಹ

ಐಪಿಎಸ್ ಅಧಿಕಾರಿ ಚಂದ್ರಶೇಖರ ಅವರು ಅವಹೇಳನಕಾರಿ ಪದ ಬಳಕೆ ಖಂಡಿಸಿ ಅವರನ್ನು ಅಮಾನತುಗೊಳಿಸಲು ಆಗ್ರಹಿಸಿ ಜಿಲ್ಲಾಧಿಕಾರಿಗಳ ಮುಖಾಂತರ ಮಾನ್ಯ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.

0
55
IPS officer Chandrasekhara image

ವಿಜಯಪುರ: ಜಿಲ್ಲಾ ಜಾತ್ಯಾತೀತ ಜನತಾದಳ ವಿಜಯಪುರ ವತಿಯಿಂದ ಕೇಂದ್ರ ಸರಕಾರದ ಬೃಹತ್ ಕೈಗಾರಿಕಾ ಮತ್ತು ಉಕ್ಕು ಕಬ್ಬಿಣ ಸಚಿವರಾದ ಎಚ್.ಡಿ. ಕುಮಾರಸ್ವಾಮಿ ಅವರ ಬಗ್ಗೆ ಐಪಿಎಸ್ ಅಧಿಕಾರಿ ಚಂದ್ರಶೇಖರ IPS officer Chandrasekhara ಅವರು ಅವಹೇಳನಕಾರಿ ಪದ ಬಳಕೆ ಖಂಡಿಸಿ ಅವರನ್ನು ಅಮಾನತುಗೊಳಿಸಲು ಆಗ್ರಹಿಸಿ ಜಿಲ್ಲಾಧಿಕಾರಿಗಳ ಮುಖಾಂತರ ಮಾನ್ಯ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.

ಜಾತ್ಯಾತೀತ ಜನತಾದಳ ಜಿಲ್ಲಾಧ್ಯಕ್ಷರಾದ ಬಸನಗೌಡ ಎಸ್. ಮಾಡಗಿ ಮಾತನಾಡಿ ಕೇಂದ್ರ ಸರಕಾರದ ಬೃಹತ್ ಕೈಗಾರಿಕಾ ಮತ್ತು ಉಕ್ಕು ಕಬ್ಬಿಣ ಸಚಿವರಾದ ಎಚ್.ಡಿ. ಕುಮಾರಸ್ವಾಮಿ ಅವರ ಬಗ್ಗೆ ಐಪಿಎಸ್ ಅಧಿಕಾರಿ ಚಂದ್ರಶೇಖರ ಅವರು ಅವಹೇಳನಕಾರಿ ಪದ ಬಳಸಿರುವ ಐಪಿಎಸ್ ಅಧಿಕಾರಿ ಚಂದ್ರಶೇಖರ IPS officer Chandrasekhara ಅವರ ಹೇಳಿಕೆಯಿಂದ ಕರ್ನಾಟಕದ ಲಕ್ಷಾಂತರ ಎಚ್.ಡಿ. ಕುಮಾರಸ್ವಾಮಿ ಅವರ ಅಭಿಮಾನಿಗಳ ಮನಸ್ಸಿಗೆ ನೋವಾಗಿದ್ದು.

ಇದನ್ನೂ ಓದಿ: ಜಯಕರ್ನಾಟಕ ಸಂಘಟನೆ: ಅಕ್ರಮ ಗೃಹ ಬಳಕೆ ಸಿಲೆಂಡರ್ ಸರಬರಾಜು ದಂಧೆಗೆ ಕಡಿವಾಣ ಹಾಕಲು ಆಗ್ರಹ

ಅಷ್ಟೆ ಅಲ್ಲ ರಾಜ್ಯ ಎರಡು ಬಾರಿ ಮುಖ್ಯಮಂತ್ರಿಯಾದವರು ಕೇಂದ್ರ ಸಚಿವರ ಬಗ್ಗೆ ಇತರಹ ಮಾತನಾಡುವವರು ಸಾಮಾನ್ಯ ಜನರ ಹಿತ ಹೇಗೆ ಕಾಪಾಡುತ್ತಾರೆ ಕರ್ನಾಟಕ ಪೋಲಿಸರಿಗೆ ದೇಶದಲ್ಲೆ ಮಹತ್ವದ ಗೌರವ ಇದೆ ಅಂತಹ ಕರ್ನಾಟಕದ ಪೋಲಿಸ ಐಪಿಎಸ್ ಅಧಿಕಾರಿಯಾಗಿ ಚಂದ್ರಶೇಖರ ಅವರು ಈ ರೀತಿ ಭಾಷೆ ಬಳಸಿರುವುದು ನಿಜಕ್ಕೂ ಆಘಾತಕಾರಿ ಕೇಂದ್ರ ಸಚಿವರಾದ ಕುಮಾರಸ್ವಾಮಿ ರವರ ಬಗ್ಗೆ ಈ ರೀತಿ ಮಾತನಾಡಿರುವ ಚಂದ್ರಶೇಖರ ಅವರನ್ನು ಕೂಡಲೇ ಅಮಾನತುಗೊಳಿಸಿ ಶಿಸ್ತುಕ್ರಮಕೈಕೊಳ್ಳಬೇಕಾಗಿ ಆಗ್ರಹಿಸಿದರು.

ಈ ಸಂದರ್ಭದಲ್ಲಿ ಎಸ್.ವಿ. ಪಾಟೀಲ, ರಾಜು ಹಿಪ್ಪರಗಿ, ನಿಂಗನಗೌಡ ಸೋಲಾಪೂರ, ಸಂಜು ಹಿರೇಮಠ, ಸುಭಾಸ ನಾಯಕ, ಪೀರಬಾಶಾ ಗಚ್ಚಿನಮಹಲ, ರವಿ ಚವ್ಹಾಣ, ಸಂಜು ದೊಡಮನಿ, ಸುಜಾತಾ ಕಣಬೂರ, ಬಾಬು ಶಿರಣಗಾರ, ಮಲ್ಲು ತೊರವಿ, ದಿಲೀಪ ರಾಠೋಡ, ಸಂತೋಷ ರಾಠೋಡ ಮತ್ತಿತರರು ಉಪಸ್ಥಿತರಿದ್ದರು.


LEAVE A REPLY

Please enter your comment!
Please enter your name here