ಆಹಾರ ಸುರಕ್ಷತೆ: ಪರಿಶೀಲಿಸಿ ನೋಟಿಸ್ ಜಾರಿ

ರೈಸ್ ಅಂಗಡಿಗಳಲ್ಲಿ ಟೆಸ್ಟಿಂಗ್ ಪೌಡರ, ಆಹಾರದಲ್ಲಿ ಬೆರೆಸುತ್ತಿರುವ ಕಲರ್ಗಗಳ ಬಗ್ಗೆ ಪರಿಶೀಲನೆ ನಡೆಸಿದರು. ಕೆಲವೊಂದು ಅಂಗಡಿಗಳಿಗೆ ನೋಟ್ ಸಹ ನೀಡಿದರು.

0
81
ಆಹಾರ ಸುರಕ್ಷತೆ image

ಬಾಗಲಕೋಟೆ: ಆಹಾರ ಸುರಕ್ಷತೆ ಆಂದೋಲನ ಹಿನ್ನಲೆಯಲ್ಲಿ ಬಾಗಲಕೋಟೆ ನಗರಸಭೆ ವ್ಯಾಪ್ತಿಯಲ್ಲಿ ಬರುವ ಹೋಟೆಲ್, ರೆಸ್ಟೋರೆಂಟ್, ಖಾನಾವಳಿ ಹಾಗೂ ಬೀದಿಬದಿ ಎಗ್‍ರೈಸ್ ಅಂಗಡಿಗಳಿಗೆ ಜಿಲ್ಲಾ ಆಹಾರ ಸುರಕ್ಷತಾ ಪರಿಶೀಲನಾ ತಂಡ ದಾಳಿ ನಡೆಸಿ ಆಹಾರ ಸುರಕ್ಷತೆ ಬಗ್ಗೆ ಪರಿಶೀಲನೆ ನಡೆಸಿತು.

ಆಹಾರ ಸುರಕ್ಷತಾ ಅಧಿಕಾರಿ ರಾಜಶೇಖರ ಸಾಳಗುಂದ, ಬಸವರಾಜ ಮೊಳೆಗಾಂವಿ, ಇಮಾಮ ಹಸನ್ ಡೋನೂರ, ಶರಣು ರೇವಡಿ ಒಳಗೊಂಡ ತಂಡ ದಾಳಿ ನಡೆಸಿ ರೈಸ್ ಅಂಗಡಿಗಳಲ್ಲಿ ಟೆಸ್ಟಿಂಗ್ ಪೌಡರ, ಆಹಾರದಲ್ಲಿ ಬೆರೆಸುತ್ತಿರುವ ಕಲರ್ಗಗಳ ಬಗ್ಗೆ ಪರಿಶೀಲನೆ ನಡೆಸಿದರು. ಕೆಲವೊಂದು ಅಂಗಡಿಗಳಿಗೆ ನೋಟ್ ಸಹ ನೀಡಲಾಯಿತು. ಅಲ್ಲದೇ ವ್ಯಾಪಾಸ್ಥರಿಗೆ ಆಹಾರ ಸುರಕ್ಷತಾ ಮತ್ತು ಗುಣಮಟ್ಟ ಇಲಾಖೆ ಕುರಿತು ಜಾಗೃತಿ ಸಹ ಮೂಡಿಸಲಾಯಿತು.


ಇದನ್ನೂ ಓದಿ: ಬಸವಜಯಮೃತ್ಯುಂಜಯ ಸ್ವಾಮೀಜಿ ಪ್ರತಿಜ್ಞೆ : 2ಎ ಮೀಸಲಾತಿ ಹೋರಾಟ ಕೈ ಬಿಡುವುದಿಲ್ಲ

LEAVE A REPLY

Please enter your comment!
Please enter your name here