ವಿಜಯಪುರ: ರೈತರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ರೈತ ಭಾರತ ಪಕ್ಷ (ರಿ) ವತಿಯಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ರೈತ ಭಾರತ ಪಕ್ಷ

ಈ ಸಂದರ್ಭದಲ್ಲಿ ರೈತ ಭಾರತ ಪಕ್ಷದ ರಾಷ್ಟ್ರಾಧ್ಯಕ್ಷರಾದ ಮುತ್ತಪ್ಪ ಹೀರೆಕುಂಬಿ ಮಾತನಾಡಿ, ದಿನಾಂಕ 22-08-2024 ರಂದು ರೈತರ ಸಮಸ್ಯೆಗಳ ಬಗ್ಗೆ ಪಾದಯಾತ್ರೆ ಹಮ್ಮಿಕೊಳ್ಳಲಾಗುವುದು ಎಂದು ರೈತ ಭಾರತ ಪಕ್ಷ (ರಿ) ವತಿಯಿಂದ ವಿಜಯಪುರ ನಗರದ ಶ್ರೀ ಸಿದ್ದೇಶ್ವರ ದೇವಸ್ಥಾನದಿಂದ ಹುಬ್ಬಳ್ಳಿಯ ಹೆಸ್ಕಾಂ ನಿಗಮ ಕಚೇರಿಯವರಿಗೆ ಹೆಸ್ಕಾಂ ಸ್ವಚ್ಛತೆ ಅಭಿಯಾನ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದರು.
ಇದನ್ನೂ ಓದಿ: ತಳವಾರ: ಪರಿಶಿಷ್ಟ ಪಂಗಡದವರಿಗೆ ಪ್ರಮಾಣ ಪತ್ರ ವಿತರಿಸಿ
ರೈತರಿಗೆ ಕೃಷಿಯ ಸಲುವಾಗಿ ಶೀಘ್ರ ಸಂಪರ್ಕ ಯೋಜನೆಯನ್ನು ಜಾರಿ ಮಾಡುವ ಕುರಿತು ಮತ್ತು 2015 ರಲ್ಲಿ ತುಂಬಿದ ಫಲಾನುಭವಿಗಳಿಗೆ ಆರ್.ಆರ್ ಸಂಖ್ಯೆ ಹಾಗೂ ಮೂಲಭೂತ ಸೌಕರ್ಯ ನೀಡಬೇಕು. ರೈತರಿಗೆ 12 ಘಂಟೆ 3 ಫೇಸ್ ವಿದ್ಯುತ್ ಪೂರೈಸಬೇಕು ಮತ್ತು ರೈತರಿಗೆ ಸುಟ್ಟ ಟಿಸಿಗಳನ್ನು ಕೂಡಿಸುವ ವ್ಯವಸ್ಥೆಯಾಗಬೇಕು. ರೈತರ ತೋಟದ ಮನೆಗಳಿಗೆ ರಾತ್ರಿ ಹೊತ್ತಲ್ಲಿ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಸಿಂಗಲ್ ಫೇಸ್ ವಿದ್ಯುತ್ ಸಂಪರ್ಕ ನೀಡಬೇಕು. ರೈತರಿಗೆ ನೀಡಿದ ಸುಟ್ಟ ಟಿಸಿಗಳು ಕೇವಲ 15 ರಿಂದ ಒಂದು ತಿಂಗಳ ಒಳಗಡೆ ಮತ್ತೆ ಸುಡುತ್ತಿದ್ದು ಇದರ ಬಗ್ಗೆ ಕ್ರಮ ಜರುಗಿಸಬೇಕು. ಹೆಸ್ಕಾಂ ನಲ್ಲಿ ಕಾರ್ಯನಿರ್ವಹಿಸುತ್ತಿರುವ ಕೆಲವೊಂದು ಅಧಿಕಾರಿಗಳು ಕುರ್ಚಿಗಳನ್ನು ಖರೀದಿ ಮಾಡಿಕೊಂಡು ಬಂದಿದ್ದೇವೆ ಅಂತ ಹೇಳುತ್ತಿದ್ದಾರೆ ಇದರ ಬ್ಗಗೆ ಸ್ಪಷ್ಟನೆ ನೀಡಬೇಕು.
ಹೆಸ್ಕಾಂನಲ್ಲಿ ಹಲವಾರು ಕಾಮಗಾರಿಗಳು ಆ ವೈಜ್ಞಾನಿಕವಾಗುತ್ತಿದ್ದು ಬಹಳ ಭ್ರಷ್ಟಾಚಾರ ನಡೆಯುತ್ತಿದ್ದು ತನಿಖೆಯಾಗಬೇಕು. ಹಲವಾರು ರೈತರಿಗೆ ವೋಲ್ಟೇಜ್ ಬರದ ಕಾರಣ ರೈತರ ಮೋಟಾರ್ ಗಳು ಸುಡುತ್ತಿದ್ದು ವೋಲ್ಟೇಜ್ ಬರುವ ಹಾಗೆ ವ್ಯವಸ್ಥೆ ಮಾಡಬೇಕು. ಹೆಸ್ಕಾಂ ಕಂಪನಿ ಆನ್ ಲೈನ್ ನಲ್ಲಿ ನಡೆಯುತ್ತಿದ್ದು ಸರ್ವರ್ , ಇಂಟರ್ನೇಟ್ ಹಾಗೂ ನುರಿತ ಸಿಬ್ಬಂದಿಯನ್ನು ನೇಮಕ ಮಾಡಬೇಕು. ಆನ್ ಲೈನ್ ವ್ಯವಸ್ಥೆಯಿಂದ ಹೆಸ್ಕಾಂ ಕಂಪನಿ ಸಂಪೂರ್ಣವಾಗಿ ಹಾಳಾಗುತ್ತಿತ್ತು ಸಿಬ್ಬಂದಿಗೆ ಕಣ್ಣುಗಳು ಹೋಗುತ್ತಿದ್ದು, ಬಿಪಿ ಶುಗರ್ ಜಾಸ್ತಿ ಆಗುತ್ತಿದ್ದು ಮತ್ತು ಗ್ರಾಹಕರಿಗೆ ಕಿರಿಕಿರಿ ಜಾಸ್ತಿಯಾಗಿದೆ.
ಇದನ್ನೂ ಓದಿ: ವ್ಯಸನಮುಕ್ತ: ವ್ಯಸನಕ್ಕೊಳಗಾದವರಿಗೆ ಆತ್ಮಗೌರವದ ಸಂದೇಶ ಸಾರಿದ ಮಹನೀಯರು ಡಾ.ಮಹಾಂತ ಸ್ವಾಮಿಗಳು
ಕರ್ನಾಟಕದಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರಾಮ ವಿದ್ಯುತ್ ಪ್ರತಿನಿಧಿಗಳನ್ನು ಖಾಯಂ ಮಾಡಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಜನಪರ ಸಾಮಾಜಿಕ ಹೋರಾಟಗಾರರಾದ ಮಲ್ಲಿಕಾರ್ಜುನ ಬಿ.ಕೆಂಗನಾಳ ಮಾತನಾಡಿ, ರೈತ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಈ ಅಭಿಯಾನದಲ್ಲಿ ಭಾಗವಹಿಸಿ ಪಾದಯಾತ್ರೆಯನ್ನು ಯಶಸ್ವಿಗೊಳಿಸಬೇಕೆಂದು ವಿನಂತಿಸಿಕೊಂಡರು. ಈ ಸಂರ್ದಭದಲ್ಲಿ ಎಂ.ಎ. ಮಾಲಬಾವಡಿ, ಕೆ.ಎ. ಬನಹಟ್ಟಿ ಉಪಸ್ಥಿತರಿದ್ದರು.


















