ವಿಶ್ವ ಹೃದಯ ದಿನದ ಪ್ರಯುಕ್ತವಾಗಿ ” ಉಚಿತ ಹೃದಯ ತಪಾಸಣಾ ಶಿಬಿರ

0
121

ವಿಜಯಪುರ: ವಿಶ್ವ ಹೃದಯ ದಿನದ ಪ್ರಯುಕ್ತವಾಗಿ ” ಉಚಿತ ಹೃದಯ ತಪಾಸಣಾ ಶಿಬಿರ,, ಶ್ರೀ ಶಂಕರಲಿಂಗ ದೇವಸ್ಥಾನದ ಸಮುದಾಯ ಭವನದಲ್ಲಿ ಡಾ।ಗೌತಮ್ ಎಸ್ ವಗ್ಗರ್ ಒಆ ಆಒ (ಹೃದಯರೋಗ ತಜ್ಞರು) ಏಇಒ ಬಾಂಬೆ ಹಾಗೂ ಶ್ರೀ ವರ ದಾನೇಶ್ವರಿ ಮಹಿಳಾ ಮಂಡಳ ಇವರ ಸಹಯೋಗದೊಂದಿಗೆ ಉಚಿತ ಹೃದಯ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮವನ್ನು ಉದ್ದೇಶಿಸಿ ನಗರದ ಖ್ಯಾತ ಹೃದಯ ತಜ್ಞರಾದ ಡಾ ಗೌತಮ್ ವಗ್ಗರ್ ಮಾತನಾಡಿ ವಿಶ್ವ ಹೃದಯ ದಿನವು ಪ್ರಪಂಚದಾದ್ಯಂತ ಜನರಿಗೆ ಹೃದಯ ರೋಗ ಮತ್ತು ಪಾರ್ಶುವಾಯು ಸೇರಿದಂತೆ ಹೃದಯ ರಕ್ತನಾಳಗಳ ಕಾಯಿಲೆಗಳು ಪ್ರತಿವರ್ಷ 18.6 ಮಿಲಿಯನ್ ಜೀವಗಳನ್ನು ಬಲಿ ತೆಗೆದುಕೊಳ್ಳುವ ಪ್ರಮುಖ ಕಾರಣವಾಗಿದೆ ಮತ್ತು ಹೃದಯ ರಕ್ತನಾಳಗಳನ್ನು ತಡೆಗಟ್ಟಲು ಮತ್ತು ನಿಯಂತ್ರಿಸಲು ವ್ಯಕ್ತಿಗಳು ತೆಗೆದುಕೊಳ್ಳಬಹುದಾದ ಕ್ರಮಗಳನ್ನು ಎತ್ತಿ ತೋರಿಸುತ್ತದೆ. ತಂಬಾಕು ಬಳಕೆ ಅನಾರೋಗ್ಯಕರ ಆಹಾರ ಮತ್ತು ದೈಹಿಕ ನಿಷ್ಕ್ರಿಯತೆ ಗಳಂತಹ ಅಪಾಯಕಾರಿ ಅಂಶಗಳನ್ನು ನಿಯಂತ್ರಿಸುವ ಮೂಲಕ ಹೃದಯರೋಗ ಮತ್ತು ಪಾಶ್ರ್ವ ವಾಯುವಿನಿಂದ ಕನಿಷ್ಠ ಅಕಾಲಿಕ ಮರಣಗಳನ್ನು ತಪ್ಪಿಸಬಹುದು ಎಂದು ಹೇಳಿದರು

ಇದೇ ಸಂದರ್ಭದಲ್ಲಿ ಸಮಾಜದ ಅಧ್ಯಕ್ಷರಾದ ಶ್ರೀ ಮಹೇಶ ಹೇರಲಗಿ ಮಾತನಾಡಿ ಮನುಷ್ಯನ ಹೃದಯವನ್ನು ಕ್ರಿಯಾಶೀಲವಾಗಿ ಇಟ್ಟುಕೊಳ್ಳಲು ಶಾರೀರಿಕವಾಗಿ ದೇಹವನ್ನು ಪ್ರತಿನಿತ್ಯ ದಂಡಿಸುತಿರಬೆಕು ಸದಾ ಕ್ರಿಯಾಶೀಲವಾಗಿ ಚಟುವಟಿಕೆಗಳಿಂದ ಶರೀರ ಕೂಡಿರಬೇಕೆಂದು ಹೇಳಿದರು ಭಾಜಪ ಮುಖಂಡರಾದ ಶಿವರುದ್ರ ಬಾಗಲಕೋಟ ಮಾತನಾಡಿ ದೇಶದಲ್ಲಿ ಪ್ರತಿ 3 ನಿಮಿಷಕ್ಕೆ ಒಬ್ಬರು ಹೃದಯ ಸಂಬಂಧಿಸಿದ ಕಾಯಿಲೆಗಳಿಂದ ಜೀವನವನ್ನು ತ್ಯಜಿಸುತ್ತಿದ್ದಾರೆ ಹೃದಯ ಶುದ್ಧವಾಗಿರಲು ಪ್ರತಿ ನಿತ್ಯ ಧ್ಯಾನ ಯೋಗಾಸನ ವ್ಯಾಯಾಮ ವಾಯು ವಿಹಾರ ಇವುಗಳನ್ನು ಜೀವನದ ಪದ್ದತಿಯಾಗಿ ರೂಢಿಸಿಕೊಳ್ಳಬೇಕೆಂದು ಸಲಹೆ ನೀಡಿದರು

ಮಹಿಳಾ ಮಂಡಲದ ಅಧ್ಯಕ್ಷರಾದ ಸುವರ್ಣಾ ಕುರ್ಲೆ ಮಾತನಾಡಿ ಮಹಿಳಾ ಮಂಡಳವು 20 ವರ್ಷಗಳಿಂದ ಈ ರೀತಿ ಸಮಾಜದಲ್ಲಿ ಬಡವರಿಗೆ ನಿರ್ಗತಿಕರಿಗೆ ಆರೋಗ್ಯ ಶಿಬಿರ, ಸಮಾಜ ಸೇವೆಯಲ್ಲಿ ತೆರೆಮರೆಯಲ್ಲಿ ಕೆಲಸ ಮಾಡುತ್ತಿರುವ ಸಮಾಜ ಸೇವಕರಿಗೆ ಸನ್ಮಾನ ಗಳಿರಬಹುದು ಹಾಗೂ ಹತ್ತು ಹಲವು ಕಾರ್ಯಕ್ರಮಗಳನ್ನು ಆಯೋಜನೆ ಮಾಡುತ್ತಿದ್ದೇವೆ ಎಂದು ಹೇಳಿದರು.ವೇದಿಕೆಯ ಮೇಲೆ ಮಹಾದೇವಿ ಮಿರ್ಜಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಸುಮಾರು 250 ಹೆಚ್ಚು ಜನರಿಗೆ ಉಚಿತವಾಗಿ ಸಮಾಲೋಚನೆ ,ರಕ್ತದೊತ್ತಡ , ರಕ್ತ ಸಕ್ಕರೆ ಚೆಕಪ್ ,ಇ ಸಿ ಜಿ ನುರಿತ ವೈದ್ಯರ ಸಹಯೋಗದೊಂದಿಗೆ ಆರೋಗ್ಯ ತಪಾಸಣೆ ಜರುಗಿತು.ಗೀತಾ ಗಿಡವೀರ ನಿರೂಪಿಸಿ ಜಯಶ್ರೀ ಗುರುಬಸಣ್ಣವರ ಸ್ವಾಗತಿಸಿದರು ವಂದನಾರ್ಪಣೆಯನ್ನು ಭಾರತಿ ಗಿಡವೀರ ನಡೆಸಿಕೊಟ್ಟರು.ಈ ಸಂದರ್ಭದಲ್ಲಿ ಮಹಿಳಾ ಮಂಡಳದ ಅನೇಕ ಸದಸ್ಯರು ಹಿರಿಯರು ಉಪಸ್ಥಿತರಿದ್ದರು’.


ambedkar image

LEAVE A REPLY

Please enter your comment!
Please enter your name here