ಆಸ್ಪತ್ರೆಗೆ ಆಕ್ಸಿಜನ್ ಕಾನ್ಸಟ್ರೆಟರ್ ನೀಡಿದ ನ್ಯಾಯವಾದಿ ಶ್ರೀನಾಥ್ ಪೂಜಾರಿ

0
208
ನ್ಯಾಯವಾದಿ ಶ್ರೀನಾಥ್ ಪೂಜಾರಿ

ಕೋವಿಡ್-19 ಮಹಾಮಾರಿಯ ಹೊಡೆತಕ್ಕೆ ಕರ್ನಾಟಕ ರಾಜ್ಯದಲ್ಲಿ ಸಾವಿರಾರು ಸಾವು ನೋವುಗಳು ಸಂಭವಿಸಿದ್ದು ಅವುಗಳಲ್ಲಿ ಬಹುತೇಕ ಸಾವುಗಳು ಆಸ್ಪತ್ರೆ, ಬೆಡ್, ಆಕ್ಸಿಜನ್ ನಂತಹ ತುರ್ತು ಅಗತ್ಯಗಳ ಕೊರತೆಯಿಂದ ಸಂಭವಿಸಿರುವುದು ಸುಳ್ಳಲ್ಲ.

ಇಂತಹ ವಿಷಮ ಪರಿಸ್ಥಿತಿಯಲ್ಲಿ ಚಿತ್ರನಟ ಸೋನು ಸೂದ್ ರಿಂದ ಹಿಡಿದು ಸರ್ಕಾರಿ ಅಧಿಕಾರಿಗಳು, ಸಮಾಜ ಸೇವಕರು ತಮ್ಮ ಕೈಲಾದಷ್ಟು ಆಕ್ಸಿಜನ್ ಸಿಲಿಂಡರುಗಳು, ಫುಡ್ ಕಿಟ್ ಗಳನ್ನು ವಿತರಿಸಿ ಮಾನವೀಯತೆ ಮೆರೆದಿದ್ದಾರೆ, ಇದೀಗ ವಿಜಯಪುರ ನಗರದ ನ್ಯಾಯವಾದಿ, ಸಾಮಾಜಿಕ ಹೋರಾಟಗಾರರಾದ ಶ್ರಿನಾಥ ಪೂಜಾರಿಯವರು, ವಿಜಯಪುರ ಜಿಲ್ಲೆಯ ಕಲಕೇರಿಯಲ್ಲಿ ಕರೊನಾ ಸಂಕಷ್ಟ ಕಾಲದ ಸಹಾಯಕ್ಕೆ ನಿಂತ KCVT ಸ್ವಯಂ ಸೇವಕರಿಗೆ ಸುರಕ್ಷಾ ಕಿಟ್ ಹಾಗೂ ಕೆಸರಟ್ಟಿ ಗ್ರಾಮದಲ್ಲಿ ಬಡ ಜನರಿಗೆ ಅತ್ಯಂತ ಕಡಿಮೆ ವೆಚ್ಚದಲ್ಲಿ ವೈದ್ಯಕೀಯ ಸೇವೆ ಸಲ್ಲಿಸುತ್ತಿರುವ ಡಾ|ಅನಿಲ ರಾಠೋಡ ರವರಿಗೆ ಸುಮಾರು ಎರಡು ಲಕ್ಷ ಬೆಲೆ ಬಾಳುವ ಆಕ್ಸಿಜನ್ ಕಾನ್ಸಟ್ರೆಟರ್ ನೀಡುವ ಮೂಲಕ ತಮ್ಮ ಉದಾರತೆ ಮತ್ತು ಸಾಮಾಜಿಕ ಕಳಕಳಿಯನ್ನು ಮೆರೆದಿದ್ದಾರೆ, ಗ್ರಾಮೀಣ ಪ್ರದೇಶದಲ್ಲಿ ಆಕ್ಸಿಜನ್ ಕೊರತೆಯಿಂದ ಬಳಲುತ್ತಿರುವ ಜನರ ಆರೈಕೆಗಾಗಿ ಆಕ್ಸಿಜನ್ ಕಾನ್ಸ್ಟ್ರೇಟರ್ ಬಹು ಉಪಯುಕ್ತ ವಾಗಿದೆ.

ಈ ಭಾಗದಲ್ಲಿ ಆರೋಗ್ಯ ಸೇವೆಯಲ್ಲಿ ತೊಡಗಿಸಿಕೊಂಡಿರುವ ಎಲ್ಲ ಕಾರ್ಯಕರ್ತರೊಂದಿಗೆ ಶ್ರೀನಾಥ ಪೂಜಾರಿ ಜನಸಹಾಯ ಕೆಂದ್ರ ಹಾಗೂ KCVT ತಂಡ ನಿಮ್ಮ ಜೊತೆಗೆ ಇರುತ್ತದೆ ಎನ್ನುವ ಭರವಸೆ ನೀಡಿ. ಈ ಭಾಗದ ಜನಗಳು ಹೆದರದೆ ಏನೇ ಆಪತ್ತಿದ್ದರೂ ನಮ್ಮ ಹೆಲ್ಪ್ ಲಿಂಕ್ ಸಹಾಯವಾಣಿಗೆ ಕರೆ ಮಾಡಿದರೆ ನಿಮಗೆ ಈ ಸಂಕಷ್ಟದ ಸಂದರ್ಭದಲ್ಲಿ ಸಹಾಯ ದೊರೆಯಲಿದೆ ಎಂದು ಹೇಳುವ ಮೂಲಕ ಸ್ಥಳಿಯರಲ್ಲಿ ಆತ್ಮಸ್ಥೈರ್ಯ ತುಂಬಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ದೆವು ದೊಡ್ಡಮನಿ ಕಲಕೇರಿ ಸುತ್ತಮುತ್ತಲಿನ ಗ್ರಾಮಗಳ ಜನರು ಆರೋಗ್ಯ ಕಾಪಾಡುವುದು ನಮ್ಮೆಲ್ಲರ ಮಾನವೀಯ ಕರ್ತವ್ಯವಾಗಿದೆ ಎಂದರು, ಸಭೆಯಲ್ಲಿ ಫಾದರ್ ಟಿಯೊಲ್ ಹಾಗೂ ಕಲಕೇರಿ ಗ್ರಾಮ ಪಂಚಾಯತಿ ಸದಸ್ಯರಾದ ಅಮರೇಶ್ ದೇಸಾಯಿ ಇತರರು ಉಪಸ್ಥಿತರಿದ್ದರು.


ambedkar image

LEAVE A REPLY

Please enter your comment!
Please enter your name here