ಅಲ್ಪಸಂಖ್ಯಾತರ ಸಮುದಾಯದ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಂದ ಅರ್ಜಿ ಆಹ್ವಾನ

0
188

ವಿಜಯಪುರ :ಫೆ 6: 2020-21 ನೇ ಸಾಲಿಗೆ ವಿಜಯಪುರ ಉಪವಿಭಾಗದಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ ಮೆಟ್ರಿಕ್ ನಂತರ ಬಾಲಕ, ಬಾಲಕಿಯರ ವಸತಿ ನಿಲಯಕ್ಕೆ ಅಲ್ಪಸಂಖ್ಯಾತರ ಸಮುದಾಯದ ಮುಸ್ಲಿಂ, ಜೈನ್, ಕ್ರೈಸ್ತ, ಬೌದ್ಧ, ಪಾರ್ಸಿ ಮತ್ತು ಸಿಖ್ ಸಮುದಾಯಕ್ಕೆ ಶೇಕಡಾ 75 ರಷ್ಟು ಇತರೆ ಸಮುದಾಯದ ವಿದ್ಯಾರ್ಥಿಗಳಿಗೆ ಶೇಕಡಾ 25 ರಷ್ಟು ಪಿಯುಸಿ, ಡಿಗ್ರಿ, ನಸಿರ್ಂಗ್, ಐಟಿಐ, ಡಿಪ್ಲೋಮಾ,ಬಿ.ಇ, ಸ್ನಾತಕೋತ್ತರ ಪದವಿ ಮತ್ತು ಎಲ್.ಎಲ್.ಬಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿ/ನಿಯರಿಗೆ ಲಭ್ಯವಿರುವ ಸ್ಥಳಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.

ಅಲ್ಪಸಂಖ್ಯಾತರ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯ, ಭೈರವ ನಗರ, ವಿಜಯಪುರ, ಅಲ್ಪಸಂಖ್ಯಾತರ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯ,ಸಕಾಫ ರೋಜಾ, ವಿಜಯಪುರ, ಅಲ್ಪಸಂಖ್ಯಾತರ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯ, ಮುದ್ದೇಬಿಹಾಳ ಪಟ್ಟಣ, ಅಲ್ಪಸಂಖ್ಯಾತರ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯ, ಬಸವನಬಾಗೇವಾಡಿ ಪಟ್ಟಣ, ಅಲ್ಪಸಂಖ್ಯಾತರ ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯ, ಟೇಕಡೆ ಗಲ್ಲಿ, ಮನಗೂಳಿ ರೋಡ್ ವಿಜಯಪುರ, ಅಲ್ಪಸಂಖ್ಯಾತರ ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯ (ಮ ವಿ ವಿ) ವಿಜಯಪುರ ಆಗಿರುತ್ತದೆ ಎಂದು ವಿಜಯಪುರ ಉಪವಿಭಾಗ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ತಾಲ್ಲೂಕಾ ವಿಸ್ತರಣಾಧಿಕಾರಿಗಳು ತಿಳಿಸಿದ್ದಾರೆ.

ಈ ಮೇಲ್ಕಂಡ ವಸತಿ ನಿಲಯಗಳಿಗೆ ಅರ್ಜಿ ಸಲ್ಲಿಸುವ ಆಸಕ್ತಿಯುಳ್ಳ ವಿದ್ಯಾರ್ಥಿಗಳು ಈ ಕೆಳಕಂಡ ಸ್ಥಳಗಳಲ್ಲಿ ಅರ್ಜಿಯನ್ನು ಪಡೆದು ಭರ್ತಿ ಮಾಡಿ ತಾಲೂಕಿನ ಮಾಹಿತಿ ಕೇಂದ್ರಗಳಲ್ಲಿ ಅಥವಾ ತಾಲೂಕಿನ ವಸತಿ ನಿಲಯದ ನಿಲಯಪಾಲಕರ ವಿಸ್ತರಣಾಧಿಕಾರಿಗಳು, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ವಿಜಯಪುರ ಉಪವಿಭಾಗದ ಕಚೇರಿಗೆ ಅರ್ಜಿಗಳನ್ನು ಸಲ್ಲಿಸಲು ಕೊನೆಯ ದಿನಾಂಕ 18- 2-2021 ಆಗಿರುತ್ತದೆ.

ತಾಲೂಕು ಮಾಹಿತಿ ಕೇಂದ್ರ, ಮುದ್ದೇಬಿಹಾಳ ಬಸವೇಶ್ವರ ಸರ್ಕಲ್ ಹತ್ತಿರ ಮೋಮಿನ್ ಕಾಂಪ್ಲೆಕ್ಸ್, ಮುದ್ದೇಬಿಹಾಳ, ತಾಲೂಕು ಮಾಹಿತಿ ಕೇಂದ್ರ, ತಹಶೀಲ್ದಾರ್ ಕಚೇರಿ, ಬಸವನ ಬಾಗೇವಾಡಿ, ಜಿಲ್ಲಾ ಮಾಹಿತಿ ಕೇಂದ್ರ, ಮೌಲಾನಾ ಆಜಾದ್ ಭವನ, ಜಿಲ್ಲಾ ಪಂಚಾಯತ್ ರಸ್ತೆ, ಕನಕದಾಸ ಬಡಾವಣೆ, ವಿಜಯಪುರ ಇಲ್ಲಿ ಸಂಪರ್ಕಿಸಬಹುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ambedkar image

LEAVE A REPLY

Please enter your comment!
Please enter your name here