ಚೊಚ್ಚಲ ಕೃತಿ ಪ್ರಕಟಿಸಲು ಅರ್ಜಿ ಆಹ್ವಾನ

0
57

ವಿಜಯಪುರ :ಫೆ 6: ಕನ್ನಡ ಪುಸ್ತಕ ಪ್ರಾಧಿಕಾರದ ವತಿಯಿಂದ 2020ನೇ ಸಾಲಿನ ಯುವಬರಹಗಾರರ ಚೊಚ್ಚಲ ಕೃತಿಗಳನ್ನು ಪ್ರಕಟಿಸಲು ಪ್ರೋತ್ಸಾಹ ನೀಡುವ ಸಲುವಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಆಯ್ಕೆಯಾದ ಹಸ್ತಪ್ರತಿಗಳ ಪ್ರಕಟಣೆಗೆ 15000 ಪ್ರೋತ್ಸಾಹ ಧನ ನೀಡಲಾಗುವುದು, ಅರ್ಜಿದಾರರು 18 ರಿಂದ 40 ವರ್ಷ ವಯೋಮಿತಿಯವರಾಗಿರಬೇಕು. ಸ್ವ ವಿವರವುಳ್ಳ ಮನವಿಯೊಂದಿಗೆ ದೃಢೀಕೃತ ಎಸೆಸೆಲ್ಸಿ ಪ್ರಮಾಣ ಪತ್ರದ ಪ್ರತಿಯೊಂದು ಅಧಿಕೃತವಾದ, ದೃಢೀಕರಿಸಲ್ಪಟ್ಟ ಜನನ ದಾಖಲಾತಿ ಪ್ರಮಾಣ ಪತ್ರ ಪ್ರತಿಯನ್ನು ಸಲ್ಲಿಸಬೇಕು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.

ಅರ್ಜಿಗಳನ್ನು ಸಲ್ಲಿಸಲು ಕೊನೆಯ ದಿನಾಂಕ :20-2-2021 ಆಗಿದ್ದು, ವಿಳಾಸ : ಆಡಳಿತಾಧಿಕಾರಿ, ಕನ್ನಡ ಪುಸ್ತಕ ಪ್ರಾಧಿಕಾರ, ಕನ್ನಡ ಭವನ, ಜೆ.ಸಿ ರಸ್ತೆ, ಬೆಂಗಳೂರು. ವೆಬ್‍ಸೈಟ್ www.kannadapustakpradhikara.com ದೂರವಾಣಿ ಸಂಖ್ಯೆ: 080-22484516/22107704 ಗೆ ಸಂಪರ್ಕಿಸಲು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ


LEAVE A REPLY

Please enter your comment!
Please enter your name here